11
Central Budget : 2026ರ ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ಅಲ್ಲದೆ ಈ ಬಾರಿ ಬಜೆಟ್ ನಲ್ಲಿ ಟ್ಯಾಕ್ಸ್ ಅನ್ನು ಕಡಿಮೆ ಮಾಡಲಾಗುತ್ತದೆ ಎಂಬ ವಿಚಾರಗಳು ಕೇಳಿ ಬರುತ್ತಿದೆ.
ಹೌದು, ಈ ಸಲದ ಬಜೆಟ್‌ನಲ್ಲಿ ಅತಿ ದೊಡ್ಡ ಬದಲಾವಣೆ ಆದಾಯ ತೆರಿಗೆಯಲ್ಲಿ ಆಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಮುಖ್ಯವಾಗಿ 30% ಟ್ಯಾಕ್ಸ್ ಸ್ಲ್ಯಾಬ್ ಬಗ್ಗೆ ಎಲ್ಲರೂ ಮಾತಾಡ್ತಿದ್ದಾರೆ. ಸದ್ಯಕ್ಕೆ 24 ಲಕ್ಷದ ಮೇಲೆ ಇರೋ ಈ ಮಿತಿಯನ್ನ 40 ರಿಂದ 50 ಲಕ್ಷದವರೆಗೆ ಏರಿಸೋ ಪ್ಲಾನ್ ಇದೆಯಂತೆ. ಅದೇನಾದ್ರೂ ನಿಜ ಆದ್ರೆ, ವರ್ಷಕ್ಕೆ 12-24 ಲಕ್ಷ ದುಡಿಯೋ ಸಂಬಳದಾರರಿಗೆ ಟ್ಯಾಕ್ಸ್ ನಲ್ಲಿ 5-10% ಉಳಿತಾಯ ಆಗೋದು ಗ್ಯಾರಂಟಿ.
ಅಂದಹಾಗೆ 2026ರ ಬಜೆಟ್ ಸಂಪೂರ್ಣವಾಗಿ ಸಾಮಾನ್ಯ ಜನರ ಮತ್ತು ಮಧ್ಯಮ ವರ್ಗದವರ ಜೇಬಿನ ಭಾರ ಇಳಿಸುವುದರ ಮೇಲೆಯೇ ಗಮನಹರಿಸಿದೆ. ಈ ನಿರೀಕ್ಷೆಗಳು ನಿಜವಾದರೆ, ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಸ್ವಲ್ಪ ನಿಟ್ಟುಸಿರು ಬಿಡಬಹುದು.
