Home » Golden Star Ganesh: ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಬಂಡೀಪುರದ ಕಾಡಿನಲ್ಲಿ ಮನೆ ಕಟ್ಟಲು ಅನುಮತಿ ನೀಡಿದ ಹೈಕೋರ್ಟ್‌!! ಆದರೆ ಕಂಡೀಷನ್ಸ್‌ ಅಪ್ಲೈ!!!

Golden Star Ganesh: ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಬಂಡೀಪುರದ ಕಾಡಿನಲ್ಲಿ ಮನೆ ಕಟ್ಟಲು ಅನುಮತಿ ನೀಡಿದ ಹೈಕೋರ್ಟ್‌!! ಆದರೆ ಕಂಡೀಷನ್ಸ್‌ ಅಪ್ಲೈ!!!

by Mallika
0 comments

ಚಿತ್ರನಟ ಗಣೇಶ್‌ (Golden Star Ganesh) ಅವರಿಗೆ ಎದುರಾಗಿದ್ದ ಅರಣ್ಯ ಇಲಾಖೆಯ (Forest Department) ಆಕ್ಷೇಪಕ್ಕೆ ತಡೆ ದೊರೆತಿದೆ. ಬಂಡೀಪುರದ ಸೂಕ್ಷ್ಮ ಪರಿಸರ ವಲಯದಲ್ಲಿ (Bandipur Ecological area) ಬರುವ ಕುಂದುಕೆರೆ ವ್ಯಾಪ್ತಿಯ ಜಕ್ಕಳಿ ಗ್ರಾಮದಲ್ಲಿ ಮನೆ ಕಟ್ಟುತ್ತಿರುವ ಗಣೇಶ್‌ಗೆ ಗುಡ್‌ ನ್ಯೂಸ್‌ ದೊರೆತಿದೆ.

ಕರ್ನಾಟಕ ಹೈಕೋರ್ಟ್‌ (Karnataka High Court) ನಟ ಗಣೇಶ್‌ ಅವರಿಗೆ ಮನೆ ನಿರ್ಮಾಣಕ್ಕೆ ಕಾಮಗಾರಿ ಮುಂದುವರಿಸಬಹುದು ಎಂದು ಹೇಳಿದೆ. ಆದರೆ ಒಂದು ಷರತ್ತನ್ನೂ ವಿಧಿಸಿದೆ. ಅದೇನೆಂದರೆ ಮುಂದಿನ ಹಂತಗಳಲ್ಲಿ ಒಂದು ವೇಳೆ ಕಟ್ಟಡವನ್ನು ತೆರವುಗೊಳಿಸಲು ಆದೇಶ ನೀಡಿದರೆ ತೆರವು ಮಾಡಬೇಕೆಂಬ ಕಂಡೀಷನನ್ನು ಹಾಕಿದೆ. ಇದರರ್ಥ ಕಟ್ಟಡ ನಿರ್ಮಾಣವು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿದೆ ಎಂದು.

ಅರಣ್ಯ ಇಲಾಖೆ (Forest Department) ಯು ಗುಂಡ್ಲುಪೇಟೆ ತಾಲೂಕಿನ ಜಕ್ಕಳ್ಳಿಯಲ್ಲಿ 1.24 ಎಕರೆ ಭೂಮಿ ಹೊಂದಿರುವ ಗಣೇಶ್‌ ಮನೆ ಕಟ್ಟಲು ಪ್ರಾರಂಭ ಮಾಡಿದಾಗ ಕಾಮಗಾರಿ ಸ್ಥಗಿತಕ್ಕೆ ಆದೇಶ ಹೊರಡಿಸಿದೆ. ಈ ವಿಷಯಕ್ಕೆ ಗಣೇಶ್‌ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಇದೀಗ ಮನೆ ಕಟ್ಟುವ ಕೆಲಸ ಮುಂದುವರಿಸಲು ಅವಕಾಶ ನೀಡಿದೆ.

 

You may also like

Leave a Comment