Home » Crime News: 13 ರ ಅಪ್ರಾಪ್ತೆಯಿಂದ ತನ್ನ ತಾಯಿಯ ಭೀಕರ ಕೊಲೆ!!! ಅಲ್ಲಿತ್ತು ಅವನ ನೆರಳು!!!

Crime News: 13 ರ ಅಪ್ರಾಪ್ತೆಯಿಂದ ತನ್ನ ತಾಯಿಯ ಭೀಕರ ಕೊಲೆ!!! ಅಲ್ಲಿತ್ತು ಅವನ ನೆರಳು!!!

1 comment
Daughter killed Her Mother

Daughter killed Her Mother: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂನ ಕಂಬಳಪೇಟೆಯಲ್ಲಿ ಓದುವ ವಯಸ್ಸಿನಲ್ಲಿ ಪ್ರೀತಿ ಪ್ರೇಮದ(Love)ಬಲೆಯಲ್ಲಿ ಬೀಳದಂತೆ ಬುದ್ದಿವಾದ ಹೇಳಿದ ಹೆತ್ತ ತಾಯಿಯನ್ನೇ ತನ್ನ ಪ್ರಿಯಕರನ ಜೊತೆಗೆ ಸೇರಿಕೊಂಡು ಮಗಳೇ ಹತ್ಯೆ (Daughter killed Her Mother)ಮಾಡಿಸಿದ ಘಟನೆ ವರದಿಯಾಗಿದೆ.

ನಿವೃತ್ತ ಶಿಕ್ಷಕಿಯಾಗಿದ್ದ ಮಾರ್ಗರೇಟ್ ಜೂಲಿಯಾನ(63)ಮಕ್ಕಳಿಲ್ಲ ಎಂಬ ಕಾರಣಕ್ಕೆ 13 ವರ್ಷದ ಹಿಂದೆ ಹೆಣ್ಣು ಮಗುವನ್ನು ದತ್ತು ಪಡೆದಿದ್ದರು. ಪತಿ ಅನಾರೋಗ್ಯದಿಂದ ನಿಧನರಾದ ನಂತರ ಜೂಲಿಯಾನ ಅವರು ತನ್ನ ದತ್ತು ಪುತ್ರಿಯೊಂದಿಗೆ ಕಂಬಳಪೇಟೆಯಲ್ಲಿ ನೆಲೆಸಿದ್ದರು. ಜೂಲಿಯಾನ ಪುತ್ರಿಯನ್ನು ಯಾವುದೇ ಕೊರತೆ ಬಾರದ ರೀತಿಯಲ್ಲಿ ಸಾಕಿದ್ದರು. ಕೆಟ್ಟ ಚಟಗಳನ್ನೂ ಬೆಳೆಸಿಕೊಂಡ ಮಗಳಿಗೆ (Mother)ತಾಯಿ ಬುದ್ಧಿವಾದ ಹೇಳುತ್ತಿದ್ದರಂತೆ. ಹೀಗಾಗಿ, ಆಗಾಗ ತಾಯಿ ಮಗಳ ನಡುವೆ ಜಗಳ ಆಗಾಗ ನಡೆಯುತ್ತಿತ್ತು ಎನ್ನಲಾಗಿದೆ.

ಕೋಟ್ಯಂತರ ಆಸ್ತಿ ಹೊಂದಿದ್ದ ಜೂಲಿಯಾನ ಮಗಳಿಗೆ ಬೇಕಾದದ್ದುನ್ನೆಲ್ಲ ನೀಡುತ್ತಿದ್ದರು. ತಮ್ಮ 13ರ ಹರೆಯದ ಮಗಳು 19 ವರ್ಷದ ಹುಡುಗನನ್ನು ಪ್ರೀತಿಸುತ್ತಿರುವ ವಿಚಾರ ಸಾಕುತಾಯಿ ಜೂಲಿಯಾನ ಗೆ ಗೊತ್ತಾಗಿ ಓದುವ ವಯಸ್ಸಿನಲ್ಲಿ ಪ್ರೀತಿಯ ಬಲೆಗೆ ಬೀಳದಂತೆ ತಿಳಿ ಹೇಳಿದ್ದಾರೆ. ಆದರೆ, ತಾಯಿಯ ಮಾತಿನಿಂದ ಕೋಪಗೊಂಡ ಮಗಳು ಗೆಳೆಯನೊಂದಿಗೆ ಸೇರಿ, ಇನ್ನಿಬ್ಬರು ಯುವಕರ ನೆರವಿನಿಂದ ಸಾಕು ತಾಯಿ ಜೂಲಿಯಾನರನ್ನು ಕೊಲೆ ಮಾಡಿಸಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: BJP Ticket Fraud: ಬಯಲಾಯ್ತು ಮತ್ತೊಂದು BJP ಟಿಕೆಟ್ ವಂಚನೆ ಪ್ರಕರಣ- 2.25 ಕೋಟಿ ಪಡೆದು ನಡೆಯಿತು ಮಹಾ ಮೋಸ !!

You may also like

Leave a Comment