Home » Indian Railway : ರೈಲಲ್ಲಿ ಪ್ರಯಾಣಿಕರಿಗೆ ಕೊಡುತ್ತಿದ್ದ ಬಿಳಿ ಹೊದಿಕೆಗಳಿಗೆ ಗುಡ್ ಬೈ – ಪ್ರಿಂಟೆಡ್ ಹೊದಿಕೆ ಬಳಕೆಗೆ ಇಲಾಖೆ ನಿರ್ಧಾರ

Indian Railway : ರೈಲಲ್ಲಿ ಪ್ರಯಾಣಿಕರಿಗೆ ಕೊಡುತ್ತಿದ್ದ ಬಿಳಿ ಹೊದಿಕೆಗಳಿಗೆ ಗುಡ್ ಬೈ – ಪ್ರಿಂಟೆಡ್ ಹೊದಿಕೆ ಬಳಕೆಗೆ ಇಲಾಖೆ ನಿರ್ಧಾರ

0 comments

 

Indian Railway : ರಾತ್ರಿ ವೇಳೆ ಸ್ಲೀಪರ್ಗಳನ್ನು ಬುಕ್ ಮಾಡಿಕೊಂಡು ರೈಲಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇಲಾಖೆಯಿಂದ ಬಿಳಿ ಹೊದಿಕೆಗಳನ್ನು ಹೊದ್ದುಕೊಳ್ಳಲು ನೀಡಲಾಗುತ್ತಿತ್ತು. ಕೆಲವೊಮ್ಮೆ ಇವು ಕೊಳಕಾಗಿ, ಧೂಳು ಹಿಡಿದು, ಬಣ್ಣ ಮಾಸಿರುತ್ತಿದ್ದವು. ಇದನ್ನು ಹೊದಿಯಲು ಪ್ರಯಾಣಿಕರು ಹಿಂದೆ ಮುಂದೆ ನೋಡುತ್ತಿದ್ದರು. ಆದರೆ ಇನ್ನು ಆ ಟೆನ್ಶನ್ ಬೇಡ ಏಕೆಂದರೆ ಈ ಬಿಳಿ ಹೊದಿಕೆಗಳಿಗೆ ಇಲಾಖೆಯ ಗುಡ್ ಬೈ ಹೇಳಿ, ಪ್ರಿಂಟೆಡ್ ಹೊದಿಕೆಗಳ ಬಳಕೆಗೆ ನಿರ್ಧಾರ ಮಾಡಿದೆ.

 

ಹೌದು, ಧೂಳು ಹಿಡಿದ ಮತ್ತು ಅಪರೂಪಕ್ಕೊಮ್ಮೆ ಮಾತ್ರ ತೊಳೆಯುವ ಬಿಳಿ ಬ್ಲಾಂಕೆಟ್‌ಗಳನ್ನು ತೆಗೆದುಹಾಕಲು ಭಾರತೀಯ ರೈಲ್ವೆ ಮುಂದಾಗಿದೆ. ಸಾಂಪ್ರದಾಯಿಕ ಸಂಗನೇರಿ ವಿನ್ಯಾಸಗಳಲ್ಲಿ ಸಿದ್ಧಪಡಿಸಿದ ಪ್ರಿಂಟೆಡ್ ಬ್ಲಾಂಕೆಟ್‌ಗಳನ್ನು ರೈಲ್ವೆ ಪರಿಚಯಿಸಿದೆ.

 

 ಈ ಕುರಿತಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ಹಂಚಿಕೊಂಡಿದ್ದು ‘ವೋಕಲ್ ಫಾರ್ ಲೋಕಲ್’ ಮಿಷನ್‌ನ ಭಾಗವಾಗಿ ಎಸಿ ಕಂಪಾರ್ಟ್‌ಮೆಂಟ್‌ಗಳಲ್ಲಿ ಇನ್ನು ಮುಂದೆ ಪ್ರಿಂಟೆಡ್ ಬ್ಲಾಂಕೆಟ್‌ಗಳನ್ನು ನೀಡಲಾಗುವುದು. ಪ್ರಯಾಣಿಕರ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ. ಅಲ್ಲದೆ ಗುರುವಾರ ಜೈಪುರ-ಅಸರ್ವಾ ಎಕ್ಸ್‌ಪ್ರೆಸ್‌ನ ಎಲ್ಲಾ ಎಸಿ ಕೋಚ್‌ಗಳಲ್ಲಿ ಮುದ್ರಿತ ಕಂಬಳಿ ಕವರ್‌ಗಳನ್ನು ಅವರು ಪರಿಚಯಿಸಿದರು.

 

ಇನ್ನೂ ಪ್ರಯಾಣಿಕರ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ಇನ್ನು ಮುಂದೆ ಪ್ರಿಂಟೆಡ್ ಕಂಬಳಿಗಳನ್ನು ನೀಡಲಾಗುವುದು. ಎಲ್ಲಾ ಹಾಳೆಗಳಿಗೂ ಕವರ್ ಇರುತ್ತದೆ. ಶೀಘ್ರದಲ್ಲೇ ದೇಶದ ಎಲ್ಲಾ ರೈಲುಗಳಲ್ಲಿಯೂ ಇದನ್ನು ಪರಿಚಯಿಸಲಾಗುವುದು ಎಂಬ ಸೂಚನೆ ಇದೆ. ಇದು ಸ್ವಚ್ಛತೆ, ಏಕರೂಪತೆ ಮತ್ತು ಉತ್ತಮ ಆನ್-ಬೋರ್ಡ್ ಅನುಭವವನ್ನು ಉತ್ತೇಜಿಸುತ್ತದೆ ಎಂದು ರೈಲ್ವೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

You may also like