Home » ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆಗೆ ಪ್ರತೀಕಾರ ತೀರಿಸಲು ಸಜ್ಜಾದ ಗ್ಯಾಂಗ್ ಪೊಲೀಸರ ಬಲೆಗೆ!! ಕ್ಷಿಪ್ರ ಕಾರ್ಯಾಚರಣೆಯಿಂದ ತಪ್ಪಿತು ಮತ್ತೊಂದು ಕೋಮು ಗಲಭೆ

ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆಗೆ ಪ್ರತೀಕಾರ ತೀರಿಸಲು ಸಜ್ಜಾದ ಗ್ಯಾಂಗ್ ಪೊಲೀಸರ ಬಲೆಗೆ!! ಕ್ಷಿಪ್ರ ಕಾರ್ಯಾಚರಣೆಯಿಂದ ತಪ್ಪಿತು ಮತ್ತೊಂದು ಕೋಮು ಗಲಭೆ

0 comments

ಶಿವಮೊಗ್ಗ : ಆರ್‌ಎಸ್ಎಸ್ ಕಾರ್ಯಕರ್ತ ಹರ್ಷ ಕೊಲೆಗೆ ಪ್ರತೀಕಾರವಾಗಿ ಮುಸ್ಲಿಂ ಯುವಕನ ಕೊಲೆಗೆ ಸಂಚು ರೂಪಿಸಿದ್ದ ಖತರ್ನಾಕ್ ಗ್ಯಾಂಗೊಂದನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ನಗರದಲ್ಲಿ ಮತ್ತೊಂದು ಕೋಮುಗಲಭೆಯನ್ನು ಪೊಲೀಸರು ತಡೆದಿದ್ದಾರೆ.

ಹರ್ಷನ ಕಗ್ಗೋಲೆ ಸಮಯದಲ್ಲಿ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಜೇಟ್ಲಿಯನ್ನ ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಮುಸ್ಲಿಂ ಯುವಕನ ಹತ್ಯೆ ಸಂಚಿನ ಬಗ್ಗೆ ಮಾಹಿತಿ ಬಯಲಾಗಿದೆ.

ಶಿವಮೊಗ್ಗ ಪೊಲೀಸರಿಗೆ ಆರೋಪಿ ಜೇಟ್ಲಿ ನೀಡಿದ್ದ ಮಾಹಿತಿಯ ಮೇರೆಗೆ 13 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹಲವರನ್ನು ಬಂಧಿಸಲಾಗಿದೆ.

ರಾತ್ರೋರಾತ್ರಿ ಮುಸ್ಲಿಂ ಯುವಕನ ಕೊಲೆಗೆ ಈ ಸಂಚು ರೂಪಿಸಿದ್ದರು ಎನ್ನುವ ಭಯನಕ ಸತ್ಯ ಬಯಲಾಗಿದೆ. ಇನ್ನು ಶಿವಮೊಗ್ಗ ಎಸ್‌ಪಿ ಲಕ್ಷ್ಮಿ ಪ್ರಸಾದ್ ಖಡಕ್ ಸೂಚನೆ ಮೇರೆಗೆ ಆರೋಪಿಗಳನ್ನ ಬಂಧಿಸಲಾಗಿದೆ.

You may also like

Leave a Comment