Home » ವಿಶ್ವದಲ್ಲೇ ಅತ್ಯಂತ ಹಳೆಯ ಧರ್ಮವಾದ ಇಸ್ಲಾಂಗೆ ಭಾರತವೇ ಮೊದಲ ತಾಯ್ನಾಡು | ಮೋದಿ, ಮೋಹನ್ ಭಾಗವತರಷ್ಟೇ ನಮಗೂ ಇಲ್ಲಿ ಹಕ್ಕಿದೆ ಎಂದ ಜಮೈತ್​ ಉಲೇಮಾ ಎ ಹಿಂದ್​ ಮುಖ್ಯಸ್ಥ !!

ವಿಶ್ವದಲ್ಲೇ ಅತ್ಯಂತ ಹಳೆಯ ಧರ್ಮವಾದ ಇಸ್ಲಾಂಗೆ ಭಾರತವೇ ಮೊದಲ ತಾಯ್ನಾಡು | ಮೋದಿ, ಮೋಹನ್ ಭಾಗವತರಷ್ಟೇ ನಮಗೂ ಇಲ್ಲಿ ಹಕ್ಕಿದೆ ಎಂದ ಜಮೈತ್​ ಉಲೇಮಾ ಎ ಹಿಂದ್​ ಮುಖ್ಯಸ್ಥ !!

by ಹೊಸಕನ್ನಡ
0 comments

ಇಸ್ಲಾಂ ವಿಶ್ವದಲ್ಲೇ ಅತ್ಯಂತ ಹಳೆಯ ಧರ್ಮ, ಪ್ರಧಾನಿ ಮೋದಿ ಮತ್ತು RSSನ ಮೋಹನ್​ ಭಾಗವತ್​ ಅವರಿಗೆ ಭಾರತದ ಮೇಲೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ನಮಗೂ ಇದೆ. ಮುಸ್ಲಿಮರಿಗೆ ಭಾರತವೇ ಮೊದಲ ತಾಯ್ನಾಡು ಎಂದು ಜಮೈತ್​ ಉಲೇಮಾ ಎ ಹಿಂದ್​ ಮುಖ್ಯಸ್ಥ ಮಹಮೂದ್​ ಮದನಿ ಹೇಳಿದ್ದಾರೆ.

ಹೌದು, ಇಸ್ಲಾಂ ವಿಶ್ವದಲ್ಲೇ ಅತ್ಯಂತ ಹಳೆಯ ಧರ್ಮ. ಭಾರತ ನಮ್ಮ ದೇಶ. ಪ್ರಧಾನಿ ಮೋದಿ ಮತ್ತು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ ಅವರಿಗೆ ಭಾರತದ ಮೇಲೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ನಮಗೂ ಇದೆ. ಅವರಿಗೆ ಭಾರತ ಎಷ್ಟು ಸೇರಿದ್ದೋ, ಅಷ್ಟೇ ಮುಸ್ಲಿಮರಿಗೂ ಸೇರಿದ್ದಾಗಿದೆ. ಮಹಮೂದ್, ಅವರಿಗಿಂತ ಒಂದು ಇಂಚು ಮುಂದಿಲ್ಲ ಅಥವಾ ಮಹಮೂದ್‌ಗಿಂತ ಅವರು ಒಂದು ಇಂಚು ಮುಂದಿಲ್ಲ ಎಂದು ಜಮೈತ್​ ಉಲೇಮಾ ಎ ಹಿಂದ್​ ಮುಖ್ಯಸ್ಥ ಮಹಮೂದ್​ ಮದನಿ ಶುಕ್ರವಾರ ನವದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ತಮ್ಮ ಸಂಘಟನೆಯ 34ನೇ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಈ ಹೇಳಿಕೆಯನ್ನು ನೀಡಿದ್ದಾರೆ.

ಅಲದೆ ಭಾರತಕ್ಕೆ ಇಸ್ಲಾಂ ಧರ್ಮ ಹೊರಗಿನಿಂದ ಬಂದಿದೆ ಎಂಬುದು ಸುಳ್ಳು. ಹಿಂದಿ ಮುಸ್ಲಿಮರಿಗೆ ಭಾರತವು ಅತ್ಯುತ್ತಮ ದೇಶವಾಗಿದೆ. ಎಲ್ಲ ಧರ್ಮಗಳಿಗಿಂತ ಇಸ್ಲಾಂ ಧರ್ಮ ತುಂಬಾ ಹಳೆಯದು ಎಂದ ಮಹಮೂದ್ ದೇಶದಲ್ಲಿ ದ್ವೇಷ ಭಾಷಣ ಮತ್ತು ಇಸ್ಲಮೋಫೋಬಿಯಾ ಹೆಚ್ಚುತ್ತಿದೆ ಬಲವಂತದ ಧಾರ್ಮಿಕ ಮತಾಂತರವನ್ನು ನಾವು ಕೂಡ ವಿರೋಧಿಸುತ್ತೇವೆ. ಸ್ವಯಂಪ್ರೇರಣೆಯಿಂದ ತಮ್ಮ ಧರ್ಮವನ್ನು ಪರಿವರ್ತಿಸುವ ಜನರನ್ನು ಕೂಡ, ಸುಳ್ಳು ಆರೋಪದ ಮೇಲೆ ಜೈಲಿಗೆ ಕಳುಹಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಭಾರತ ಸರ್ವಧರ್ಮಗಳ ನೆಲೆಯಾಗಿದ್ದು, ಎಲ್ಲ ಧರ್ಮಗಳನ್ನೂ ಗೌರವಿಸುವುದು ಈ ಮಣ್ಣಿನ ಗುಣ. ಧರ್ಮ ವ್ಯಕ್ತಿಯ ಖಾಸಗಿ ವಿಷಯವಾಗಿದ್ದು, ಇತ್ತೀಚಿಗೆ ಈ ಹಕ್ಕಿನ ಮೇಲೆ ದಾಳಿ ಮಾಡಲಾಗುತ್ತಿದೆ. ಭಾರತದ ಮುಸ್ಲಿಮರು ಎರಡನೇ ದರ್ಜೆಯ ಪ್ರಜೆಗಳಲ್ಲ. ಅವರೂ ಕೂಡ ದೇಶದ ಇತರ ಪ್ರಜೆಗಳಂತೆ ಏಲ್ಲಾ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಮಹಮೂದ್‌ ಮದನಿ ಸ್ಪಷ್ಟಪಡಿಸಿದರು.

ಬಲವಂತವಾಗಿ ನಡೆಯುವ ಧಾರ್ಮಿಕ ಮತಾಂತರಕ್ಕೆ ನಮ್ಮ ವಿರೋಧವಿದೆ. ಧಾರ್ಮಿಕ ಸ್ವಾತಂತ್ರ್ಯದ ಭಾರತದ ಪ್ರಜೆಯ ಮೂಲಭೂತ ಹಕ್ಕು. ಬಲವಂತ, ವಂಚನೆ, ದುರಾಸೆಯಿಂದ ಮತಾಂತರ ಮಾಡುವುದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ನಮಾಝ್ ನಿಷೇಧ, ಅಲ್ಪಸಂಖ್ಯಾತರ ಮನೆಗಳ ಮೇಲೆ ಬುಲ್ಡೋಜರ್ ಕ್ರಮವನ್ನು ಉದಾಹರಣಣೆಗಳನ್ನು ನೀಡಿ ಅಸಮಾಧಾನ ಹೊರಹಾಕಿದರು.

You may also like

Leave a Comment