Indian Railways ಕೇರಳದ( Kerala) ಕಾಸರಗೋಡು( Kasaragod) ಬಳಿ ರೈಲ್ವೆ ಹಳಿಯಲ್ಲಿ ಕಲ್ಲು ಹಾಗೂ ಕ್ಲೋಸೆಟ್ ತುಂಡು ಇರಿಸಲಾದ ಘಟನೆ ಬೆಳಕಿಗೆ ಬಂದಿದೆ.
ರೈಲು ಹಳಿಯಲ್ಲಿ ಕಲ್ಲು ಹಾಗೂ ಕ್ಲೋಸೆಟ್ ನ ತುಂಡುಗಳನ್ನು ಇರಿಸಿದ ಘಟನೆ ಕಾಸರಗೋಡಿನ ಕೋಟಿಕುಲಂನ ಚೆಂಬರಿಕ ಸುರಂಗ ಸಮೀಪ ಬೆಳಕಿಗೆ ಬಂದಿದೆ. ಇದನ್ನು ಗಮನಿಸಿದವರು ಮಾಹಿತಿ ನೀಡಿದ ಬಳಿಕ ತೆಗೆದ ಹಾಕಲಾಗಿದ್ದು, ಇದರಿಂದ ಭಾರೀ ಅನಾಹುತವೊಂದು ತಪ್ಪಿದೆ.
ಕಾಸರಗೋಡಿನಿಂದ ಕೊಯಮತ್ತೂರು – ಮಂಗಳೂರು ಇಂಟರ್ ಸಿಟಿ( Coimbatore Mangalore Intercity Express) ಕಡೆಗೆ ಸಾಗುತ್ತಿದ್ದ ಎಕ್ಸ್ ಪ್ರೆಸ್ ರೈಲಿನ ಲೋಕೊ ಪೈಲಟ್ ಒಬ್ಬರಿಗೆ ರೈಲು ಹಾದು ಹೋಗುವ ಸಂದರ್ಭದಲ್ಲಿ ಏನೋ ಬಡಿದ ಶಬ್ದ ಕೇಳಿದೆ. ಇದರಿಂದ ಕಾಸರಗೋಡು ರೈಲ್ವೆ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ರೈಲ್ವೆ ಪೊಲೀಸರು ಹಾಗೂ ರೈಲ್ವೆ ಭದ್ರತಾ ಪಡೆ ಸ್ಥಳಕ್ಕೆ ತಲುಪಿ ತಪಾಸಣೆ ನಡೆಸಿದ ಸಂದರ್ಭ ರೈಲ್ವೇ ಕಲ್ಲು ಹಾಗೂ ತುಂಡಾದ ಕ್ಲೋಸೆಟ್ ಪತ್ತೆಯಾಗಿದೆ.ಈ ಕುರಿತು ತನಿಖೆ ನಡೆಸಲಾಗುತ್ತಿದ್ದು,ಹತ್ತಿರದ ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕಲಾಗುತ್ತಿದೆ ಎಂದು ವರದಿಯಾಗಿದೆ.
