Mangalore: ಮೀನುಗಾರರಿಗೆ ಭರ್ಜರಿ ಗುಡ್‌ನ್ಯೂಸ್ ಇಲ್ಲಿದೆ ನೋಡಿ. ದಕ್ಷಿಣ ಕನ್ನಡ (Dakshina Kannada)ಜಿಲ್ಲೆಯ ನಾನಾ ಅಭಿವೃದ್ಧಿ ಕಾರ್ಯಗಳು ಮತ್ತು ಮೀನುಗಾರರ ಸಮಸ್ಯೆಗಳ ಕುರಿತಂತೆ ಬೆಂಗಳೂರಿನ ವಿಧಾನ ಸೌಧದಲ್ಲಿ ಶುಕ್ರವಾರ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕರರಹಿತ ಡೀಸೆಲ್ ನೀಡುವ ಕುರಿತು ಯು.ಟಿ.ಖಾದರ್ ಆದೇಶ ನೀಡಿದ್ದಾರೆ.
ಯಾಂತ್ರೀಕೃತ ದೋಣಿಗಳಿಗೆ ಇದುವರೆಗೆ ವಾರ್ಷಿಕ 1.50 ಲಕ್ಷ ಕಿಲೋ ಲೀಟರ್ ಕರ ರಹಿತ ಡೀಸೆಲ್(Disel)ವಿತರಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಿಂದ 2 ಲಕ್ಷ ಕಿಲೋ ಲೀಟರ್‌ವರೆಗೆ ಕರ ರಹಿತ ಡೀಸಲ್‌ನ್ನು ವಿತರಣೆ ಮಾಡಲು ಆದೇಶ ಹೊರಡಿಸಲಾಗಿದೆ. ಯಾಂತ್ರೀಕೃತ ದೋಣಿಗಳಿಗೆ ಇದುವರೆಗೆ ವರ್ಷಕ್ಕೆ 1.50 ಲಕ್ಷ ಕಿಲೋ ಲೀಟರ್ ಕರ ರಹಿತ ಡೀಸೆಲ್ ವಿತರಣೆ (Disel to Fishing Boats)ಮಾಡಲಾಗುತ್ತಿತ್ತು.
ಇದೀಗ ಪ್ರಸಕ್ತ ಸಾಲಿನಿಂದ 2 ಲಕ್ಷ ಕಿಲೋ ಲೀಟರ್‌ವರೆಗೆ ಕರ ರಹಿತ ಡೀಸಲ್‌ನ್ನು ವಿತರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ (Fishing in dakshina Kannada)ನಾನಾ ಅಭಿವೃದ್ಧಿ ಕಾರ್ಯಗಳು ಹಾಗೂ ಮೀನುಗಾರರ ಸಮಸ್ಯೆಗಳ ಕುರಿತಂತೆ ಬೆಂಗಳೂರಿನ ವಿಧಾನ ಸೌಧದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿದ್ದು , ಯು. ಟಿ . ಖಾದರ್ ಈ ಕುರಿತು ಆದೇಶ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 3,406 ದೋಣಿಗಳ ಪೈಕಿ 1,660 ಮೋಟಾರೀಕೃತ ದೋಣಿಗಳು, 1,432 ಯಾಂತ್ರೀಕೃತ ದೋಣಿಗಳು ಹಾಗೂ 314 ನಾಡದೋಣಿಗಳು ನೋಂದಣಿಯಾಗಿ ಕಾರ್ಯಾಚರಣೆ ಮಾಡುತ್ತಿವೆ.
ಕೈಗಾರಿಕಾ ಸೀಮೆಎಣ್ಣೆಯನ್ನು ಖರೀದಿ ಮಾಡುವ ಸಂದರ್ಭ ನಾಡದೋಣಿ ಮಾಲೀಕರಿಗೆ ಪ್ರತಿ ಲೀಟರ್‌ಗೆ 35 ರೂ.ನಂತೆ ರಿಯಾಯಿತಿ ನೀಡಲಾಗುವ ಕುರಿತು ಎಂದು ಸಭೆಯಲ್ಲಿ ತಿಳಿಸಲಾಗಿದೆ.ಕುಳಾಯಿ ಮೀನುಗಾರಿಕೆ ಬಂದರಿನ ನಿರ್ಮಾಣವನ್ನು ಎನ್‌ಎಂಪಿಟಿ ಮುಖಾಂತರ ಕೈಗೊಂಡಿದ್ದು, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಅನುದಾನದ ಶೇ.50ರಷ್ಟು ಮೊತ್ತವನ್ನು ಎನ್‌ಎಂಪಿಟಿಗೆ ಬಿಡುಗಡೆ ಮಾಡಲಾಗಿದೆ.
ಮೀನುಗಾರಿಕಾ ದೋಣಿಗಳಲ್ಲಿನ ಸೀಮೆ ಎಣ್ಣೆ ಎಂಜಿನ್‌ಗಳನ್ನು ಪೆಟ್ರೋಲ್/ಡೀಸೆಲ್ ಎಂಜಿನ್‌ಗಳಾಗಿ ಬದಲಾಯಿಸಲು ತಲಾ 50,000 ರೂ. ಸಹಾಯಧನ ನೀಡಲಾಗುತ್ತದೆ. ಪ್ರಸಕ್ತ 2023- 24ನೇ ಸಾಲಿನಲ್ಲಿ 4,000 ಸೀಮೆ ಎಣ್ಣೆ ಎಂಜಿನ್‌ಗಳ ಬದಲಾವಣೆಗೆ 20 ಕೋಟಿ ರೂ. ಸಹಾಯಧನ ನೀಡಲಾಗುತ್ತದೆ. ಮೀನುಗಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ವಹಿವಾಟು ವಿಸ್ತರಣೆಗೆ ನೆರವಾಗುತ್ತದೆ. ಬ್ಯಾಂಕ್‌ಗಳಲ್ಲಿ ಬಡ್ಡಿ ರಹಿತವಾಗಿ ನೀಡುವ ಸಾಲದ ಮಿತಿಯನ್ನು ರೂ. 50,000 ರೂ. ಗಳಿಂದ 3.00 ಲಕ್ಷ ರೂ.ಗಳಿಗೆ 2023-24ನೇ ಸಾಲಿನಿಂದ ಹೆಚ್ಚಳ ಮಾಡಲಾಗುತ್ತದೆ.
