ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚುಗೊಂಡಿರುವ ಕಾರಣ, ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ನಾಳೆ (ಡಿ.18) ರಜೆ ಘೋಷಿಸಲಾಗಿದೆ. ನರ್ಸರಿಯಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ. ಇನ್ನು ಇತರ ವಿದ್ಯಾರ್ಥಿಗಳಿಗೂ ಮಾರ್ಗಸೂಚಿ ಹೊರಡಿಸಲಾಗಿದೆ. ದೆಹಲಿಯಲ್ಲಿ ವಾಯುಮಾಲಿನ್ಯದ ಪರಿಣಾಮ GRAP 4 ಹಂತದ ನಿರ್ಬಂಧಗಳು ಜಾರಿಯಾಗಿದೆ.
ನರ್ಸರಿಯಿಂದ 5ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ನಾಳೆ ರಜೆ ನೀಡಲಾಗಿದೆ. ಇದೇ ವೇಳೆ ಸರ್ಕಾರ ಮುಂದಿನ ನೋಟಿಸ್ ವರೆಗೆ ರಜೆ ಎಂದಿದೆ. ಮಾಲಿನ್ಯದ ಪ್ರಮಾಣ ಇಳಿಕೆಯತ್ತ ಸಾಗಿದರೆ ಶೀಘ್ರದಲ್ಲೇ ಶಾಲೆ ಓಪನ್ ಆಗಲಿದೆ. ಇನ್ನು 6ನೇ ತರಗತಿಯಿಂದ 11ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಹೈಬ್ರಿಡ್ ಮಾಡೆಲ್ ತರಗತಿ ನಡೆಸಲು ಸೂಚಿಸಲಾಗಿದೆ. ವಾರದಲ್ಲಿ ಇಂತಿಷ್ಟು ದಿನ ಆನ್‌ಲೈನ್ ಮೂಲಕ ಹಾಗೂ ಇಂತಿಷ್ಟು ದಿನ ಶಾಲಾ ತರಗತಿ ಮೂಲಕ ಬೋಧನೆಗೆ ಸೂಚಿಸಲಾಗಿದೆ. ಇನ್ನು 10ನೇ ತರಗತಿ ಹಾಗೂ 12ನೇ ತರಗತಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಬೇಕು. ಬೋರ್ಡ್ ಪರೀಕ್ಷೆ ಕಾರಣ ಈ ವಿದ್ಯಾರ್ಥಿಗಳಿಗೆ ತರಗತಿಗೆ ಹಾಜರಾಗಲು ಸೂಚಿಸಲಾಗಿದೆ.
ವಿದ್ಯಾರ್ಥಿಗಳ ಆರೋಗ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಲು ಹೇಳಲಾಗಿದ್ದು, ಯಾವುದೇ ವಿದ್ಯಾರ್ಥಿಯಲ್ಲಿ ಅಸ್ವಸ್ಥತೆ, ಉಸಿರಾಟದ ಸಮಸ್ಯೆ ಕಂಡು ಬಂದರೆ ಗಂಭೀರವಾಗಿ ಪರಿಗಣಿಸಬೇಕು ಎಂದು ಸರ್ಕಾರ ಸೂಚಿಸಿದೆ. ಇದೇ ವೇಳೆ ಪೋಷಕರಿಗೂ ಸೂಚನೆ ನೀಡಲಾಗಿದೆ. ಮಕ್ಕಳ ಆರೋಗ್ಯದ ಕುರಿತು ಗಮನಹರಿಸುವಂತೆ ಸೂಚಿಸಲಾಗಿದೆ.
ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ, ಡಿಸೆಂಬರ್ 18 ರಂದು ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದಾಗ್ಯೂ, ಶಿಕ್ಷಣ ಅಧಿಕಾರಿಗಳು ಶೀತಗಾಳಿ ಪೀಡಿತ ಪ್ರದೇಶಗಳಲ್ಲಿ ಸಲಹೆಗಳನ್ನು ನೀಡಿದ್ದಾರೆ. ತೀವ್ರ ಚಳಿ ಅನುಭವಿಸುತ್ತಿರುವ ಜಿಲ್ಲೆಗಳಲ್ಲಿ, ವಿದ್ಯಾರ್ಥಿಗಳ ಆರೋಗ್ಯವನ್ನು ಕಾಪಾಡಲು ಶಾಲೆಗಳು ಬೆಳಗಿನ ಸಮಯವನ್ನು ಬದಲಾಯಿಸಿವೆ.
