Home » Gruha lakshmi Scheme: ವಾಟ್ಸಪ್ ಮೂಲಕ ಈಗ ಗೃಹಲಕ್ಷ್ಮೀ ದುಡ್ಡು ಪಡೆಯೋ ಅವಕಾಶ: ಹೇಗೆ ಗೊತ್ತಾ? ಈ ಲೇಖನ ಓದಿ !

Gruha lakshmi Scheme: ವಾಟ್ಸಪ್ ಮೂಲಕ ಈಗ ಗೃಹಲಕ್ಷ್ಮೀ ದುಡ್ಡು ಪಡೆಯೋ ಅವಕಾಶ: ಹೇಗೆ ಗೊತ್ತಾ? ಈ ಲೇಖನ ಓದಿ !

0 comments
Gruha lakshmi Scheme

Gruha lakshmi Scheme: ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಗೆ (Gruha lakshmi Scheme) ಈಗಾಗಲೇ ನೋಂದಣಿ ಆರಂಭವಾಗಿದೆ. ಪ್ರತೀ ಮನೆಯ ಯಜಮಾನಿಯರು ಮುಗಿಬಿದ್ದು ಅರ್ಜಿ ಹಾಕುತ್ತಿದ್ದಾರೆ. ಇದೀಗ ಈ ಯೋಜನೆಯ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ. ಇನ್ನು ಮುಂದೆ ನೀವು ವಾಟ್ಸ್ ಅಪ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಗೃಹಲಕ್ಷ್ಮಿ’ ಯೋಜನೆ ಅರ್ಜಿ ಸಲ್ಲಿಕೆ ಸಾಕಷ್ಟು ಗೊಂದಲ ಹಾಗೂ ಸರ್ವರ್‌ ಸಮಸ್ಯೆಯನ್ನು ಎದುರಿಸುತ್ತಿದೆ. ಗೃಹ ಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಕೆಯು ಕೆಲವು ದಿನಗಳ ಹಿಂದೆ ಇದೇ ಸರ್ವರ್‌ ಸಮಸ್ಯೆಯಿಂದ ಸ್ಥಗಿತಗೊಂಡಿತ್ತು. ನೀವು ಎಲ್ಲಿಗೂ ಹೋಗಿ ಅರ್ಜಿ ಸಲ್ಲಿಸಬೇಕಿಲ್ಲ. ಇದೀಗ ಅರ್ಜಿಯನ್ನು ವಾಟ್ಸಾಪ್‌ನಲ್ಲಿಯೂ ಸಲ್ಲಿಸಬಹುದು.

ರಾಜ್ಯಸರ್ಕಾರ ಚಾಟ್ ಬಾಟ್ ಲಿಂಕ್ ಆಗಿರುವ 8147500500 ಸಂಖ್ಯೆಯನ್ನು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ನೀಡಿದ್ದು, ಈ ವಾಟ್ಸಾಪ್‌ ನಂಬರ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ಈ ನಂಬರ್ ಗೆ ತಮ್ಮ ಮಾಹಿತಿಯನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಅರ್ಜಿಯನ್ನು ಚಾಟ್ ಬಾಟ್ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕಚೇರಿಗಳಿಗೆ ಮಾಹಿತಿ ರವಾನಿಸುತ್ತದೆ. ಈ ಚಾಟ್‌ ಬಾಟ್‌ನ ಮೂಲಕ 2 ಲಕ್ಷಕ್ಕೂ ಹೆಚ್ಚು ಅಪ್ಲಿಕೇಶನ್‌ ಸಲ್ಲಿಕೆಯಾಗಿವೆ.

ಬೇಕಾಗುವ ದಾಖಲೆಗಳೇನು?
• ಆಧಾರ್ ಕಾರ್ಡ್
• ಪಡಿತರ ಚೀಟಿ.
• ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಇಲ್ಲದಿದ್ದರೆ ಪಾಸ್ ಬುಕ್ ಮಾಹಿತಿ ಬೇಕು.

ಅಂದಹಾಗೆ ಈಗಾಗಲೇ ಮುಖ್ಯಮಂತ್ರಿ ಅವರು, ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 24 ರಂದು ಚಾಲನೆ ನೀಡಲಿದ್ದೇವೆ. ರಾಜ್ಯದ 1.28 ಕೋಟಿ ಕುಟುಂಬಗಳಿಗೆ 2000 ರೂ. ಗಳನ್ನು ಈ ಯೋಜನೆಯಡಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಬಾಯ್‌ಫ್ರೆಂಡ್‌ ಮೇಲೆ ಮುನಿದು 80 ಫೀಟ್ ಹೈ ಟೆನ್ಶನ್ ಟವರ್‌ ಹತ್ತಿ ಯುವತಿಯ ಹೈ ಡ್ರಾಮಾ; ಕಂಗಾಲು ಯುವಕ ತಾನೂ ಕಂಬ ಏರಿದ !

You may also like