Extra marital affair : ಗಂಡ ಹೆಂಡತಿ ಅನೈತಿಕ ಸಂಬಂಧದ (Extra marital affair) ಸುಳಿಯಲ್ಲಿ ಬಿದ್ದರು ಅಂದ್ಕೊಳ್ಳಿ, ಆಮೇಲೆ ನಡೆಯೋದೆಲ್ಲ ರಾದ್ಧಾಂತ. ಆದರೆ ಇಲ್ಲೊಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ವಿಚಿತ್ರವಾಗಿದೆ, ಹೌದು, ಇಲ್ಲಿ ಹೆಂಡತಿ ತನ್ನ ಪಕ್ಕದ್ಮನೆಯ ಯುವಕನೊಂದಿಗೆ ದಿನಾ ಮಾತನಾಡುತ್ತಿದ್ದಳು. ಇದು ಗಂಡನಿಗೆ (Husband) ಇಷ್ಟವಿರಲಿಲ್ಲ. ಆತನೊಂದಿಗೆ ಮಾತನಾಡಬೇಡ ಎಂಬ ಎಚ್ಚರಿಕೆಯನ್ನು ಆಕೆ ದಿನಾ ಕೊಡುತ್ತಿದ್ದ. ಆದರೆ ಹೆಂಡತಿ ಇದಕ್ಕೆ ಕ್ಯಾರೇ ಎನ್ನಲಿಲ್ಲ. ಆದರೆ ಪತಿ ಆಕೆಗೆ ಬೈಯುತ್ತಲೇ ಇದ್ದ. ಗಂಡನ ಈ ಬೈಗುಳದಿಂದ ಬೇಸರಗೊಂಡ ಪತ್ನಿ (Wife) ಏನು ಮಾಡಿದಳೆಂದರೆ ಮಧ್ಯರಾತ್ರಿ ತನ್ನ ಗಂಡನ ಜನನಾಂಗದ(Genital) ಮೇಲೆಯೇ ಕುದಿಯುವ ಎಣ್ಣೆಯನ್ನು ಸುರಿದಿದ್ದಾಳೆ. ಈ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.
ಪಕ್ಕದ ಮನೆಯ ಯುವಕನೊಂದಿಗೆ ಈಕೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದು, ಇದಕ್ಕೆ ಬುದ್ಧಿ ಹೇಳಿದ ಗಂಡನಿಗೇ ರಾತ್ರಿ ಸಮಯದಲ್ಲಿ ಗಂಡ ಮಲಗಿದ್ದಾಗ ಕೊತ ಕೊತ ಕುದಿಯುವ ಎಣ್ಣೆಯನ್ನೇ ಆತನ ಗುಪ್ತಾಂಗಕ್ಕೆ ಸುರಿದಿದ್ದಾಳೆ. ಪತಿಯ ಹೆಸರು ಸುನಿಲ್ ಎಂಬುದಾಗಿದ್ದು, ಹೆಂಡತಿಯ ಈ ಕೃತ್ಯದಿಂದ ಆತ ತೀವ್ರವಾಗಿ ಗಾಯಗೊಂಡಿದ್ದಾನೆ. ಸುನೀಲ್ ಕುಮಾರ್ ಧಾಕಡ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಈತನ ಪತ್ನಿ ಭಾವನಾ ಎಂಬಾಕೆಯೇ ಈ ಕೃತ್ಯ ಎಸಗಿದವಳು. ಇವರಿಬ್ಬರೂ ಮಾಧವಿ ನಗರದಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ.
ಪಕ್ಕದ ಮನೆಯ ಮಹಿಳೆಯೊಬ್ಬಳು ಸುನೀಲ್ ಜೊತೆ ನಿಮ್ಮ ಹೆಂಡತಿ ನೀವು ಕೆಲಸಕ್ಕೆ ಹೋದ ನಂತರ ಪಕ್ಕದ್ಮನೆ ಹುಡುಗನೊಂದಿಗೆ ತುಂಬಾ ಮಾತನಾಡುತ್ತಾಳೆ ಎಂದು ದೂರು ನೀಡಿದ್ದರು. ಈ ಬಗ್ಗೆ ಗಂಡ ಕೇಳಿದಾಗ, ಆಕೆ ಇಲ್ಲ ಎಂದು ಉತ್ತರ ಹೇಳಿದ್ದಳು. ಆದರೆ ಇತ್ತೀಚೆಗೆ ಸುನೀಲ್ ಮನೆಗೆ ಬಂದಾಗ ಭಾವನಾ ಮತ್ತದೇ ಯುವಕನೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದು, ಕೋಪಗೊಂಡ ಗಂಡ ಎಚ್ಚರಿಗೆ ನೀಡಿದ್ದರೂ, ಆಕೆ ತನ್ನ ಛಾಳಿ ಬಿಟ್ಟಿಲ್ಲ. ಇದರಿಂದ ಬೇಸತ್ತು ಹೋದ ಗಂಡ ಆಕೆಯ ಮೊಬೈಲ್ ಕಸಿದುಕೊಂಡಿದ್ದ. ಇದರಿಂದ ಸಿಟ್ಟಿಗೆದ್ದ ಹೆಂಡತಿ ಕಾದು ಕುಳಿತು ರಾತ್ರಿ ಸುಮಾರು ಎರಡು ಗಂಟೆಗೆ ತನ್ನ ಗಂಡ ಗಾಢ ನಿದ್ದೆಯಲ್ಲಿರುವಾಗ ಬಿಸಿ ಎಣ್ಣೆ ತಗೊಂಡು ಬಂದು ಆತನ ಗುಪ್ತಾಂಗಕ್ಕೆ ಸುರಿದಿದ್ದಾಳೆ. ಇದರಿಂದ ಸುನೀಲ್ ನ ದೇಹ ಶೇ.70ರಷ್ಟು ಸುಟ್ಟು ಹೋಗಿದೆ. ಈ ಘಟನೆಯ ನಂತರ ಹೆಂಡತಿ ಮನೆಯಿಂದ ಪರಾರಿಯಾಗಿದ್ದಾಳೆ.
ತೀವ್ರವಾಗಿ ಗಾಯಗೊಂಡಿದ್ದ ಸುನೀಲ್ ಸಹಾಯಕ್ಕಾಗಿ ಕಿರುಚಾಡಿದ್ದಾನೆ. ಈತನ ಧ್ವನಿ ಕೇಳಿದ ಸ್ಥಳೀಯರು ಕೂಡಲೇ ಬಂದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪತ್ನಿ ವಿರುದ್ಧ ಈಗ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಇದನ್ನೂ ಓದಿ: Bigg Boss OTT 2: ನೀಲಿಚಿತ್ರ ತಾರೆ ʼಮಿಯಾ ಖಲೀಫಾ…ಈ ಬಾರಿಯ ಬಿಗ್‌ಬಾಸ್ ಒಟಿಟಿಯಲ್ಲಿ!
