Home » Actress Trisha: ಎಐಎಡಿಎಂಕೆ ಮಾಜಿ ಕಾರ್ಯಕರ್ತ ಎ. ವಿ. ರಾಜುಗೆ ಮಾನನಷ್ಟ ನೋಟಿಸ್ ಕಳುಹಿಸಿದ ನಟಿ ತ್ರಿಶಾ

Actress Trisha: ಎಐಎಡಿಎಂಕೆ ಮಾಜಿ ಕಾರ್ಯಕರ್ತ ಎ. ವಿ. ರಾಜುಗೆ ಮಾನನಷ್ಟ ನೋಟಿಸ್ ಕಳುಹಿಸಿದ ನಟಿ ತ್ರಿಶಾ

0 comments

Actress Trisha: ನಟಿ ತ್ರಿಶಾ ಅವರ ಕುರಿತಾಗಿ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಾಜಿ ಎಐಎಡಿಎಂಕೆ ಕಾರ್ಯಕರ್ತ ಎ. ವಿ. ರಾಜು ಅವರಿಗೆ ತ್ರಿಷಾ ಬುಧವಾರದಂದು ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ.

ನಟಿ ತ್ರಿಷಾ ಅವರು ಸೋಮವಾರ ಪ್ರಕಟವಾದ ಸುದ್ದಿ ವರದಿಗಳು ಮತ್ತು ವೀಡಿಯೊ ತುಣುಕುಗಳಿಂದಾಗಿ, ನಾಲ್ಕು ದಿನಗಳಿಂದ ಹೆಚ್ಚು ಮಾನಸಿಕ ಯಾತನೆಗೆ ಒಳಗಾಗಿ ಮತ್ತು ತಮ್ಮ ಖ್ಯಾತಿಯನ್ನು ಕಳೆದುಕೊಂಡಿರುವುದಾಗಿ ತಿಳಿಸಿದ್ದು, ರಾಜು ಬೇಷರತ್ತಾಗಿ ಕ್ಷಮೆಯಾಚಿಸಬೇಕು ಮತ್ತು ಅದನ್ನು ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಬೇಕು ಎಂದು ನಟಿ ತ್ರಿಷಾ ಒತ್ತಾಯಿಸಿದ್ದಾರೆ. ಬೇಷರತ್ತಾದ ಕ್ಷಮೆಯಾಚಿಸುವಿಕೆಯನ್ನು ಇಂಗ್ಲಿಷ್ ಮತ್ತು ತಮಿಳು ದಿನಪತ್ರಿಕೆಗಳಲ್ಲಿ ಪ್ರಕಟಿಸಬೇಕು ಎಂದು ನೋಟಿಸ್ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ನೋಟಿಸ್ ಗೆ 24 ಗಂಟೆಗಳ ಒಳಗಾಗಿ ರಾಜು ಕ್ಷಮೆಯಾಚಿಸದೆ ಹೋದರೆ, ನಟನ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

 

You may also like

Leave a Comment