Shilpa Shetty: ಕರಾವಳಿಯ ಬೆಡಗಿ ಶಿಲ್ಪಾ ಶೆಟ್ಟಿ(Shilpa Shetty) ಬಾಲಿವುಡ್ನಲ್ಲಿ ಬಹುಬೇಡಿಕೆಯ ನಟಿಯಾಗಿ ತಮ್ಮದೇ ಆದ ಹೈಪ್ ಕ್ರಿಯೇಟ್ ಮಾಡಿಕೊಂಡಿದ್ದಾರೆ.ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಶಿಲ್ಪಾ ಶೆಟ್ಟಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುವುದು ಮಾಮೂಲಿ.
ಮಾಡೆಲ್ (Model)ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಮಂಗಳೂರು (Mangaluru)ಮೂಲದ ನಟಿ ಶಿಲ್ಪಾ ಶೆಟ್ಟಿ ‘ಬಾಜಿಗರ್’ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿ, ಆ ಬಳಿಕ ಹಿಂದಿ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಅನೇಕ ಚಲನಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬಾಲಿವುಡ್ ನಟಿ (Bollywood)ಶಿಲ್ಪಾ ಶೆಟ್ಟಿ ತಮ್ಮ ‘ಸುಖಿ’ ಚಿತ್ರದ ಪ್ರಚಾರದಲ್ಲಿ ತೊಡಗಿದ್ದು, ಈ ವೇಳೆ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಅನೇಕ ಜಗತ್ತಿಗೆ ಅರಿಯದ ಸಂಗತಿಗಳನ್ನು ಸಂದರ್ಶವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತಾಡಿದ ಶಿಲ್ಪಾ ಶೆಟ್ಟಿ, ನಾನು ನನ್ನ ತಾಯಿ ಗರ್ಭದಲ್ಲಿದ್ದ ಸಂದರ್ಭ ತಾಯಿ ಆರೋಗ್ಯದಲ್ಲಿ ಸಮಸ್ಯೆ ಎದುರಾಗಿ ನನ್ನ ತಾಯಿಗೆ ನಿರಂತರವಾಗಿ ರಕ್ತಸ್ರಾವವಾಗುತ್ತಿದ್ದ ಹಿನ್ನೆಲೆ ಗರ್ಭಪಾತ (Abortion)ಮಾಡಿಸುವಂತೆ ವೈದ್ಯರು ಸಲಹೆ ನೀಡಿದ್ದರು. ತಾಯಿಯ ಸ್ಥಿತಿ ಗಂಭೀರವಾದ ಹಿನ್ನೆಲೆ ಗರ್ಭಪಾತ ಅನಿವಾರ್ಯವೆಂದು ಎಲ್ಲರೂ ಅಂದುಕೊಂಡಿದ್ದರು. ಹೀಗಿದ್ದರೂ ನನ್ನ ತಾಯಿ ದೇವರ ಮೇಲೆ ಭಾರ ಹಾಕಿ ಗರ್ಭ ತೆಗೆಸಿರಲಿಲ್ಲ.
ವೈದ್ಯರು ಗರ್ಭಪಾತ ಮಾಡುವಂತೆ ಸೂಚಿಸಿದ್ದರು ಇಂತಹ ಸನ್ನಿವೇಶದಲ್ಲಿ ಹುಟ್ಟಿದ್ದೇನೆ ಎಂದು ಶಿಲ್ಪಾ ಹೇಳಿಕೊಂಡಿದ್ದಾರೆ. ನನ್ನ ಹುಟ್ಟಿನ ಹಿಂದೆ ಯಾವುದೋ ಬಲವಾದ ಉದ್ದೇಶವಿರಬೇಕು. ನನಗೆ ಇದು ಪುನರ್ಜನ್ಮದ ರೀತಿ ಎಂದು ಹೇಳಿರುವ ನಟಿ ಪ್ರತಿಯೊಬ್ಬರ ಜೀವನದಲ್ಲೂ ಹಲವು ಕಷ್ಟಗಳು ಎದುರಾದರೂ ಕೂಡ ನಾವು ಎಲ್ಲವನ್ನೂ ಸ್ಪೂರ್ತಿಯಾಗಿ ಸ್ವೀಕರಿಸಬೇಕು. ಬದುಕು ಯಾರಿಗೂ ಸುಲಭವಲ್ಲ ಎಂದು ನಟಿ ಹೇಳಿದ್ದಾರೆ.
