Free Current: ಕಾಂಗ್ರೆಸ್ (congress) ಸರ್ಕಾರ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಜಾರಿಗೆ ತರುವುದಾಗಿ ಘೋಷಿಸಿತ್ತು. ಅಂತೆಯೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಘೋಷಿಸಿದಂತೆ ನಿನ್ನೆ ಕೆಲವು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ.
ಪಂಚ ಗ್ಯಾರಂಟಿಗಳ ಪೈಕಿ ತಕ್ಷಣಕ್ಕೆ ಎರಡು ಗ್ಯಾರಂಟಿಗಳನ್ನು ನೀಡಲು (Congress Guarantee) ಕಾಂಗ್ರೆಸ್ ನಿರ್ಧರಿಸಿದೆ.
ಗೃಹಜ್ಯೋತಿ ಯೋಜನೆಯಡಿ ಜುಲೈ ತಿಂಗಳಿನಿಂದ 200 ಯೂನಿಟ್ ತನಕ ಉಚಿತ ವಿದ್ಯುತ್ (Free Current) ಇರಲಿದೆ. ಈ ಬಗ್ಗೆ ಜೂನ್ 2 ರಂದು ರಾಜ್ಯದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದು ಘೋಷಣೆ ಮಾಡಲಾಗಿದೆ. ಇದೀಗ ಈ ಘೋಷಣೆ ಬೆನ್ನಲ್ಲೆ ರಾಜ್ಯ ಸರ್ಕಾರ ಜನರಿಗೆ ಶಾಕ್ ನೀಡಿದೆ. 200 ಯುನಿಟ್ ಉಚಿತ ಘೋಷಣೆ ಬೆನ್ನಲ್ಲೆ ಸರ್ಕಾರ ಯೂನಿಟ್ ದರ ಏರಿಸಿದೆ.
ಆದಾಯದ ಕೊರತೆ ಮತ್ತು ನಷ್ಟವನ್ನು ಸರಿದೂಗಿಸುವ ಸಲುವಾಗಿ
ಪ್ರತಿ ಯೂನಿಟ್ ದರವನ್ನು ಏರಿಸಿ ಇಂಧನ ಇಲಾಖೆ ಆದೇಶ ಹೊರಡಿಸಿದೆ. ಈ ಆದೇಶವು ಎಲ್ಲಾ ಎಸ್ಕಾಮ್‌ಗಳಿಗೆ ಅನ್ವಯಿಸುತ್ತದೆ. ಇನ್ನು ಹೆಚ್ಚಾದ ಯುನಿಟ್ ದರ ಈ ಕೆಳಗಿನಂತಿದೆ.
ಆದೇಶದ ಪ್ರಕಾರ, ಬೆಸ್ಕಾಂ ಗ್ರಾಹಕರು ಜುಲೈ 1 ರಿಂದ ಸೆಪ್ಟೆಂಬರ್ ವರೆಗೆ ಪ್ರತಿ ಯೂನಿಟ್‌ಗೆ 51 ಪೈಸೆ ಮತ್ತು ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್ 50 ಪೈಸೆ ಹೆಚ್ಚು ಪಾವತಿಸಬೇಕು. ಇಂಧನ ಹೊಂದಾಣಿಕೆ ವೆಚ್ಚದಲ್ಲಿ ಜುಲೈ 1 ರಿಂದ ಡಿಸೆಂಬರ್ 31, 2023 ರವರೆಗೆ ಬದಲಾವಣೆ ಇರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.
ಮೆಸ್ಕಾಂ (ಮಂಗಳೂರು) ಗ್ರಾಹಕರು ಜುಲೈ 1 ರಿಂದ ಸೆಪ್ಟೆಂಬರ್ ವರೆಗೆ ಪ್ರತಿ ಯೂನಿಟ್‌ಗೆ 47 ಪೈಸೆ ಹೆಚ್ಚು ಪಾವತಿಸಬೇಕಾಗುತ್ತದೆ. ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್‌ಗೆ 46 ಪೈಸೆ ಹೆಚ್ಚು ಪಾವತಿ ಮಾಡಬೇಕು. ಹೆಸ್ಕಾಂ (ಹುಬ್ಬಳ್ಳಿ-ಧಾರವಾಡ) ಗ್ರಾಹಕರು ಜುಲೈ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್‌ಗೆ 50 ಪೈಸೆ ಹೆಚ್ಚು ಪಾವತಿಸಬೇಕು.
ಗೆಸ್ಕಾಂ (ಕಲಬುರಗಿ) ಗ್ರಾಹಕರು ಜುಲೈ 1 ರಿಂದ ಸೆಪ್ಟೆಂಬರ್ ವರೆಗೆ ಪ್ರತಿ ಯೂನಿಟ್‌ಗೆ 34 ಪೈಸೆ ಮತ್ತು ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್‌ಗೆ 33 ಪೈಸೆ ಹೆಚ್ಚು ಪಾವತಿಸಬೇಕಾಗುತ್ತದೆ. ಸೆಸ್ಕಾಂ (ಮೈಸೂರು) ಗ್ರಾಹಕರು ಜುಲೈ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್‌ಗೆ 41 ಪೈಸೆ ಹೆಚ್ಚು ಪಾವತಿಸಬೇಕು.
