Home » Gold Purchase Cashback: ಫೋನ್ ಪೇ ಬಳಕೆದಾರರಿಗೆ ಬಂಪರ್ ಆಫರ್- 1,000 ರೂ ಮೌಲ್ಯದ ಚಿನ್ನ ಖರೀದಿಸಿದ್ರೆ ನಿಮಗೆ ಸಿಗುತ್ತೆ 3,000 !!

Gold Purchase Cashback: ಫೋನ್ ಪೇ ಬಳಕೆದಾರರಿಗೆ ಬಂಪರ್ ಆಫರ್- 1,000 ರೂ ಮೌಲ್ಯದ ಚಿನ್ನ ಖರೀದಿಸಿದ್ರೆ ನಿಮಗೆ ಸಿಗುತ್ತೆ 3,000 !!

1 comment
Gold Purchase Cashback

Gold Purchase Cashback: ಚಿನ್ನ ಖರೀದಿಗೆ ಇದೇ ಸುವರ್ಣ ಅವಕಾಶ. ಮುಖ್ಯವಾಗಿ ಇಡೀ ದೇಶವೇ ದೀಪಾವಳಿ ಹಬ್ಬದ ಕಾತುರದಲ್ಲಿ ಇರುವಾಗ ಇನ್ನೊಂದು ಗುಡ್ ನ್ಯೂಸ್ ಇದೆ. ಹೌದು, ದೀಪಾವಳಿ ಪ್ರಯುಕ್ತ ಅದ್ಭುತ ಉಡುಗೊರೆ ನಿಮ್ಮದಾಗಿಸಿಕೊಳ್ಳಬಹುದು.

ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಫೋನ್‌ಪೇ 24 ಕ್ಯಾರೆಟ್ ಚಿನ್ನದ ಖರೀದಿ ಮೇಲೆ ಕ್ಯಾಶ್‌ಬ್ಯಾಕ್ ಘೋಷಣೆ ಮಾಡಿದೆ. ನೀವು ಫೋನ್‌ಪೇನಿಂದ ಕನಿಷ್ಟ 1000 ರೂಪಾಯಿ ಮೌಲ್ಯದ ಚಿನ್ನ ಖರೀದಿ ಮಾಡುವ ಗ್ರಾಹಕರು 3000 ರೂಪಾಯಿಗಳವರೆಗೆ ಗ್ಯಾರಂಟಿ ಕ್ಯಾಶ್ಬ್ಯಾಕ್ (Gold Purchase Cashback) ಪಡೆಯಬಹುದಾಗಿದೆ.

ನವೆಂಬರ್ 9ರಿಂದ 12ರವರೆಗೆ ನೀವು ಕನಿಷ್ಟ 1 ಸಾವಿರ ರೂಪಾಯಿ ಮೌಲ್ಯದ ಡಿಜಿಟಲ್ ಚಿನ್ನವನ್ನು ಖರೀದಿ ಮಾಡಬಹುದಾಗಿದೆ. ಪ್ರತಿ ಬಾರಿ ನೀವು ಚಿನ್ನ ಖರೀದಿ ಮಾಡಿದಾಗಲೂ ನಿಮಗೆ ಈ ಆಫರ್ ಬಳಕೆ ಮಾಡುವ ಅವಕಾಶ ಪಡೆದುಕೊಳ್ಳಲಿದ್ದೀರಿ. ಅಲ್ಲದೇ ಬ್ಯಾಂಕ್ ದರ್ಜೆಯ ಲಾಕರ್‌ಗಳು ಐದು ವರ್ಷಗಳವರೆಗೆ ಉಚಿತವಾಗಿ ಇರಲಿದೆ.

PhonePe ನಲ್ಲಿ ಚಿನ್ನವನ್ನು ಖರೀದಿಸುವಾಗ ಈ ವಿಶೇಷ ಕ್ಯಾಶ್‌ ಬ್ಯಾಕ್ ಕೊಡುಗೆಯನ್ನು ಪಡೆಯುವ ವಿಧಾನ ಇಲ್ಲಿದೆ : :

ಫೋನ್‌ಪೇ ಆ್ಯಪ್‌ನ ಹೋಮ್‌ ಪೇಜ್‌ನಲ್ಲಿರುವ ವೆಲ್ತ್ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ವೆಲ್ತ್ ಪರದೆಯ ಮೇಲೆ ಇರುವ ಗೋಲ್ಡ್ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ಬೈ ವನ್ ಟೈಂ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ಇಲ್ಲಿ ಬೈ ಇನ್ ರುಪೀಸ್ ಆಯ್ಕೆಯನ್ನು ಕ್ಲಿಕ್ ಮಾಡಿ, ಹಾಗೂ ಇಲ್ಲಿ ನೀವು ಕನಿಷ್ಟ 1000 ರೂಪಾಯಿಯನ್ನು ವಿನಿಯೋಗಿಸಲೇಬೇಕು. ನಂತರ ನಿಮ್ಮ ಪೇಮೆಂಟ್ ಪ್ರಕ್ರಿಯೆ ಪೂರ್ಣಗೊಳಿಸಿ.

ಈ ರೀತಿ ಝೀರೋ ಮೇಕಿಂಗ್ ಚಾರ್ಜಸ್ ಮೂಲಕ ನೀವು 24 ಕ್ಯಾರಟ್ ಚಿನ್ನವನ್ನು ಖರೀದಿ ಮಾಡಬಹುದಾಗಿದೆ. ಹಾಗೂ ಈ ಪೇಮೆಂಟ್ ಬಳಿಕ ನೀವು ಕ್ಯಾಶ್ ಬ್ಯಾಕ್ ಸೌಕರ್ಯ ಪಡೆಯಬಹುದಾಗಿದೆ.

 

ಇದನ್ನು ಓದಿ: Pan Card: ಮಹಿಳೆಯರೇ ‘ಪಾನ್ ಕಾರ್ಡ್’ನಲ್ಲಿ ಗಂಡನ ಹೆಸರು ಸೇರಿಸಲು ಹೀಗೆ ಮಾಡಿ !!

You may also like

Leave a Comment