Home » 12 ವರ್ಷಗಳ ದಾಂಪತ್ಯದಲ್ಲಿ ಬಿರುಕು!!ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪತಿ!!

12 ವರ್ಷಗಳ ದಾಂಪತ್ಯದಲ್ಲಿ ಬಿರುಕು!!ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪತಿ!!

0 comments

ಗಂಡ ಹೆಂಡತಿಯ ನಡುವಿನ ಜಗಳ ಹೆಂಡತಿಯ ಕೊಲೆ ಹಾಗೂ ಗಂಡನ ಆತ್ಮಹತ್ಯೆಯಲ್ಲಿ ಅಂತ್ಯಗೊಂಡ ಘಟನೆಯೊಂದು ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಪ್ರಿಯಾಂಕ ಲೇ ಔಟ್ ನಲ್ಲಿನ ಮನೆಯೊಂದರಲ್ಲಿನ ಅಡುಗೆ ಮನೆಯ ರಕ್ತದ ಮಡುವಿನಲ್ಲಿ ಪತ್ನಿ ಪತ್ತೆಯಾಗಿದ್ದು,ಮೃತ ಮಹಿಳೆಯನ್ನು ಮಂಜುಳ (30) ಎಂದು ಗುರುತಿಸಲಾಗಿದೆ.

ಪತಿ ದಿನೇಶ್ ಮೆಸ್ಕಾಂ ಉದ್ಯೋಗಿ ಎನ್ನಲಾಗಿದ್ದು, ಆತ ಸಹ ಕೈ ಕೊಯ್ದುಕೊಂಡಿದ್ದಾನೆ. ಆತನನ್ನು ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿದೆ.
ನಿನ್ನೆ ತುಂಗನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಪ್ರಿಯಾಂಕ ಲೇಔಟ್ ನಲ್ಲಿ ದಿನೇಶ್ ಮತ್ತು ಮಂಜುಳಾರ ನಡುವೆ ಗಲಾಟೆಯಾಗಿದ್ದು ಈ ಗಲಾಟೆಯೇ ಕೊಲೆಗೆ ಕಾರಣವಾಗಿದೆಯ ಎಂದು ಪತಿ ದಿನೇಶ್ ಪೊಲೀಸರ ಬಳಿ ಹೇಳಿದ್ದಾನೆ ಎನ್ನಲಾಗಿದೆ.

ಕೊಲೆಗೆ ಕಾರಣವೇನು ಎಂಬುದರ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಯಬೇಕಿದೆ. ಇನ್ನೂ ತನಿಖೆಯಿಂದ ತಿಳಿದು ಬರಬೇಕಿದೆ. ಮಂಜುಳ 12 ವರ್ಷಗಳವರೆಗೆ ದಿನೇಶ್’ನೊಂದಿಗೆ ಸಂಸಾರ ನಡೆಸಿದ್ದಾರೆ. ಮತ್ತಿಘಟ್ಟ ಮೂಲದ ಮಂಜುಳಾ ಅವರಿಗೆ ಎರಡು ಹೆಣ್ಣು ಮಕ್ಕಳಿದ್ದಾರೆ.
ಸ್ಥಳಕ್ಕೆ ತುಂಗ ನಗರ ಪೊಲೀಸರು ಭೇಟಿ ನೀಡಿದ್ದಾರೆ.

You may also like

Leave a Comment