Home » ಪರಪ್ಪನ ಅಗ್ರಹಾರ : ರೌಡಿಶೀಟರ್ ಗೆ ಜೈಲಿನ ಅಧಿಕಾರಿಗಳಿಂದ ವಿಶೇಷ ಆರೈಕೆ|ಸೂಕ್ತ ಕ್ರಮ ಕೈಗೊಳ್ಳುತ್ತೇವೆ -ಗೃಹ ಸಚಿವ ಆರಗ ಜ್ಞಾನೇಂದ್ರ

ಪರಪ್ಪನ ಅಗ್ರಹಾರ : ರೌಡಿಶೀಟರ್ ಗೆ ಜೈಲಿನ ಅಧಿಕಾರಿಗಳಿಂದ ವಿಶೇಷ ಆರೈಕೆ|ಸೂಕ್ತ ಕ್ರಮ ಕೈಗೊಳ್ಳುತ್ತೇವೆ -ಗೃಹ ಸಚಿವ ಆರಗ ಜ್ಞಾನೇಂದ್ರ

by Praveen Chennavara
0 comments

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ರೌಡಿ ಶೀಟರ್ ಗೆ ಜೈಲು ಅಧಿಕಾರಿಗಳಿಂದ ವಿಶೇಷ ಆರೈಕೆ ನೀಡಲಾಗುತ್ತಿರುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು.ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹಸಚಿವ ಆರಗ ಜ್ಞಾನೇಂದ್ರ ಅವರು,ಪರಪ್ಪನ ಅಗ್ರಹಾರದಲ್ಲಿ ಅಕ್ರಮ ಚುಟುವಟಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಜೈಲಿನ ಘಟನೆಗಳ ಬಗ್ಗೆ ತನಿಖೆಯನ್ನು ನಡೆಸುತ್ತೆವೆ.

ತಪ್ಪಿತಸ್ಥ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ,ಭಯೋತ್ಪಾದನೆ, ತೀವ್ರ ಕುಕೃತ್ಯದಲ್ಲಿ ಭಾಗಿಯಾದವರು ಇರುವ ಸೆಲ್ ಗಳಿಗೆ ನಿಯಂತ್ರಣ ಹಾಕುತ್ತೇವೆ. ಪರಪ್ಪನ ಅಗ್ರಹಾರದಲ್ಲಿ ಜಾಮರ್ ಅಳವಡಿಸುವ ಬಗ್ಗೆ ಯೋಚನೆ ಮಾಡಲಾಗುತ್ತಿದೆ.ಈ ಬಗ್ಗೆ ಸಿಎಂ ಜೊತೆ ಮಾತನಾಡಿ, ಕ್ರಮಕೈಗೊಳ್ಳುತ್ತೇವೆ ಎಂದರು.

You may also like

Leave a Comment