Home » ಭಾರತದಲ್ಲಿ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಇಳಿಮುಖ

ಭಾರತದಲ್ಲಿ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಇಳಿಮುಖ

by Praveen Chennavara
0 comments

ಭಾರತಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್‌ನ ಬಳಕೆದಾರರಲ್ಲಿ ಗರಿಷ್ಠ ಪ್ರಮಾಣದಲ್ಲಿ ಇಳಿಮುಖವಾಗಿದೆ. ಹೆಚ್ಚುತ್ತಿರುವ ಮೊಬೈಲ್ ಡೇಟಾ ವೆಚ್ಚ, ಮಹಿಳೆಯರ ವಿರುದ್ಧ ಅವಹೇಳನಕಾರಿ ಟೀಕೆ, ಅಶ್ಲೀಲ ವಿಡಿಯೋಗಳು ಪ್ರಧಾನ ಕಾರಣವಾಗಿದೆ ಎಂದು ಫೆ.2ರಂದು ಪ್ರಕಟವಾಗಿದ್ದ ತ್ರೈಮಾಸಿಕ ವರದಿಯಲ್ಲಿ ಈ ಅಂಶ ಉಲ್ಲೇಖಗೊಂಡಿದೆ. ಮಟಾ ಮಾಲೀಕತ್ವದ ಫೇಸ್‌ ಬುಕ್‌ನಲ್ಲಿಯೂ ಕೂಡ ಪುರುಷರದ್ದೇ ಪಾರಮ್ಯ, ಹೀಗಾಗಿ ಮಹಿಳೆಯರು ತಮ್ಮ ಸುರಕ್ಷತೆಗೆ ಅದರಿಂದ ಧಕ್ಕೆ ಉಂಟಾಗುತ್ತದೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳ ಉದ್ಯೋಗಿಗಳ ಸಂಘಟನೆ ನಡೆಸಿದ ಮತ್ತೊಂದು ವರದಿಯಲ್ಲೂ ಪ್ರಸ್ತಾಪಗೊಂಡಿದೆ. ಭಾರತದಲ್ಲಿ ಮಹಿಳೆಯರನ್ನು ಹೊರತುಪಡಿಸಿ ಮೆಟಾ ಮಾಲೀಕತ್ವದ ಫೇಸ್‌ ಬುಕ್ ತನ್ನ ಅಸ್ತಿತ್ವ ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಡಲಾಗಿದೆ. ಕಳೆದ ವರ್ಷದಿಂದಲೇ ಭಾರತದಲ್ಲಿ ಜಾಲತಾಣದ ಫಾಲೋವರ್ಸ್‌ಗಳ ಸಂಖ್ಯೆ ಇಳಿಮುಖವಾಗಿತ್ತು.

You may also like

Leave a Comment