Home » ಕೌಟುಂಬಿಕ ಕಲಹ : ಕೋರ್ಟ್ ಆವರಣದಲ್ಲೇ ಹೆಂಡತಿಯ ಕತ್ತು ಕೊಯ್ದ ಪತಿ

ಕೌಟುಂಬಿಕ ಕಲಹ : ಕೋರ್ಟ್ ಆವರಣದಲ್ಲೇ ಹೆಂಡತಿಯ ಕತ್ತು ಕೊಯ್ದ ಪತಿ

0 comments

ಹಾಸನ: ಪಾಪಿ ಪತಿಯೊಬ್ಬ ನ್ಯಾಯಾಲಯದ ಆವರಣದಲ್ಲೇ ತನ್ನ ಹೆಂಡತಿಯ ಕತ್ತು ಕೊಯ್ದ ಘಟನೆಯೊಂದು ಹಾಸನದಲ್ಲಿ ನಡೆದಿದೆ.
ನ್ಯಾಯಾಲಯದ ಆವರಣದಲ್ಲೇ ಹೊಂಚುಹಾಕಿ ಕುಳಿತಿದ್ದ ಪಾಪಿ ಪತಿಮಹಾಶಯನೊಬ್ಬ ತನ್ನ ಪತ್ನಿಯ ಕತ್ತು ಕೊಯ್ದು ಹತ್ಯೆಗೆ ಯತ್ನಿಸಿದ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.

ಹೊಳೆನರಸೀಪುರ ತಾಲ್ಲೂಕಿನ ತಟ್ಟೆಕೆರೆ ಗ್ರಾಮದ ಚೈತ್ರ ಮತ್ತು ಶಿವಕುಮಾರ್ ನಡುವೆ ಕೌಟುಂಬಿಕ ಕಲಹ ಉಂಟಾಗಿದೆ. ಈ ಕಾರಣದಿಂದ ಚೈತ್ರಾ ಜೀವನಾಂಶ ಕೋರಿ ಹೊಳೆನರಸೀಪುರ ಟೌನ್ ಠಾಣೆ ಪೊಲೀಸ್ ವ್ಯಾಪ್ತಿಯಲ್ಲಿ ಇರುವ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದರಿಂದ ಕೋಪಗೊಂಡ ಶಿವಕುಮಾರ್ ತನ್ನ ವಿರುದ್ಧವೇ ಕೋರ್ಟ್‌ಗೆ ಅರ್ಜಿ ಸಲ್ಲಿಸದ್ದಕ್ಕೆ ಪತ್ನಿಯ ವಿರುದ್ಧ ಕೋಪಗೊಂಡಿದ್ದ.

ಇದನ್ನು ಲೆಕ್ಕಿಸದೆ ಚೈತ್ರಾ ನ್ಯಾಯಾಲಯಕ್ಕೆ ಹೋಗಿದ್ದಾಳೆ. ಈ ವೇಳೆ ಶಿವಕುಮಾರ್ ಆಕೆಯ ಹತ್ಯೆಗೆ ಕೋರ್ಟ್ ಆವರಣದಲ್ಲೇ ಹೊಂಚುಹಾಕಿ ಕುಳಿತಿದ್ದನು. ಅದರಂತೆ ವಿಚಾರಣೆಗೆ ಹಾಜರಾಗುವ ಸಂದರ್ಭದಲ್ಲಿ ಚೈತ್ರಾ ಪತಿ ಶಿವಕುಮಾ‌ರ್ ಆಕೆಯ ಕತ್ತು ಕೊಯ್ದು ಹತ್ಯೆ ಮಾಡಲು ಯತ್ನಿಸಿದ್ದಾನೆ. ಕೋರ್ಟ್ ಆವರಣದಲ್ಲಿದ್ದ ಶೌಚಾಲಯಕ್ಕೆ ತೆರಳುತ್ತಿದ್ದ ಚೈತ್ರಾಳನ್ನು ಶಿವಕುಮಾರ್ ಅಡ್ಡಗಟ್ಟಿದ್ದಾನೆ. ನಂತರ ಮನಸೋ ಇಚ್ಛೆ ಅಮಾನುಷವಾಗಿ ಕತ್ತನ್ನು ಕೊಯ್ದಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಚೈತ್ರಾಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿ ನೀಡಲಾಗುತ್ತಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ.

You may also like

Leave a Comment