Home » ಹನುಮಾನ್ ಚಾಲಿಸಾ ಗಲಾಟೆ ಪ್ರಕರಣ : ನವನೀತ್ ಕೌರ್ ಹಾಗೂ ರವಿ ರಾಣಾ ಬಂಧನ

ಹನುಮಾನ್ ಚಾಲಿಸಾ ಗಲಾಟೆ ಪ್ರಕರಣ : ನವನೀತ್ ಕೌರ್ ಹಾಗೂ ರವಿ ರಾಣಾ ಬಂಧನ

by Mallika
0 comments

ಹನುಮಾನ್ ಚಾಲೀಸಾ ಗಲಾಟೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ ಸದಸ್ಯ ನವನೀತ್ ಕೌರ್ ರಾಣಾ ಮತ್ತು ಅವರ ಪತಿ ರವಿ ರಾಣಾ ಅವರನ್ನು ಪೊಲೀಸರು ಬಂಧಿಸಿದ್ದು, ನಾಳೆ ಬಾಂದ್ರಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.

ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಿದ ಆರೋಪದ ಮೇಲೆ ಶಾಸಕರಾಗಿರುವ ರವಿ ರಾಣಾ ಮತ್ತು ಅವರ ಪತ್ನಿಯನ್ನು ಅವರ ನಿವಾಸದಿಂದ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಇನ್ನು ರಾಣಾ ದಂಪತಿಗಳ ವಿರುದ್ಧ ಧರ್ಮ, ಜನಾಂಗ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಐಪಿಸಿ ಸೆಕ್ಷನ್ 153 (ಎ) ಮತ್ತು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು(ಸೆಕ್ಷನ್ 135) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸ ‘ಮಾತೋಶ್ರೀ’ಯ ಹೊರಗೆ’ ‘ಹನುಮಾನ್ ಚಾಲೀಸಾ ಪಠಿಸಿದ ಪ್ರಕರಣ ಇದಾಗಿದ್ದು, ನಂತರ ಇದನ್ನು ರದ್ದುಗೊಳಿಸಿದ ನಂತರ ಇವರ ಬಂಧನವಾಗಿದೆ.

You may also like

Leave a Comment