Gruhalakshmi Scheme :ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಬಹು ನಿರೀಕ್ಷಿತ ಯೋಜನೆಯಾದ ಗೃಹಲಕ್ಷ್ಮೀ(Gruhalakshmi scheme)ಯೋಜನೆಗೆ ಕಳೆದ ವಾರವಷ್ಟೇ ಚಾಲನೆ ದೊರೆತಿದ್ದು, ಈಗಾಗಲೇ ಹಲವು ಮಹಿಳೆಯರ ಖಾತೆಗೆ 2000 ಹಣ ಜಮಾ ಆಗಿದೆ. ಆದರೆ ಇನ್ನೂ ಕೆಲವು ಮಹಿಳೆಯರಿಗೆ ಹಣ ಕೈ ಸೇರಿಲ್ಲ. ಒಂದು ವೇಳೆ ನಿಮಗೂ ಗೃಹಲಕ್ಷ್ಮೀ ಹಣ ಬಂದಿಲ್ಲವೆಂದರೆ ದಯವಿಟ್ಟು ಹೀಗೆ ಮಾಡಿ.
ಹೌದು, ರಾಜ್ಯ ಸರ್ಕಾರ(Sate Government)ಚುನಾವಣೆಗೂ ಮುನ್ನ ಘೋಷಿಸಿದಂತೆ ಅಧಿಕಾರಕ್ಕೆ ಬಂದ ಕೂಡಲೇ ತನ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಅಂತೆಯೇ ಗೃಹಲಕ್ಷ್ಮೀ ಯೋಜನೆಗೂ ಚಾಲನೆ ದೊರೆತಿದೆ. ಸದ್ಯ ಪ್ರತಿಯೊಬ್ಬ ಮನೆಯ ಯಜಮಾನಿಗೆ 2000 ರೂಪಾಯಿ ಸಹಾಯಧನ ನೀಡುವ ಈ ಯೋಜನೆಗೆ ರಾಜ್ಯದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 1.1 ಕೋಟಿ ಮಹಿಳೆಯರು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಹಣ ಬಂದಿರೋದಿಕ್ಕೆ ಮಹಿಳೆಯರು ಖುಷಿ ಆಗಿದ್ದರೇ, ಲಕ್ಷಾಂತರ ಮಹಿಳೆಯರು ಹಣ ಬಾರದೇ ಬೇಸರದಲ್ಲಿದ್ದಾರೆ. ಹಾಗಿದ್ರೆ ಹಣ ಬರದವರು ಹಣ ಪಡೆಯಲು ಏನು ಮಾಡಬೇಕು ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
ಈ ನಂಬರ್ ಗೆ ಮೆಸೇಜ್ ಮಾಡಿ:
ಗೃಹಲಕ್ಷ್ಮೀಗೆ ಅರ್ಜಿ ಹಾಕಿದ ಮಹಿಳೆಯರ ಅರ್ಜಿಯ ಸ್ಟೇಟಸ್ ಪರಿಶೀಲಿಸಲು ಸಹಾಯವಾಣಿ ನಂಬರ್ ನೀಡಲಾಗಿದೆ. 8147500500 ಈ ನಂಬರ್ ಗೆ ನಿಮ್ಮ ರಜಿಸ್ಟರ್ಡ್ ಮೊಬೈಲ್ ನಂಬರ್ ನಿಂದ ಒಂದು ಮೆಸೆಜ್ ಕಳುಹಿಸಿ. 8147500500 ನಂಬರ್ ಗೆ ನಿಮ್ಮ ರೇಷನ್ ಕಾರ್ಡ್ ನಂಬರ್ ನ್ನು ಮೆಸೆಜ್ ಮಾಡಿ. ಹೀಗೆ ಮೆಸೆಜ್ ಮಾಡಿದ ತಕ್ಷಣ ನಿಮ್ಮ ಪಡಿತರ ಚೀಟಿ ಸಂಖ್ಯೆ ಆಧರಿಸಿ ನಿಮ್ಮ ಗೃಹಲಕ್ಷ್ಮೀ ಯೋಜನೆಯ ಭವಿಷ್ಯ ಏನಾಗಿದೆ ಎಂಬ ಮಾಹಿತಿಯ ಸಂದೇಶ ಬರಲಿದೆ.
ಇಷ್ಟೇ ಅಲ್ಲದೆ ಅಲ್ಲದೇ ನಿಮ್ಮ ಗೃಹಲಕ್ಷ್ಮೀ ಯೋಜನೆಯ ಅರ್ಜಿಯ ಸ್ಥಿತಿ ಏನಾಗಿದೆ ? ಯಾವುದಾದರೂ ಗೊಂದಲವಿದ್ಯಾ ? ಅಥವಾ ನೀವು ಕೊಟ್ಟ ಮಾಹಿತಿಗಳಲ್ಲಿ ಏನಾದ್ರು ತಪ್ಪುಗಳಿದ್ಯಾ ಎಂಬುದರ ಬಗ್ಗೆಯೂ ಈ ನಂಬರ್ ಮೆಸೆಜ್ ನಲ್ಲಿ ಮಾಹಿತಿ ಸಿಗಲಿದೆ. ನಿಮ್ಮ ಅರ್ಜಿ ಅಸ್ವೀಕೃತವಾಗಿದ್ದರೇ, ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆಯೂ ಮಾಹಿತಿ ಬರಲಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದೇನು?
ಗೃಹಲಕ್ಷ್ಮಿ ಯೋಜನೆಯಡಿ 7 ರಿಂದ 8 ಲಕ್ಷ ಕುಟುಂಬಗಳಟುಂಬಗಳ ಯಜಮಾನಿಯರ ಖಾತೆಗೆ ಹಣ ಪಾವತಿಸುವಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಅಂತಹ ಖಾತೆ ಸಕ್ರಿಯಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ತಿಳಿಸಿದ ಹಾಗೆ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಂತ್ರಿಕ ಸಮಸ್ಯೆಯಿಂದ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗದ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿ ಬ್ಯಾಂಕ್ ಖಾತೆ ಸಕ್ರಿಯಗೊಳಿಸುವ ಮೂಲಕ ಯೋಜನೆ ಸೌಲಭ್ಯ ಪಡೆಯಲು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Lakshmi hebbalkar)ಮಾಹಿತಿ ನೀಡಿದ್ದಾರೆ.
