Home » Viral Video: ಕುಂಟುತ್ತಾ ಹೋಗುತ್ತಿದ್ದ ವ್ಯಕ್ತಿಯನ್ನು ಗೇಲಿ ಮಾಡಿದ ನಾಟಿ ಕೋಳಿ | ನಗದವರ ಮೊಗದಲ್ಲೂ ನಗು ಮೂಡಿಸುವ ವೀಡಿಯೋ ಸಖತ್ ವೈರಲ್!!!

Viral Video: ಕುಂಟುತ್ತಾ ಹೋಗುತ್ತಿದ್ದ ವ್ಯಕ್ತಿಯನ್ನು ಗೇಲಿ ಮಾಡಿದ ನಾಟಿ ಕೋಳಿ | ನಗದವರ ಮೊಗದಲ್ಲೂ ನಗು ಮೂಡಿಸುವ ವೀಡಿಯೋ ಸಖತ್ ವೈರಲ್!!!

by Mallika
1 comment

ಮನುಷ್ಯ ಮನುಷ್ಯನನ್ನು ಗೇಲಿ ಮಾಡುವುದು ಸಹಜ. ಆದರೆ ಕೋಳಿಯೊಂದು ಮನುಷ್ಯನ ದುರ್ವಸ್ಥೆಯನ್ನು ಕಂಡು ಗೇಲಿ ಮಾಡಿದ್ದನ್ನು ನೀವು ನೋಡಿದ್ದೀರಾ ? ಕೇಳಿದ್ದೀರಾ ? ನಾವು ನಿಮಗೆ ಇಲ್ಲಿ ಇದರ ಬಗ್ಗೆ ತಿಳಿಸುತ್ತೇವೆ. ಅಂದ ಹಾಗೆ ಇದೊಂದು ಬುದ್ಧಿವಂತ ಕೋಳಿ ಎಂದೇ ಹೇಳಬಹುದು. ಏಕೆಂದರೆ, ಅಷ್ಟೊಂದು ಚೆನ್ನಾಗಿ ಈ ಕೋಳಿ ಆ ವ್ಯಕ್ತಿಯನ್ನು ಗೇಲಿ ಮಾಡಿದೆ ಅನ್ನಬಹುದು. ಇಂದು ಭಾನುವಾರದ ರಜಾದಿನದಂದು ರಿಲಾಕ್ಸ್ ಮಾಡುತ್ತಿರುವ ನಿಮ್ಮ ಮನಸ್ಸಿಗೆ ಮುದ ನೀಡುವಂತಿದೆ ಈ ವೀಡಿಯೋ.

ಸಾಮಾಜಿಕ ಮಾಧ್ಯಮದ ಜಗತ್ತು ತಮಾಷೆಯ ಚಿತ್ರಗಳು ಮತ್ತು ವೀಡಿಯೊಗಳಿಂದ ತುಂಬಿದೆ. ಇಂತಹ ವಿಡಿಯೋಗಳನ್ನು ನೆಟಿಜನ್‌ಗಳು ಬಹಳ ಉತ್ಸಾಹದಿಂದ ವೀಕ್ಷಿಸಲು ಇಷ್ಟಪಡುತ್ತಾರೆ. ಸದ್ಯ ಕೋಳಿಯ ನಡೆಯೊಂದು ನಗದವರನ್ನು ಕೂಡ ನಗಿಸುವ ವೀಡಿಯೋವೊಂದು ವೈರಲ್ ಆಗುತ್ತಿದೆ.

ವೀಡಿಯೋದಲ್ಲಿ ಏನಿದೆ ಅಂದರೆ, ಗಾಯಾಳು ವ್ಯಕ್ತಿಯೋರ್ವ ಕೋಲಿನ ಸಹಾಯದಿಂದ ಕುಂಟುತ್ತಾ ನಡೆಯುತ್ತಿದ್ದರೆ ಹಿಂಬದಿಯಲ್ಲಿ ಬುದ್ಧಿವಂತ ಕೋಳಿ ಆತನನ್ನು ಗೇಲಿ ಮಾಡುವ ನಿಟ್ಟಿನಲ್ಲಿ ನಾಟಕೀಯವಾಗಿ ಕುಂಟುತ್ತಾ ಬಂದಿದೆ. ಮುಂದೇನಾಯ್ತು ಎಂಬುದನ್ನು ಈ ವಿಡಿಯೋದಲ್ಲಿ ನೋಡಿ..

ವ್ಯಕ್ತಿಯೊಬ್ಬರಿಗೆ ನಿಜವಾಗಲೂ ಕಾಲಿಗೆ ತಾಗಿತ್ತು. ಹಾಗಾಗಿ ಬ್ಯಾಂಡೇಜ್ ಹಾಕಿದ್ದಾರೆ. ಹಾಗಾಗಿ ರಸ್ತೆಯಲ್ಲಿ ಊರುಗೋಲು ಸಹಾಯದಿಂದ ಡೊಂಕ ಹಾಕಿಕೊಂಡು ನಡೆಯುತ್ತಿರುತ್ತಾರೆ. ಇವರ ಹಿಂಬದಿಯಲ್ಲಿ ಕೋಳಿಯೊಂದು ಗಾಯಾಳು ವ್ಯಕ್ತಿಯನ್ನು ಗೇಲಿ ಮಾಡಲು ಮುಂದಾಗಿದೆ. ಅದರಂತೆ ಕೋಳಿಯು ಗಾಯಾಳು ವ್ಯಕ್ತಿಯಂತೆ ಕುಂಟುತ್ತಾ ನಡೆಯುತ್ತದೆ. ಇದನ್ನು ನೋಡಿದ ಆ ವ್ಯಕ್ತಿ ತನ್ನ ಕೈಯಲ್ಲಿದ್ದ ಕೋಲಿನಲ್ಲಿ ಓಡಿಸುತ್ತಾನೆ. ಈ ವೇಳೆ ಕೋಳಿ ನಾಟಕವನ್ನು ಬಿಟ್ಟು ಒಂದೇ ಸಮನೆ ಓಡುತ್ತದೆ.

ಈ ವಿಡಿಯೋವನ್ನು Gabriele Corno ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಕೋಳಿ ರೈತನನ್ನು ಗೇಲಿ ಮಾಡುತ್ತಿದೆ” ಎಂದು ಶೀರ್ಷಿಕೆ ಬರೆಯಲಾಗಿದೆ. 18 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.

You may also like

Leave a Comment