Home » Tech Tips : ಆಧಾರ್ ಕಾರ್ಡ್ ಕಳೆದು ಹೋದರೆ ಇದನ್ನು ನೀವು ಮೊದಲು ಮಾಡಬೇಕು! ವಾಪಾಸು ಪಡೆಯುವ ಬಗ್ಗೆ ಕಂಪ್ಲೀಟ್ ವಿವರ ಇಲ್ಲಿದೆ!

Tech Tips : ಆಧಾರ್ ಕಾರ್ಡ್ ಕಳೆದು ಹೋದರೆ ಇದನ್ನು ನೀವು ಮೊದಲು ಮಾಡಬೇಕು! ವಾಪಾಸು ಪಡೆಯುವ ಬಗ್ಗೆ ಕಂಪ್ಲೀಟ್ ವಿವರ ಇಲ್ಲಿದೆ!

0 comments

ಆಧಾರ್ 12-ಅಂಕಿಯ ವಿಶಿಷ್ಟ ಸಂಖ್ಯೆಯಾಗಿದ್ದು, ಇದನ್ನು ಗುರುತಿನ ಉದ್ದೇಶಗಳಿಗಾಗಿ ಭಾರತ ಸರ್ಕಾರವು ಹೊರತಂದಿದ್ದು ತಿಳಿದಿರುವ ವಿಚಾರವೇ!!.. ಆಧಾರ್ ಕಾರ್ಡ್ ಹೊಂದಿರುವವರಿಗೆ ಮುಖ್ಯ ಮಾಹಿತಿ ಇದ್ದು, UIDAI ನಿಂದ ವಿಶೇಷ ನವೀಕರಣ ಮಾಡಲು ಮುಂದಾಗಿದ್ದು, ಇದು ದೇಶಾದ್ಯಂತ ಆಧಾರ್ ಕಾರ್ಡ್ ಹೊಂದಿರುವವರ ಮೇಲೆ ಪರಿಣಾಮ ಬೀರುವ ಸಾದ್ಯತೆ ದಟ್ಟವಾಗಿದೆ.

ಯಾವುದೇ ಸರ್ಕಾರಿ ಮತ್ತು ಸರ್ಕಾರೇತರ ಯೋಜನೆಗಳ ಲಾಭವನ್ನು ಪಡೆಯಬೇಕಾದರೆ, ಆಧಾರ್ ಅನ್ನು ಅಪ್ಡೇಟ್ ಮಾಡುವುದು ಅವಶ್ಯಕವಾಗಿದೆ. ಆದರೆ, ಈ ಆಧಾರ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು ಎನ್ನುವ ಗೊಂದಲ ಹಲವರಲ್ಲಿ ಮೂಡಿರಬಹುದು!! ಅದನ್ನು ಮರಳಿ ಪಡೆಯುವ ಬಗೆ ಹೇಗೆ??? ಎಂಬ ಪ್ರಶ್ನೆ ಸಹಜವಾಗಿ ಎಲ್ಲರಿಗೂ ಕಾಡುವಂತದ್ದೆ!!! ಹಾಗಿದ್ರೆ ಈ ಕುರಿತ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

ಭಾರತದ ನಾಗರಿಕರಿಗೆ ಆಧಾರ್‌ ಎನ್ನುವ ವಿಶೇಷ ಗುರುತಿನ ಸಂಖ್ಯೆ(UDI) ನೀಡುವ ಉದ್ದೇಶದಿಂದ ಯುಐಡಿಎಐ ಇದನ್ನು ಸ್ಥಾಪಿಸಿದ್ದು, ಹೀಗಾಗಿ ಯುಐಡಿ ಮೂಲಕ ಅಸಲಿ ಹಾಗೂ ನಕಲಿ ಗುರುತನ್ನು ಸುಲಭವಾಗಿ ಪರಿಶೀಲನೆ ಮಾಡಬಹುದಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಜನರಿಗೆ ತಮ್ಮ ಆಧಾರ್ ಕಾರ್ಡ್ ಹಾಗೂ ಅದರ ಪ್ರತಿಗಳನ್ನು ಎಲ್ಲಿಯೂ ಬಿಟ್ಟು ಬರದಂತೆ ಇತ್ತೀಚೆಗಷ್ಟೇ ಸೂಚನೆ ನೀಡಿದೆ.

ಸರಕಾರದ ಮೂಲಭೂತ ಸೌಕರ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಭಾರತದಲ್ಲಿ ಪ್ರತಿಯೊಬ್ಬ ನಾಗರಿಕ ಕೂಡ ಆಧಾರ್ ಕಾರ್ಡ್ (Aadhaar card) ಹೊಂದಿರುವುದು ಅತ್ಯಗತ್ಯವಾಗಿದೆ. ಆಧಾರ್ ಕಾರ್ಡ್​ ಅನ್ನು ವ್ಯಕ್ತಿಯ ಗುರುತನ್ನು ಸಂಕೇತಿಸುವ ಮೂಲ ದಾಖಲೆಯಾಗಿ ಕೂಡ ಪರಿಗಣಿಸಲಾಗುತ್ತದೆ. ಒಂದು ವೇಳೆ ಆಧಾರ್ ಕಾರ್ಡ್ ಕಳೆದು ಹೋದರೆ, ಆಧಾರ್ ಕಾರ್ಡನ್ನು ಮರಳಿ ಪಡೆಯುವ ಸಲುವಾಗಿ, ಕೇಂದ್ರ ಸರ್ಕಾರ ಇತರೆ ಸೌಲಭ್ಯವನ್ನು ಒದಗಿಸಿಕೊಟ್ಟಿದೆ. ಆಧಾರ್ ಕಳೆದುಕೊಂಡ ತಕ್ಷಣ ಅದನ್ನು ಲಾಕ್ ಮಾಡುವುದು ಅವಶ್ಯಕವಾಗಿದೆ. ಆಧಾರ್ ಕಾರ್ಡ್ ಕಳೆದು ಹೋದಲ್ಲಿ ಮೊದಲು ಆಧಾರ್ ಸಂಖ್ಯೆಯನ್ನ ಲಾಕ್ ಮಾಡಬೇಕಾಗಿದ್ದು ಆ ಬಳಿಕ ಅನ್​ಲಾಕ್ ಮಾಡುವ ಮೂಲಕ ಬಳಕೆ ಮಾಡಬಹುದು.

