Govt Employees: ರಾಜ್ಯ ಸರ್ಕಾರವು ಸರ್ಕಾರಿ ನೌಕರರ ರಜಾದಿನಗಳಿಗೆ ಸಂಬಂಧಿಸಿದಂತೆ ಹೊಸ ಸೂಚನೆಗಳನ್ನು ಹೊರಡಿಸಿದೆ. ಎಷ್ಟು ರಜೆಯನ್ನು ಉದ್ಯೋಗಿಗಳು ಹಾಕಬಹುದು,ಎನುವುದರ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಸರ್ಕಾರಿ ನೌಕರರಿಗೆ ರಜೆಗೆ ಸಂಬಂಧಿಸಿದ ಹಲವು ಅನುಮಾನಗಳಿದ್ದವು. ಈ ಅನುಮಾನ ಹಾಗೂ ಗೊಂದಲಗಳಿಗೆ ಸರ್ಕಾರ ಉತ್ತರವನ್ನು ಸ್ಪಷ್ಟಪಡಿಸಿದೆ. ಸರ್ಕಾರಿ ನೌಕರರು ಸತತ ಎಷ್ಟು ದಿನ ರಜೆ ಪಡೆಯಬಹುದು, ಒಂದು ವೇಳೆ ಹೆಚ್ಚು ರಜೆ ತೆಗೆದುಕೊಂಡರೆ ಅದು ನೌಕರರ ಸೇವೆಯ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸಲಾಗಿದೆ.
FAQ ಹೊರಡಿಸಿರುವ ಸರ್ಕಾರ ವಿವಿಧ ವರ್ಗದ ಉದ್ಯೋಗಿಗಳ ಅರ್ಹತೆಗಳು, ಲೀವ್ ಟ್ರಾವೆಲ್ ಕನ್ಸೆಷನ್, ರಜೆ ಎನ್‌ಕ್ಯಾಶ್‌ಮೆಂಟ್, EL ಎನ್‌ಕ್ಯಾಶ್‌ಮೆಂಟ್, ಪಿತೃತ್ವ ರಜೆ ಮುಂತಾದ ವಿಷಯಗಳ ಕುರಿತ ಸ್ಪಷ್ಟ ಮಾಹಿತಿಯನ್ನು ನೀಡಲಾಗಿದೆ.
ವಿದೇಶಿ ಸೇವಾ ಉದ್ಯೋಗಿ
FAQ ಪ್ರಕಾರ ವಿದೇಶಿ ಸೇವಾ ಉದ್ಯೋಗಿಯು ನಿರಂತರವಾಗಿ ಐದು ವರ್ಷಗಳಿಗಿಂತ ಹೆಚ್ಚು ಕಾಲ ರಜೆಯಲ್ಲಿದ್ದರೆ ಅವನ ಸೇವೆಯನ್ನು ಕೊನೆಗೊಳಿಸಲಾಗುತ್ತದೆ. ವಿದೇಶಿ ಸೇವೆಯನ್ನು ಬಿಟ್ಟು , ಬೇರೆ ಯಾವುದೇ ಕ್ಷೇತ್ರದ ಸರ್ಕಾರಿ ಉದ್ಯೋಗಿ ಐದು ವರ್ಷಗಳಿಗಿಂತ ಹೆಚ್ಚು ಕಾಲ ರಜೆಯಲ್ಲಿದ್ದರೆ, ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಪರಿಗಣಿಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.
ಮಕ್ಕಳ ಆರೈಕೆ ರಜೆಯನ್ನು ಸಹ ಮಹಿಳೆಯರಿಗೆ ಮಾತ್ರ ನೀಡಲಾಗುವುದು. ಒಂದು ವೇಳೆ ಮಗು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ ಅಥವಾ ಮಹಿಳಾ ಉದ್ಯೋಗಿ ಅವರನ್ನು ನೋಡಿಕೊಳ್ಳಲು ವಿದೇಶಕ್ಕೆ ಹೋಗಬೇಕಾದಲ್ಲಿ ಕೆಲವು ಅಗತ್ಯ ನಿಯಮದ ನಂತರ ರಜೆಯನ್ನು ಅನುಮತಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಹೆಚ್ಚಿನ ಅಧ್ಯಯನ ಮಾಡುವ ಸಲುವಾಗಿ ಕೇಂದ್ರ ಆರೋಗ್ಯ ಸೇವೆಗೆ ಸಂಬಂಧಿಸಿದ ಉದ್ಯೋಗಿಗಳಿಗೆ ಅಧ್ಯಯನ ರಜೆಗಾಗಿ 36 ತಿಂಗಳ ಸಮಯವನ್ನು ಮಾತ್ರ ನೀಡಲಾಗುತ್ತದೆ. ಸ್ನಾತಕೋತ್ತರ ವಿದ್ಯಾರ್ಹತೆಗಾಗಿ 36 ತಿಂಗಳ ರಜೆಯನ್ನೂ ತೆಗೆದುಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ. .
