Home » ಎರಡನೇ ಮದುವೆಗೆ ತಯಾರಾದ ಐಎಎಸ್ ಅಧಿಕಾರಿ ಟೀನಾ!! ವಿಚ್ಛೇದನವಾಗಿ ಎರಡು ವರ್ಷಗಳ ಬಳಿಕ ಇನ್ನೊಂದು ಮದುವೆ-ವರನ್ಯಾರು ಗೊತ್ತೇನೆ ಓ ಕೋಗಿಲೆ

ಎರಡನೇ ಮದುವೆಗೆ ತಯಾರಾದ ಐಎಎಸ್ ಅಧಿಕಾರಿ ಟೀನಾ!! ವಿಚ್ಛೇದನವಾಗಿ ಎರಡು ವರ್ಷಗಳ ಬಳಿಕ ಇನ್ನೊಂದು ಮದುವೆ-ವರನ್ಯಾರು ಗೊತ್ತೇನೆ ಓ ಕೋಗಿಲೆ

0 comments

ಕಳೆದ 2018 ರಲ್ಲಿ ವಿವಾಹವಾಗಿ ಬಳಿಕ ಮೊದಲ ಪತಿಯಿಂದ ವಿಚ್ಛೇದನ ಪಡೆದು ಸುದ್ದಿಯಾಗಿದ್ದ ಐಎಎಸ್ ಅಧಿಕಾರಿ ಟೀನಾ ದಾಬಿ ಇನ್ನೊಂದು ಮದುವೆಗೆ ತಯಾರು ನಡೆಸಿದ್ದು ಈಗಾಗಲೇ ಐಎಎಸ್ ಅಧಿಕಾರಿ ಪ್ರದೀಪ್ ಗವಾಂಡೆ ಅವರೊಂದಿಗೆ ನಿಶ್ಚಿತಾರ್ಥ ಮುಗಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನಿಶ್ಚಿತಾರ್ಥದ ಫೋಟೋ ಹಂಚಿಕೊಂಡಿದ್ದು, ಸದ್ಯ ವೈರಲ್ ಆಗಿದೆ. ಅತ್ತ ವಧುವಿಗೆ ಇದು ಎರಡನೇ ಸಂಬಂಧವಾದರೆ ಇತ್ತ ವರ ಪ್ರದೀಪ್ ಅವರಿಗೂ ಟೀನಾ ಅವರೊಂದಿಗೆ ಎರಡನೇ ಸಂಬಂಧವಂತೆ.2015 ರಲ್ಲಿ ದಲಿತ ಸಮುದಾಯದಿಂದ ಪರೀಕ್ಷೆ ಬರೆದು ಅಗ್ರಸ್ಥಾನಗಿಟ್ಟಿಸಿಕೊಂಡ ಮೊದಲ ವ್ಯಕ್ತಿಯಾಗಿದ್ದು, ಮೊದಲ ಪತಿಯೊಂದಿಗೆ ತರಬೇತಿಯ ಸಮಯದಲ್ಲಿ ಪ್ರೀತಿ ಹುಟ್ಟಿಕೊಂಡಿತ್ತು.

ಮೂಲತಃ ದೆಹಲಿಯವರಾದ ಟೀನಾ 2018ರಲ್ಲಿ ಮೊದಲ ಪತಿಯೊಂದಿಗೆ ವಿವಾಹ ಜೀವನಕ್ಕೆ ಕಾಲಿಟ್ಟು,2020 ರ ನವೆಂಬರ್ ನಲ್ಲಿ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದರು. ಸದ್ಯ ಇನ್ನೊಂದು ಮದುವೆಗೆ ತಯಾರಾಗಿದ್ದು, ಐಎಎಸ್ ಅಧಿಕಾರಿಯನ್ನೇ ಪತಿಯಾಗಿ ಸ್ವೀಕರಿಸಲಿದ್ದಾರೆ.

You may also like

Leave a Comment