HDFC Bank ಸೈಬರ್ ವಂಚನೆಗಳ ವಿರುದ್ಧ ಜಾಗೃತಿ ಮೂಡಿಸಲು ಜನರಿಗಾಗಿ ಆರಂಭಿಸಿದ ಹೊಸ ಅಭಿಯಾನದ ಜಾಹೀಆತೊಂದು (Advertisement campaign) ಈಗ ವಿವಾದವನ್ನು ಉಂಟು ಮಾಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಹಣಕಾಸು ವಂಚನೆಗಳ ಕುರಿತು ಜಾಗೃತಿ ಮೂಡಿಸುವ ಜಾಹೀರಾತೊಂದು ಪ್ರಕಟ ಮಾಡಿದ್ದು, ಇದು ಕೆಲವೊಂದು ನೆಟ್ಟಿಗರಿಗೆ ಹಿಂದೂ ವಿರೋಧಿಯಂತೆ ಕಾಣುತ್ತಿದೆ.
ವಿಜಿಲ್ ಆಂಟಿ (Vigil Aunty) ಹಣೆಯಲ್ಲಿ ದೊಡ್ಡದಾಗಿ ಕಾಣುವ ಬಿಂದಿಯೇ ಈ ವಿವಾದದ ಕೇಂದ್ರ ಬಿಂದು. ಅದೇನೆಂದರೆ ಈ ಬಿಂದಿಯಲ್ಲಿ ʼನಿಷೇಧ ಚಿಹ್ನೆʼ ಯನ್ನು ಹಾಕಲಾಗಿದೆ. ಇದು ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಕೆಲವರು ಬರೆದಿದ್ದಾರೆ.
ಏಕೆಂದರೆ ಹಿಂದೂ ಸಂಸ್ಕೃತಿಯಲ್ಲಿ ಬಿಂದಿಗೆ (Bindi) ಅಂದರೆ ಕುಂಕುಮಕ್ಕೆ ವಿಶೇಷವಾದ ಮಹತ್ವವಿದೆ. HDFC Bank ಬಿಂದಿ ಬದಲಿಗೆ ನಿಷೇಧ ಚಿಹ್ನೆ (No Signal) ಬಳಸಿ ಅವಮಾನ ಮಾಡಿದೆ ಎಂದು ಆರೋಪ ಕೇಳಿ ಬಂದಿದೆ. (Anti Hindu HDFC). ಹೆಚ್ಚಿನ ಮಂದಿ ಸಾಮಾಜಿಕ ಜಾಲತಾಣದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕಿನ ಈ ಜಾಹೀರಾತಿಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದು, ಈ ಜಾಹೀರಾತನ್ನು ಬ್ಯಾಂಕ್ ಹಿಂಪಡೆಯಬೇಕು ಹಾಗೂ ಸಾರ್ವಜನಿಕ ಕ್ಷಮೆಯನ್ನು ಕೇಳಬೇಕು ಎಂದು ಆಗ್ರಹ ಮಾಡಿದ್ದಾರೆ. ಆದರೆ ಬ್ಯಾಂಕ್ ಈ ಕುರಿತು ಇನ್ನೂ ಏನೂ ಸ್ಪಷ್ಟನೆ ನೀಡಿಲ್ಲ.
