Home » Tirupati: ಮುಂಬರುವ ತಿಂಗಳಲ್ಲಿ ತಿರುಪತಿ ಹೋಗುವವರಿಗೆ TTD ಯಿಂದ ಗುಡ್ ನ್ಯೂಸ್!

Tirupati: ಮುಂಬರುವ ತಿಂಗಳಲ್ಲಿ ತಿರುಪತಿ ಹೋಗುವವರಿಗೆ TTD ಯಿಂದ ಗುಡ್ ನ್ಯೂಸ್!

1 comment
Tirupati

Tirupati : ಕಲಿಯುಗದ ವೈಕುಂಠ ಅಂತಾನೇ ಕರೆಯಲ್ಪಡುವ ಪದ್ಮಾವತಿ ಸಮೇತನಾಗಿ ತಿರುಪತಿಯಲ್ಲಿ ನೆಲೆಗೊಂಡಿರುವ ಅತ್ಯಂತ ಶ್ರೀಮಂತ ದೇವರಾಗಿರುವ, ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಪ್ರತಿ ದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ.

ಮುಖ್ಯವಾಗಿ ತಿರುಪತಿಯ (Tirupati) ದರ್ಶನ ಮಾಡಲು ಟಿಕೆಟ್ ತೆಗೆದುಕೊಳ್ಳದೆ ದೇವರ ದರ್ಶನಕ್ಕೆ ಹೋದರೆ ಹಲವಾರು ಗಂಟೆ ಕಾಲ ಕಾಯಬೇಕಾಗುತ್ತದೆ.

ಆದ್ದರಿಂದ ಹಲವು ಭಕ್ತರು ದೇವರ ದರ್ಶನ ಪಡೆಯಲು 300 ರೂಪಾಯಿಯ ಟಿಕೆಟ್ ಪಡೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಒಂದು ತಿಂಗಳಿಗೆ ಸಂಬಂಧಿಸಿದ 300 ರೂಪಾಯಿ ಟಿಕೆಟ್‌ಗಳನ್ನು ಒಂದು ವಾರದ ಮುನ್ನ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುತ್ತಾರೆ.

ಸದ್ಯ ಮೇ ತಿಂಗಳ ಟಿಕೆಟ್ ಗಳನ್ನು ಕೂಡ ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಖುಷಿಯ ವಿಚಾರವೆಂದರೆ ಈ ಬಾರಿ ಮೇ ತಿಂಗಳು ಮಾತ್ರವಲ್ಲದೇ ಜೂನ್ ತಿಂಗಳ ಟಿಕೆಟ್‌ಗಳನ್ನು ಕೂಡ ಒಟ್ಟಿಗೆ ಬಿಡುಗಡೆ ಮಾಡುತ್ತಿದ್ದಾರೆ.

ಮೇ-ಜೂನ್ ತಿಂಗಳಿಗೆ ಸಂಬಂಧಿಸಿದ 300 ರೂಪಾಯಿ ಪ್ರತ್ಯೇಕ ದರ್ಶನ ಟಿಕೆಟ್‌ಗಳನ್ನು ಏಪ್ರಿಲ್ 25ರ ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಮುಖ್ಯವಾಗಿ tirupatibalaji.ap.gov.in ವೆಬ್ ಸೈಟ್ ಅಥವಾ tt devasthanams ಅಪ್ಲಿಕೇಶನ್ ನಲ್ಲಿ ನಿಮ್ಮ ವಿವರಗಳನ್ನು ನಮೂದಿಸಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.

ಇನ್ನು, ದೇವರ ದರ್ಶನಕ್ಕೆ ಆಗಮಿಸುವ ಭಕ್ತರು ಉಳಿದುಕೊಳ್ಳಲು ಟಿಟಿಡಿಗೆ ಸಂಬಂಧಿಸಿದ ಬಾಡಿಗೆ ರೂಮ್‌ಗಳು ತಿರುಪತಿ ಮತ್ತು ತಿರುಮಲದಲ್ಲಿ ಲಭ್ಯವಿದ್ದು, ಕಡಿಮೆ ದರಕ್ಕೆ ರೂಮ್ ಗಳು ಭಕ್ತರಿಗೆ ಸಿಗುತ್ತೆ. ಆದರೆ ಉತ್ತಮ ಸೌಲಭ್ಯಗಳು ಹೊಂದಿರುವ ಕಾರಣ ಭಕ್ತರು ಕೂಡ ರೂಮ್‌ಗಳನ್ನು ಮೊದಲೇ ಬುಕ್ ಮಾಡಿಕೊಳ್ಳುತ್ತಾರೆ.

ಇನ್ನು ಶ್ರೀ ವೆಂಕಟೇಶ್ವರ ಸ್ವಾಮಿಯ ವಿಶೇಷ ಸೇವೆಗೆ ಸಂಬಂಧಿಸಿದ ಟಿಕೆಟ್‌ಗಳನ್ನು ಏಪ್ರಿಲ್ 24ರ ಬೆಳಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.

ಅದಲ್ಲದೆ ಮೇ ಮತ್ತು ಜೂನ್ ತಿಂಗಳಿಗೆ ಸಂಬಂಧಿಸಿದ ಕಲ್ಯಾಣೋತ್ಸವ, ಉಂಜಲ್ ಸೇವೆ, ಆರ್ಜಿತ ಬ್ರಹ್ಮತ್ಸವ, ಸಹಸ್ರ ದೀಪಾಲಂಕರಣ ಸೇವೆಗೆ ಸಂಬಂಧಿಸಿದ ಟಿಕೆಟ್‌ಗಳು ಆನ್ ಲೈನ್‌ನಲ್ಲಿ ಲಭ್ಯವಿರುತ್ತವೆ.

ಮೇ ಮತ್ತು ಜೂನ್ ತಿಂಗಳಿಗೆ ಸಂಬಂಧಿಸಿದ ತಿರುಮಲ ವಸತಿ ಕೋಟಾವನ್ನು ಏಪ್ರಿಲ್ 26ರ ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಇದನ್ನು ನಾವು ತಿರುಪತಿ ಅಧಿಕೃತ ವೆಬ್ ಸೈಟ್ ಅಥವಾ ಅಪ್ಲಿಕೇಶನ್ ನಲ್ಲೂ ಬುಕ್ ಮಾಡಬಹುದಾಗಿದೆ.

ಟಿಟಿಡಿಗೆ ಸಂಬಂಧಿಸಿದ ಬಾಡಿಗೆ ರೂಮ್‌ಗಳನ್ನು ಪಡೆಯಲು ಭಕ್ತರಿಂದ ಸದಾ ಡಿಮ್ಯಾಂಡ್ ಹೆಚ್ಚಿರುತ್ತದೆ. ಆದ್ದರಿಂದ ಬೇಗ ಬುಕ್ ಮಾಡಿಕೊಂದರೆ ವಸತಿ ರೂಮ್‌ಗಳು ಸುಲಭವಾಗಿ ಪಡೆದುಕೊಳ್ಳಬಹುದು.

ಇದನ್ನೂ ಓದಿ: Saving Scheme : ಪ್ರತಿ ತಿಂಗಳು ಪತಿ ಪತ್ನಿ ಸೇರಿ ಪಡೆಯಬಹುದು ಭರ್ಜರಿ 41 ಸಾವಿರ ರೂಪಾಯಿ!

You may also like

Leave a Comment