Innova Crysta: ಟೊಯೋಟಾ ಕಂಪನಿಯ ಇನ್ನೋವಾ ಕ್ರೈಸ್ಟಾ ಕಾರು ಎಂದರೆ ಹಲವರಿಗೆ ಅಚ್ಚುಮೆಚ್ಚು. ಅದರಲ್ಲೂ ರಾಜಕಾರಣಿಗಳು ಹಾಗೂ ದೊಡ್ಡ ದೊಡ್ಡ ಉದ್ಯಮಿಗಳ ಬಳಿಯಲ್ಲಿ ಅಂತೂ ಇದೇ ಕಾರು ಸಾಮಾನ್ಯವಾಗಿರುತ್ತದೆ. ಅದರಲ್ಲಿನ ಫ್ಯೂಚರ್ಸ್ ಹಾಗೂ ಅದರ ಹೊರ ನೋಟವೇ ಜನರನ್ನು ಅಟ್ರಾಕ್ಷನ್ ಮಾಡಲು ಕಾರಣ. ಕಾರ್ ಕೊಂಡರೆ ಈ ರೀತಿಯ ಕಾರನ್ನು ಕೊಳ್ಳಬೇಕು ಎಂಬುದು ಹಲವರ ಮಾತು ಕೂಡ ಆಗಿತ್ತು. ಬೇಡಿಕೆ ವಿಚಾರದಲ್ಲಿ ಎಂಪಿವಿ ಸೆಗ್ಮೆಂಟ್‌ನಲ್ಲಿ ಟೋಯೋಟಾ ಕ್ರೈಸ್ಟಾ ಕಾರಿಗೆ ಪೈಪೋಟಿಗೆ ನೀಡುವ ಕಾರು ಮಾರುಕಟ್ಟೆಲ್ಲಿ ಇಲ್ಲ. ಆದರೆ ಇದೀಗ ಈ ಇನ್ನೋವಾ ಕ್ರೈಸ್ಟಾ ಗುಡ್ ಬೈ ಹೇಳಲು ರೆಡಿಯಾಗಿ ನಿಂತಿದೆ.
ಹೌದು, ಭಾರತದಲ್ಲಿ ಟೋಯೋಟಾ ಇನ್ನೋವಾ ಕ್ರೈಸ್ಟಾ ಕಾರಿನ ಜನಪ್ರಿಯತೆ ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಈ ಇನ್ನೋವಾ ಕ್ರೈಸ್ಟಾ ಕಾರು 2027, ಮಾರ್ಚ್ 1 ರಿಂದ ಕ್ರೈಸ್ಟಾ ಕಾರು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. 2026ರಿಂದ ಉತ್ಪಾದನೆ ಹಂತ ಹಂತವಾಗಿ ಕಡಿತಗೊಳ್ಳಲಿದೆ. ಇಷ್ಟೇ ಅಲ್ಲ 2027ರ ಆರಂಭದಿಂದ ಬುಕಿಂಗ್ ಕೂಡ ಸ್ಥಗಿತಗೊಂಡು, 2027ರ ಮಾರ್ಚ್ ತಿಂಗಳಲ್ಲಿ ಸಂಪೂರ್ಣ ಉತ್ಪಾದನೆ ಸ್ಥಗಿತಗೊಳ್ಳಲಿದೆ.
ಅಂದಹಾಗೆ ಇನ್ನೋವಾ ಕಾರನ್ನು ಕ್ರೈಸ್ಟಾ ಕಾರಾಗಿ ಬಿಡುಗಡೆ ಮಾಡಿತ್ತು. ಭಾರತದಲ್ಲಿ 2016ರಲ್ಲಿ ಲಾಂಚ್ ಆಗಿತ್ತು. ಆಕರ್ಷಕ, ಆರಾಮದಾಯಕ ಪ್ರಯಾಣಕ್ಕಾಗಿ ಕ್ರೈಸ್ಟಾ ಕಾರು ಭಾರಿ ಜನಪ್ರಿಯತೆ ಪಡೆದುಕೊಂಡಿತ್ತು. 2025ರಲ್ಲಿ ಕ್ರೈಸ್ಟಾ 10 ವರ್ಷದ ಸಂಭ್ರಮವನ್ನು ಆಚರಿಸಿತ್ತು.
ಟೋಯೋಯಾ ಇನ್ನೋವಾ ಕ್ರೈಸ್ಟಾ ಕಾರು ಸ್ಥಗಿತಗೊಳ್ಳಲು ಮುಖ್ಯ ಕಾರಣ CAFE 3 ನಿಯಮ. ಹೌದು ಕಾರ್ಪೋರೇಟ್ ಎವರೇಜ್ ಫ್ಯೂಯೆಲ್ ಎಕಾನಮಿ ನಿಯಮ ಮುಂದಿನ ವರ್ಷದಲ್ಲಿ ಜಾರಿಯಾಗಲಿದೆ. ಇದು ಹಲವು ಕಾರುಗಳ ಮೇಲೆ ಪರಿಣಾಮ ಬೀರಲಿದೆ. ಪ್ರಮುಖವಾಗಿ ಉತ್ತಮ ಮೈಲೇಜ್ ಹಾಗೂ ಎಮಿಶನ್ ನಿಯಮ ಮತ್ತಷ್ಟು ಕಠಿಣವಾಗುತ್ತಿದೆ. ಕ್ರೈಸ್ಟಾ ಕಾರು 2.4 ಲೀಟರ್ ಡೀಸಲ್ ಎಂಜಿನ್ ಕಾರು. ಈ ನಿಮಯಮಗಳಿಗೆ ಅನುಸಾರ, ಎಂಪಿವಿ ಕಾರು ಉತ್ಪಾದನೆ ಕಷ್ಟ ಸಾಧ್ಯ. ಹೀಗಾಗಿ ಕ್ರೈಸ್ಟಾ ಕಾರು ಸ್ಥಗಿತಗೊಳ್ಳುತ್ತಿದೆ.
2025ರ ಅಂತ್ಯಕ್ಕೆ ಟೋಯೋಟಾ ಇನ್ನೋವಾ ಕ್ರೈಸ್ಟಾ ಕಾರು ಸ್ಥಗಿತಗೊಳಿಸಲು ಟೋಯೋಟಾ ಪ್ಲಾನ್ ಮಾಡಿತ್ತು. ಆದರೆ ಭಾರಿ ಬೇಡಿಕೆ, ಎಂಪಿವಿ ಮಾರಾಟದಲ್ಲೂ ನಂಬರ್ 1 ಆಗಿದ್ದ ಕಾರಣ ಸ್ಥಗಿತ ಪ್ಲಾನ್ ಮುಂದೂಡಿತ್ತು.
