Home » SHOCKING: ಸರಸಕ್ಕೆಂದು ಮನೆಗೆ ಬಂದ 60 ರ ಪ್ರಿಯಕರನ ಮರ್ಮಾಂಗ ಕತ್ತರಿಸಿದ 55 ರ ಪ್ರಿಯತಮೆ

SHOCKING: ಸರಸಕ್ಕೆಂದು ಮನೆಗೆ ಬಂದ 60 ರ ಪ್ರಿಯಕರನ ಮರ್ಮಾಂಗ ಕತ್ತರಿಸಿದ 55 ರ ಪ್ರಿಯತಮೆ

0 comments

ವಿವಾಹೇತರ ಸಂಬಂಧದ ಇನ್ನೊಂದು ದುರ್ಘಟನೆ ಇದು. ಆದರೆ ಇದು ಯೌವನಾವಸ್ಥೆಯವರದ್ದಲ್ಲ. ವಯಸ್ಸು ಮೀರಿದವರ ಕಾಮಕೇಳಿಯ ಘಟನೆಯ ದಿ ಎಂಡಿಂಗ್ ಆದ ಘಟನೆ. ಅಂದ ಹಾಗೇ ಈ ಘಟನೆ ನಡೆದಿರುವುದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ‌. ಅದೇನೋ ಗಾದೆ ಇದೆಯಲ್ಲ ಹುಣಸೆ ಮರ ಹುಳಿ ಅಂತಾರಲ್ಲ ಅದು.

ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬನ ಮರ್ಮಾಂಗ ಕತ್ತರಿಸಿದ ಘಟನೆ ನಡೆದಿದೆ. ಪ್ರಿಯತಮೆಯೇ ಈ ಕೃತ್ಯವೆಸಗಿದ್ದಾಳೆ.

ಪ್ರಕಾಶಂ ಜಿಲ್ಲೆಯ ಕೊಂಡಪಿ ಮಂಡಲದ ಮುಗಚೆಂತಲದಲ್ಲಿ 60 ವರ್ಷದ ವ್ಯಕ್ತಿಯ ಮರ್ಮಾಂಗವನ್ನೇ 55 ವರ್ಷದ ಮಹಿಳೆ ಕತ್ತರಿಸಿದ್ದಾಳೆ.

55 ವರ್ಷದ ಪ್ರಿಯತಮೆ ಈ ರೀತಿ ಮಾಡಿದ್ದು ಯಾಕೋ ಏನೋ ? ಈ ಇಬ್ಬರ ನಡುವೆ ವಿವಾಹೇತರ ಅಕ್ರಮ ಸಂಬಂಧ ಬೆಳೆದಿತ್ತು. ಅದು ಕೂಡಾ ಬರೋಬ್ಬರಿ 10 ವರ್ಷಗಳಿಂದ ಇವರ ನಡುವೆ ಅಕ್ರಮ ಸಂಬಂಧವಿತ್ತು. 60 ವರ್ಷದ ವ್ಯಕ್ತಿಯು ತನ್ನ ಗೆಳತಿಯ ಮನೆಗೆ ಹೋದಾಗ ಆಕೆ ಬ್ಲೇಡ್ ನಿಂದ ಮರ್ಮಾಂಗ ಕತ್ತರಿಸಿದ್ದಾಳೆ.

ತೀವ್ರ ಗಾಯಗೊಂಡಿದ್ದ ವ್ಯಕ್ತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ನಡುವೆ ನಡೆದ ಜಗಳದ ವೇಳೆ ಮಹಿಳೆ ಕೃತ್ಯವೆಸಗಿದ್ದಾಳೆ. ಗಾಯಾಳುವಿನ ಸ್ಥಿತಿ ಚಿಂತಾಜನಕವಾಗಿದ್ದು, ಆಂಧ್ರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

You may also like

Leave a Comment