Home » Instagram Love: Instagram ನಲ್ಲಿ ಸಿಕ್ಕ ಚೆಲುವೆಗೆ ಇಬ್ಬರ ನಡುವೆ ಕಾದಾಟ; 50 ಬಾರಿ ಇರಿದು ಕೊಂದೇ ಬಿಟ್ಟ ವ್ಯಕ್ತಿ!!!

Instagram Love: Instagram ನಲ್ಲಿ ಸಿಕ್ಕ ಚೆಲುವೆಗೆ ಇಬ್ಬರ ನಡುವೆ ಕಾದಾಟ; 50 ಬಾರಿ ಇರಿದು ಕೊಂದೇ ಬಿಟ್ಟ ವ್ಯಕ್ತಿ!!!

0 comments

Love Crime News: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಚೆಲುವೆಗಾಗಿ 18 ವರ್ಷದ ಯುವಕನೋರ್ವ 20 ವರ್ಷದ ಯುವಕನನ್ನು ಕೊಲೆ ಮಾಡಿರುವ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಸುಮಾರು 50 ಬಾರಿ ಚಾಕು ಇರಿದು ಯುವಕನನ್ನು ಕೊಲೆ ಮಾಡಲಾಗಿದೆ. ಇದೀಗ ಈ ಪ್ರಕರಣ ಇಡೀ ದೆಹಲಿ ಜನರನ್ನು ಆತಂಕಕ್ಕೀಡು ಮಾಡಿದೆ.

ದೆಹಲಿಯ ಭಗೀರಥಿ ವಿಹಾರದಲ್ಲಿ ಡಿ.27 (ಬುಧವಾರ) ರಾತ್ರಿ ಮಹೀರ್‌ (ಇಮ್ರಾನ್‌) ಎಂಬ ಯುವಕ ಹತ್ಯೆಯಾಗಿದ್ದಾನೆ. ಅರ್ಮಾನ್‌ ಎಂಬ ಯುವಕನೇ ಕೊಲೆ ಮಾಡಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಪೈಸಲ್‌ ಹಾಗೂ ಸಮೀರ್‌ ಎಂಬ ಗೆಳೆಯರ ಜೊತೆ ಬಂದಿದ್ದ ಅರ್ಮಾನ್‌, ಮಹೀರ್‌ ಗೆ 50 ಬಾರಿ ಚಾಕು ಇರಿದು ಹತ್ಯೆಯಾಗಿದ್ದಾನೆ. ಮೂವರಿಂದ ಸತತ ಚಾಕು ಇರಿತದ ಪರಿಣಾಮ ತೀವ್ರ ರಕ್ತಸ್ರಾವದಿಂದ ಮಹೀರ್‌ ಮೃತ ಹೊಂದಿದ್ದಾನೆ.

ಘಟನೆ ವಿವರ: ಮಹೀರ್‌ಗೆ ಇನ್‌ಸ್ಟಾಗ್ರಾಂನಲ್ಲಿ ಯುವತಿಯೋರ್ವಳ ಪರಿಚಯವಾಗಿದೆ. ನಂತರ ಇಬ್ಬರೂ ಮೊಬೈಲ್‌ನಲ್ಲಿ ಮಾತನಾಡುತ್ತಾ ಸಮಯ ಕಳೆದಿದ್ದಾರೆ. ವಿಡಿಯೋ ಕಾಲ್‌ ಕೂಡಾ ಇವರಿಬ್ಬರ ಮಧ್ಯೆ ನಡೆಯುತ್ತಿತ್ತು. ಆದರೆ ಯುವತಿ ಈಗಾಗಲೇ ಅರ್ಮಾನ್‌ ಎಂಬಾತನ ಜೊತೆ ಪ್ರೇಮ ಸಲ್ಲಾಪದಲ್ಲಿತ್ತು. ಯಾವಾಗ ಮಹೀರ್‌ನ ಜೊತೆ ಯುವತಿ ಮಾತುಕತೆ ಪ್ರಾರಂಭ ಮಾಡಿದ್ದಳೋ, ಅಲ್ಲಿಂದ ಇದು ಸಹ್ಯ ಅನಿಸಿಲ್ಲ. ಹಾಗಾಗಿ ನನ್ನ ಗರ್ಲ್‌ಫ್ರೆಂಡ್‌ನಿಂದ ದೂರ ಇರು ಎಂದ ಅರ್ಮಾನ್‌ ಆಗಾಗ ಎಚ್ಚರಿಕೆ ನೀಡಿದ್ದ. ಆದರೂ ಇಬ್ಬರು ಕ್ಯಾರೇ ಎನ್ನದೆ ಮಾತುಕತೆ ಮುಂದುವರಿಸಿದ್ದಾರೆ.

ಆದರೆ ಒಂದು ದಿನ ಯುವತಿ ಮತ್ತು ಮಹೀರ್‌ ವೀಡಿಯೋ ಕಾಲ್ ನಲ್ಲಿ ಇರುವಾಗಲೇ ಅರ್ಮಾನ್‌ ಎಂಟ್ರಿಯಾಗಿದೆ. ಸಿಟ್ಟುಗೊಂಡ ಅರ್ಮಾನ್‌ ಮೊಬೈಲ್‌ ಕಸಿದುಕೊಂಡು ಮಹೀರ್‌ಗೆ ಫೋನ್‌ನಲ್ಲಿ ಎಚ್ಚರಿಕೆ ನೀಡಿದ್ದಾನೆ. ಆದರೆ ಇಬ್ಬರೂ ಮಾತುಕತೆ ಮುಂದುವರಿಸಿದ್ದಾರೆ. ಹಾಗಾಗಿ ಮಹೀರ್‌ ಇರುವ ಜಾಗಕ್ಕೆ ತೆರಳಿ ಚಾಕು ಇರಿಯಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿದೆ. ಇದೀಗ ಪೊಲೀಸರು ಅರ್ಮಾನ್‌ ಆತನ ಇಬ್ಬರು ಗೆಳೆಯರನ್ನು ಬಂಧಿಸಿದ್ದಾರೆ.

 

You may also like

Leave a Comment