Home » ಟೀಮ್ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಬಂಧನ!!!

ಟೀಮ್ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಬಂಧನ!!!

0 comments

ಟೀಮ್ ಇಂಡಿಯಾದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಭಾನುವಾರ ಬಂಧನಕ್ಕೊಳಗಾಗಿದ್ದಾರೆ. ವಿನೋದ್ ಕಾಂಬ್ಳಿ ಮದ್ಯ ಸೇವಿಸಿ ವಾಹನ ಚಲಾಯಿಸಿ ಅಪಘಾತವೆಸಗಿದ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ

ತಮ್ಮ ಕಾರಿನಿಂದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಪ್ರಕರಣದ ವೇಳೆ 50 ವರ್ಷದ ವಿನೋದ್ ಕಾಂಬ್ಳಿ ಪಾನಮತ್ತರಾಗಿದ್ದು ದೃಢವಾಗಿದೆ.

ಕುಡಿದು ವಾಹನ ಚಲಾಯಿಸಿದ್ದಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 185 ಅಡಿಯಲ್ಲಿ ( ಮೋಟಾರು ಕಾಯ್ದೆ) ಕಾಂಬ್ಳಿ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಚಾರಣೆಯ ನಂತರ ಕಾಂಬ್ಳಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಕಾಂಬ್ಳಿ ಅವರು ಕಾರಿಗೆ ಡಿಕ್ಕಿ ಹೊಡೆದು ನಂತರ ಕಾಂಪ್ಲೆಕ್ಸ್ ನ ಕಾವಲುಗಾರ ಮತ್ತು ಸ್ಥಳೀಯ ನಿವಾಸಿಗಳ ಜೊತೆಗೂ ಜಗಳವಾಡಿದ್ದರು ಎನ್ನಲಾಗಿದೆ.

You may also like

Leave a Comment