ಈ ಬಗ್ಗೆ ಯುಐಡಿಐಡಿ ಅಧಿಕೃತ ವೆಬ್​ಸೈಟ್​ನಲ್ಲಿ ಮಾಹಿತಿ ಪಡೆಯಬಹುದು.ಇದಕ್ಕಾಗಿ, ಮೊದಲಿಗೆ https://resident.uidai.in/ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬೇಕು. ಆ ಬಳಿಕ, ‘ನನ್ನ ಆಧಾರ್’ ಆಯ್ಕೆಯಲ್ಲಿ ‘ಆಧಾರ್ ಸರ್ವೀಸ್’ ಸೆಲೆಕ್ಟ್ ಮಾಡಬೇಕು. ಇಲ್ಲಿ ಲಾಕ್​ ಅನ್​ಬಯೋಮೆಟ್ರಿಕ್ ಆಧಾರ್ ಸರ್ವೀಸ್ ಆಯ್ಕೆ ಕಂಡುಬರುತ್ತದೆ. 12 ಅಂಕಿಯ ಆಧಾರ್ ಸಂಖ್ಯೆಯನ್ನ ನಮೂದಿಸುವ ಮೂಲಕ ಲಾಗ್ ಇನ್ ಆಗಬಹುದು. ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಸೆಂಡ್ ಓಟಿಪಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಒಟಿಪಿಯನ್ನೂ ಹಾಕಿದ ಮೇಲೆ ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡುವ ಆಯ್ಕೆ ಕಾಣಿಸುತ್ತದೆ. ಈಗ ಬಯೋಮೆಟ್ರಿಕ್ ಡೇಟಾವನ್ನು ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಲಾಕ್ ಆಗುತ್ತದೆ.

ಇದಲ್ಲದೆ, ನೀವು ಸರಳವಾಗಿ ಅಧಿಕೃತ ಯುಐಡಿಎಐ ವೆಬ್‌ಸೈಟ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ಬಳಸಿ ಮರಳಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಆಧಾರ್ ಕಾರ್ಡ್ ನೋಂದಣಿ ಸಂಖ್ಯೆಯನ್ನು ನೀಡುವ ಮೂಲಕ ಕೂಡ ಯುಐಡಿಎಐನ ಅಧಿಕೃತ ವೆಬ್​ಸೈಟ್‌ನಿಂದ ನಕಲಿ ಆಧಾರ್ ಕಾರ್ಡ್ ಪಡೆಯುವ ಸೌಲಭ್ಯ ರೂಪಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅನ್ನು ನೀಡಿದರೆ ಮಾತ್ರವೇ ಒಟಿಪಿ ಲಭ್ಯವಾಗುತ್ತದೆ. ಇದಕ್ಕಾಗಿ 50 ರೂ. ಶುಲ್ಕ ಪಾವತಿಸಬೇಕಾಗಿದ್ದು ಮೊಬೈಲ್ ನಂಬರ್ ಲಿಂಕ್ ಆಗಿದ್ದಲ್ಲಿ ನೋಂದಣಿ ಸಂಖ್ಯೆಯ ಅವಶ್ಯಕತೆ ಉಂಟಾಗದು. ಇಲ್ಲಿ ಒಟಿಪಿ ಲಿಂಕ್ ಮಾಡಿದ ಮೊಬೈಲ್ ನಂಬರ್​ಗೆ ಇಲ್ಲವೇ ಇ-ಮೇಲ್ ಐಡಿಗೆ ಮಾತ್ರ ರವಾನೆ ಮಾಡಲಾಗುತ್ತದೆ. ಈಗ ಪಡೆದ ಒಟಿಪಿಯನ್ನು ನಮೂದಿಸಿಕೊಂಡ ಬಳಿಕ ಧೃಡಿಕರಿಸಿದ ನಿಮ್ಮ ಆಧಾರ್ ಸಂಖ್ಯೆಯನ್ನು ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಐಡಿಗೆ ಕಳುಹಿಸಲಾಗುತ್ತದೆ. ಸ್ವೀಕರಿಸಿದ ಆಧಾರ್ ಸಂಖ್ಯೆಯನ್ನು ನಿಮ್ಮ ಆಧಾರ್ ಡೌನ್‌ಲೋಡ್ ಮಾಡಲು ಇಲ್ಲವೇ ಆಧಾರ್‌ನ ಮರುಮುದ್ರಣಕ್ಕೆ ಆದೇಶ ದೊರೆಯಲಿದೆ.

You may also like

Leave a Comment