Driving Licence : ಡ್ರೈವಿಂಗ್ ಲೈಸೆನ್ಸ್ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪುಂದನು ನೀಡಿದ್ದು ಇದನ್ನು ಪಾಲಿಸದಿದ್ದರೆ ಭಾರಿ ದಂಡವನ್ನು ತೆರೆಯಬೇಕಾಗುತ್ತದೆ ಎಂದು ತಿಳಿಸಿದೆ.
ಹೌದು, ಸುಪ್ರೀಂ ಕೋರ್ಟ್ ಡ್ರೈವಿಂಗ್ ಲೈಸೆನ್ಸ್ ಕುರಿತು ಮಹತ್ವದ ತೀರ್ಪನ್ನು ನೀಡಿದೆ. ಅದೇನೆಂದರೆ ಡ್ರೈವಿಂಗ್ ಲೈಸೆನ್ಸ್ ಅವಧಿ ಮುಗಿದಾಗ ಇದನ್ನು ನವೀಕರಣ ಮಾಡಲು ಸುಮಾರು 30 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಆದರೆ ಇನ್ನು ಚಾಲನಾ ಪರವಾನಗಿ ಅವಧಿ ಮುಗಿದ ಮರುದಿನವೇ ಅದನ್ನು ನವೀಕರಣ ಮಾಡಬೇಕು ಎಂದು ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ನೇತೃತ್ವದ ಪೀಠ, ಮೋಟಾರ್ ವಾಹನ ಕಾಯ್ದೆಯಡಿ ಚಾಲನಾ ಪರವಾನಗಿ ಅವಧಿ ಮುಗಿದ ತಕ್ಷಣ ಅದನ್ನು ನವೀಕರಿಸದಿದ್ದರೆ ಅದು ಮಾನ್ಯವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೊದಲು ಇದ್ದ ನವೀಕರಣೆ 30 ದಿನಗಳವರೆಗೆ ವಾಹನ ಚಾಲನೆ ಅವಕಾಶ ಇನ್ನು ಇರುವುದಿಲ್ಲ. 2019ರ ತಿದ್ದುಪಡಿಯ ನಂತರ ಈ ನಿಯಮ ಬದಲಾಗಿದೆ. ಆದ್ದರಿಂದ ತಕ್ಷಣವೇ ಅದನ್ನು ರಿನೀವಲ್ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ದಂಡ ಕಟ್ಟಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.
