Home » ಪ್ರತಿಷ್ಠಿತ ಮಠದ ಸ್ವಾಮೀಜಿಯಿಂದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ!! ಸಂತ್ರಸ್ತೆ ಬಿಚ್ಚಿಟ್ಟಲು ಕಪಟ ಸ್ವಾಮಿಯ ಪಲ್ಲಂಗದಾಟ!!

ಪ್ರತಿಷ್ಠಿತ ಮಠದ ಸ್ವಾಮೀಜಿಯಿಂದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ!! ಸಂತ್ರಸ್ತೆ ಬಿಚ್ಚಿಟ್ಟಲು ಕಪಟ ಸ್ವಾಮಿಯ ಪಲ್ಲಂಗದಾಟ!!

0 comments

ಮಠವೊಂದರ ಸ್ವಾಮೀಜಿಯಿಂದ ವಿದ್ಯಾರ್ಥಿನಿಯರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ಗಂಭೀರ ಆರೋಪವೊಂದು ಕೇಳಿಬಂದಿದ್ದು, ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿನಿ ಸಾಂತ್ವನ ಕೇಂದ್ರದಲ್ಲಿ ವಿಷಯ ಬಹಿರಂಗಪಡಿಸಿದ್ದಾಳೆ.

ಮಠದ ವತಿಯಿಂದ ಇರುವ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿದ್ದೂ, ಸರದಿಯಂತೆ ವಿದ್ಯಾರ್ಥಿನಿಯರು ಹೋಗಬೇಕು. ಒಂದುವೇಳೆ ಒಪ್ಪದೇ ನಿರಾಕರಿಸಿದಾಗ ಹಾಸ್ಟೆಲ್ ಸಿಬ್ಬಂದಿಗಳು ಗದರಿಸಿ, ಬೆದರಿಸಿ ಬಲವಂತವಾಗಿ ಕಳುಹಿಸಿಕೊಡುತ್ತಿದ್ದರು ಎಂದು ದೂರಲಾಗಿದೆ.

ಸ್ವಾಮೀಜಿಯ ಬಳಿಗೆ ಬರುವ ವಿದ್ಯಾರ್ಥಿನಿಯರನ್ನು ಹಣ್ಣು ಹಾಗೂ ಇನ್ನಿತರ ಸಿಹಿ ತಿನಿಸುಗಳನ್ನು ಕೊಟ್ಟು ಪುಸಲಾಯಿಸಿ ದೌರ್ಜನ್ಯ ನಡೆಸಲಾಗುತ್ತದೆ ಎನ್ನಲಾಗಿದ್ದು,ಮನೆಯವರಿಗೆ ಸಹಾಯ ಮಾಡುವ ಆಸೆ ಹುಟ್ಟಿಸಿ ಅತ್ಯಾಚಾರ ನಡೆಸಲಾಗುತ್ತದೆ ಎಂದು ದೂರಲಾಗಿದೆ.

ಸದ್ಯ ಮಠದಿಂದ ಮರಳಿ ಬಂದ ವಿದ್ಯಾರ್ಥಿನಿಯೋರ್ವಳು ಸಾಂತ್ವನ ಕೇಂದ್ರಕ್ಕೆ ತೆರಳಿ ನಡೆದ ವಿಚಾರವನ್ನು ಬಯಲು ಮಾಡಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಕಪಟ ಸ್ವಾಮೀಜಿಯ ಬಣ್ಣ ಬಟಾ ಬಯಲಾಗಲಿದೆ.

You may also like

Leave a Comment