Home » ಶಾಲಾ ಪ್ರವಾಸಕ್ಕೆಂದು ಹೋದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ | ಅಮಲು ಪದಾರ್ಥ ನೀಡಿ ನಾಚಿಕೆ ಗೇಡಿನ ಕೆಲಸ ಮಾಡಿದ ಶಾಲಾ ಪ್ರಾಂಶುಪಾಲ!!!

ಶಾಲಾ ಪ್ರವಾಸಕ್ಕೆಂದು ಹೋದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ | ಅಮಲು ಪದಾರ್ಥ ನೀಡಿ ನಾಚಿಕೆ ಗೇಡಿನ ಕೆಲಸ ಮಾಡಿದ ಶಾಲಾ ಪ್ರಾಂಶುಪಾಲ!!!

by Mallika
0 comments

ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಹೊಸದೊಂದು ಹೀನಾಯ ಘಟನೆ ಸೇರಿಕೊಂಡಿದೆ. ಈ ತರಹದ ನಾಚಿಕೆಗೇಡಿನ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಹೌದು, ಪ್ರವಾಸಕ್ಕೆಂದು ಹೋದ ವಿದ್ಯಾರ್ಥಿನಿ ಮೇಲೆ ಶಾಲಾ ಪ್ರಿನ್ಸಿಪಾಲ್ ಅಮಲು ಪದಾರ್ಥ ನೀಡಿ ಅತ್ಯಾಚಾರ ಮಾಡಿದ ಹೀನಾಯ ಕೃತ್ಯ ನಡೆದಿದೆ.

ಮೀರತ್ ಜಿಲ್ಲೆಯ ಶಾಲೆಯೊಂದರ ಪ್ರಾಂಶುಪಾಲರ ವಿರುದ್ಧ ಅವರದೇ ಶಾಲೆಯಲ್ಲಿ ಓದುತ್ತಿರುವ 11ನೇ ತರಗತಿಯ ವಿದ್ಯಾರ್ಥಿಯೊಬ್ಬಳು ದೂರು ದಾಖಲು ಮಾಡಿದ್ದಾಳೆ.

ನವೆಂಬರ್ 23ರಂದು ಈ ಘಟನೆ ನಡೆದಿದೆ. ಈ ಶಾಲೆಯ ಪ್ರಾಂಶುಪಾಲರು ಶಾಲೆಯ ಒಂಬತ್ತು ವಿದ್ಯಾರ್ಥಿಗಳನ್ನು ವೃಂದಾವನಕ್ಕೆ ಪ್ರವಾಸಕ್ಕೆಂದು ಕರೆದುಕೊಂಡು ಹೋಗಿದ್ದರು. ಈ ಸಮಯದಲ್ಲಿ ವಿದ್ಯಾರ್ಥಿನಿಯರಿಗೆ ವಸತಿಗಾಗಿ ಹೋಟೆಲ್‌ನಲ್ಲಿ ಎರಡು ಕೊಠಡಿಗಳನ್ನು ತೆಗೆದುಕೊಂಡಿದ್ದರು. ಒಂದು ಕೊಠಡಿಯಲ್ಲಿ ಎಂಟು ವಿದ್ಯಾರ್ಥಿಗಳು ಉಳಿದುಕೊಂಡಿದ್ದರೆ, ಇನ್ನೊಂದು ಕೊಠಡಿಯಲ್ಲಿ ಪ್ರಾಂಶುಪಾಲರು 11ನೇ ತರಗತಿ ವಿದ್ಯಾರ್ಥಿನಿ 17 ವರ್ಷದ ಬಾಲಕಿ ಉಳಿದುಕೊಂಡಿದ್ದರು ಎನ್ನಲಾಗಿದೆ.

ಈ ವೇಳೆ ಪ್ರಾಂಶುಪಾಲರು ವಿದ್ಯಾರ್ಥಿನಿಯ ಆಹಾರದಲ್ಲಿ ಮಾದಕ ವಸ್ತುವನ್ನು ಬೆರೆಸಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿನಿ ಪ್ರತಿರೋಧ ವ್ಯಕ್ತಪಡಿಸಿದಾಗ, ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುವ ಬೆದರಿಕೆ ಹಾಕಿದ್ದು ಅಲ್ಲದೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

You may also like

Leave a Comment