Home » ಮೊದಲ ಪತ್ನಿಯನ್ನು ಕೊಂದು ಜೈಲು ಪಾಲಾಗಿದ್ದ ವ್ಯಕ್ತಿ ಬಂದು ಎರಡನೇದುವೆಯಾದ | ಈಗ ಅವಳನ್ನೂ ಕೊಂದು ಆಕೆಯ ತಂದೆ,ತಾಯಿಯನ್ನೂ ಕಡಿದೇ ಬಿಟ್ಟ

ಮೊದಲ ಪತ್ನಿಯನ್ನು ಕೊಂದು ಜೈಲು ಪಾಲಾಗಿದ್ದ ವ್ಯಕ್ತಿ ಬಂದು ಎರಡನೇದುವೆಯಾದ | ಈಗ ಅವಳನ್ನೂ ಕೊಂದು ಆಕೆಯ ತಂದೆ,ತಾಯಿಯನ್ನೂ ಕಡಿದೇ ಬಿಟ್ಟ

by Praveen Chennavara
0 comments

ಮೈಸೂರು : ಮೊದಲ ಪತ್ನಿಯನ್ನು ಕೊಂದು ಜೈಲುಪಾಲಗಿದ್ದ ವ್ಯಕ್ತಿ ವಾಪಾಸ್ ಬಂದು ಎರಡನೇ ಮದುವೆಯಾಗಿದ್ದ. ಈಗ ಎರಡನೇ ಪತ್ನಿಯನ್ನೂ ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದು ಇದನ್ನು ತಡೆಯಲು ಬಂದ ಅತ್ತೆ ಮಾವ ಸೇರಿ ನಾಲ್ವರ ಮೇಲೆ ದಾಳಿ ನಡೆಸಿದ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ನವಿಲೂರಿನಲ್ಲಿ ನಡೆದಿದೆ.

ಈರಯ್ಯ ಎಂಬಾತನೇ ಕೊಲೆಗೈದ ಕಿರಾತಕ.ಈತನ ಎರಡನೇ ಪತ್ನಿ ನಿಂಗವ್ವ ಮೃತಪಟ್ಟ ದುರ್ದೈವಿ. ಈರಯ್ಯ ಈ ಹಿಂದೆ ತನ್ನ ಮೊದಲ ಪತ್ನಿಯನ್ನು ಕೊಲೆ ಮಾಡಿ, ಜೈಲು ಸೇರಿ ಶಿಕ್ಷೆ ಅವಧಿ ಮುಗಿಸಿ ಬಂದು ನಿಂಗವ್ವಳನ್ನು ಎರಡನೇ ಮದುವೆಯಾದ.

ಈಗ ಎರಡನೇ ಪತ್ನಿಯನ್ನೂ ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆಮಾಡಿದ್ದಾನೆ ಈ ವೇಳೆ ನಿಂಗವ್ವ ಅವರ ತಾಯಿ, ತಂದೆ, ಮತ್ತಿಬ್ಬರು ಹಲ್ಲೆ ನಡೆಸುವುದನ್ನು ತಡೆಯಲು ಬಂದಿದ್ದಾರೆ.
ಆದರೆ ಈರಯ್ಯ ಅವರ ಮೇಲೂ ಮಾರಾಕಾಸ್ತ್ರದಿಂದ ದಾಳಿ ಮಾಡಿದ್ದಾನೆ, ಪರಿಣಾಮ ನಾಲ್ವರೂ ಗಂಭೀರ ಗಾಯಗೊಂಡಿದ್ದು ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿಂಗವ್ವಳ ತಂದೆ ಹಾಗೂ ತಾಯಿ ಸ್ಥಿತಿ ಗಂಭೀರವಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಈರಯ್ಯನನ್ನು ವಶಕ್ಕೆ ಪಡೆದಿದ್ದಾರೆ.

You may also like

Leave a Comment