Home » ಗಾಳ ಹಾಕಿದ್ದು ಮೀನಿಗೆ, ಆದರೆ ಗಾಳಕ್ಕೆ ಬಿದ್ದದ್ದು ಮಾತ್ರ ಮೊಸಳೆ ಮರಿ !!

ಗಾಳ ಹಾಕಿದ್ದು ಮೀನಿಗೆ, ಆದರೆ ಗಾಳಕ್ಕೆ ಬಿದ್ದದ್ದು ಮಾತ್ರ ಮೊಸಳೆ ಮರಿ !!

0 comments

ನದಿಯಲ್ಲಿ ಮೀನಿಗೆ ಗಾಳ ಹಾಕುವುದು ಹಲವರ ಹವ್ಯಾಸ. ಹೀಗೆ ನದಿಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿಯ ಗಾಳಕ್ಕೆ ಮೀನಿನ ಬದಲು ಮೊಸಳೆ ಮರಿ ಬಿದ್ದಿರುವ ಘಟನೆ ಶಿವಮೊಗ್ಗ ಸಮೀಪದ ಪಿಳ್ಳಂಗೆರೆ ಸಮೀಪ ತುಂಗಾ ನದಿಯಲ್ಲಿ ನಡೆದಿದೆ.

ಪಿಳ್ಳಂಗೆರೆಯ ಲಕ್ಷ್ಮಿನಾರಾಯಣ ಸ್ವಾಮಿ ದೇವಸ್ಥಾನದ ಹಿಂಭಾಗದ ತುಂಗಾ ನದಿಯಲ್ಲಿ ರಶೀದ್ ಅವರು ಮೀನು ಹಿಡಿಯಲು ತೆರಳಿದ್ದಾರೆ. ಈ ವೇಳೆ ಮೀನು ಹಿಡಿಯಲು ಗಾಳ ಹಾಕಿದ್ದ ರಶೀದ್ ಅವರಿಗೆ ಮೀನಿನ ಬದಲು ಮೊಸಳೆ ಮರಿ ಸಿಕ್ಕಿದೆ.

ದೇವಸ್ಥಾನದ ಹಿಂಭಾಗದಲ್ಲಿ ಇರುವ ನದಿಗೆ ನೀರು ಕುಡಿಯಲು ಜಾನುವಾರುಗಳು ಬರುತ್ತವೆ. ಅಲ್ಲದೇ ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಗ್ರಾಮಸ್ಥರು ಕೈ, ಕಾಲು ತೊಳೆಯಲು ನದಿಗೆ ಇಳಿಯುತ್ತಾರೆ. ಹೀಗಾಗಿ ಈ ಭಾಗದಲ್ಲಿ ಮೊಸಳೆ ಮರಿ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಮೊಸಳೆ ಮರಿ ಪತ್ತೆಯಾಗಿರುವುದರಿಂದ ಈ ಭಾಗದಲ್ಲಿ ದೊಡ್ಡ ಮೊಸಳೆಯು ಇರಬಹುದು ಎಂಬ ಅನುಮಾನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

You may also like

Leave a Comment