Home » Milkshake ನಲ್ಲಿ ಗಾಂಜಾ ಮಿಕ್ಸ್ ಮಾಡಿ ಮಾರಾಟ | ಅಂಗಡಿ ಮೇಲೆ ಅಧಿಕಾರಿಗಳಿಂದ ದಿಢೀರ್ ದಾಳಿ

Milkshake ನಲ್ಲಿ ಗಾಂಜಾ ಮಿಕ್ಸ್ ಮಾಡಿ ಮಾರಾಟ | ಅಂಗಡಿ ಮೇಲೆ ಅಧಿಕಾರಿಗಳಿಂದ ದಿಢೀರ್ ದಾಳಿ

by Mallika
0 comments

ಹಾಲಿನ ಉತ್ಪನ್ನದಲ್ಲಿ ಗಾಂಜಾ ಮಿಕ್ಸ್ ಮಾಡಿ ಜ್ಯೂಸ್ ರೂಪದಲ್ಲಿ ಜನರಿಗೆ ನೀಡುತ್ತಿದ್ದ ವ್ಯಕ್ತಿಯೋರ್ವನ ಅಂಗಡಿಯೊಂದರ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಿಲ್ಕ್ಶೇಕ್‌ನಲ್ಲಿ ಗಾಂಜಾ ಮಿಕ್ಸ್ ಮಾಡಿ ಮಾರಲಾಗುತ್ತಿದೆ ಎಂಬ ಗುಮಾನಿಯ ಮೇರೆಗೆ ಕೇರಳದ ಕೋಜಿಕೋಡ್‌ನಲ್ಲಿ ಜ್ಯೂಸ್ ಅಂಗಡಿಯೊಂದರ ಮೇಲೆ ಮಾದಕ ದ್ರವ್ಯ ನಿಗ್ರಹ ವಿಶೇಷ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಗಾಂಜಾ ಬೀಜವನ್ನು ಎಣ್ಣೆಯಾಗಿ ಪರಿವರ್ತಿಸಿ ಜ್ಯೂಸ್‌ಗೆ ಮಿಶ್ರಣ ಮಾಡಿ ಮಾರುತ್ತಿರುವುದು ಪತ್ತೆಯಾಗಿದೆ.

ಜ್ಯೂಸ್ ಅಂಗಡಿ ಮಾಲೀಕ ಮಾತ್ರ ಈ ಆರೋಪವನ್ನು ನಿರಾಕರಿಸಿದ್ದಾನೆ. ತನ್ನ ಅಂಗಡಿಯಲ್ಲಿದ್ದಿದ್ದು ಸೆಣಬಿನ ಬೀಜ ಎಂದು ಹೇಳಿರುವುದಾಗಿ ತಿಳಿದು ಬಂದಿದೆ. ಸೆ. 6 ರಂದು ಕೋಜಿಕೋಡ್‌ನ ಗುಜರಾತಿ ಬೀದಿಯಲ್ಲಿರುವ ಜ್ಯೂಸ್ ಸ್ಟಾಲ್ ಮೇಲೆ ಜಾರಿ ಮತ್ತು ಮಾದಕ ದ್ರವ್ಯ ನಿಗ್ರಹ ವಿಶೇಷ ದಳದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದರು.

ಜ್ಯೂಸ್ ಸ್ಟಾಲ್‌ಗಳಿಂದ ಸೆಣಬಿನ ಬೀಜದ (Hemp seed)ಎಣ್ಣೆ ಮತ್ತು ಗಾಂಜಾ ಬೀಜದ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದೆ, ಅಲ್ಲದೇ ಜ್ಯೂಸ್ ಅಂಗಡಿ ವಿರುದ್ಧ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಇಂತಹ ಹಲವು ಜ್ಯೂಸ್ ಶಾಪ್‌ಗಳು ರಾಜ್ಯದ ಎಲ್ಲಾ ಕಡೆ ಇರಬಹುದು ಎಂದು ಅಬಕಾರಿ ಇಲಾಖೆ ಸಂಶಯ ವ್ಯಕ್ತಪಡಿಸಿದೆ. ಅಷ್ಟು ಮಾತ್ರವಲ್ಲದೇ, ಹೆಚ್ಚೆಚ್ಚು ವಿದ್ಯಾರ್ಥಿಗಳು ಬರುತ್ತಿದ್ದಾರೆಯೇ ಎಂಬುದರ ಬಗ್ಗೆಯೂ ಅಬಕಾರಿ ಇಲಾಖೆ ಪರಿಶೀಲಿಸುತ್ತಿದೆ.

ಆದರೆ ಜ್ಯೂಸ್ ಶಾಪ್ ಮಾಲೀಕ ಈ ಆರೋಪವನ್ನು ನಿರಾಕರಿಸಿದ್ದಾನೆ. ತಾನು ಸೆಣಬಿನ ಬೀಜವನ್ನು ಜ್ಯೂಸ್‌ನಲ್ಲಿ ಬಳಸಿದ್ದೆ. ಆಹಾರದಲ್ಲಿ ಸೆಣಬಿನ ಬೀಜ ಬಳಕೆಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕಾನೂನುಬದ್ಧವಾಗಿ ಅನುಮತಿ ನೀಡಿದೆ ಎಂದು ಅಂಗಡಿ ಮಾಲೀಕರು ಹೇಳಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾವೊಂದರಲ್ಲಿ(social media) ಗುಜರಾತ್ ಸ್ಟ್ರೀಟ್‌ನಲ್ಲಿ (Gujarati Street) ಇರುವ ಜ್ಯೂಸ್ ಶಾಪೊಂದರಲ್ಲಿ ಜ್ಯೂಸ್‌ಗೆ ಗಾಂಜಾ ಮಿಕ್ಸ್ ಮಾಡಿ ಮಾರಲಾಗುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ

ರಾಜ್ಯದ ಹಲವು ಕಡೆ ಇಂತಹ ಜ್ಯೂಸ್ ಶಾಪ್‌ಗಳು ಕಾರ್ಯಾಚರಿಸುತ್ತಿವೆ ಎಂದು ಅಬಕಾರಿ ಇಲಾಖೆ ಸಂಶಯ ವ್ಯಕ್ತಪಡಿಸಿದೆ. ಅಲ್ಲದೇ ಈ ಸ್ಥಳಗಳಿಗೆ ಹೆಚ್ಚೆಚ್ಚು ವಿದ್ಯಾರ್ಥಿಗಳು ಬರುತ್ತಿದ್ದಾರೆಯೇ ಎಂಬುದರ ಬಗ್ಗೆಯೂ ಅಬಕಾರಿ ಇಲಾಖೆ ಪರಿಶೀಲಿಸುತ್ತಿದ್ದು, ಪ್ರಯೋಗಾಲಯದ ವರದಿ ಬಂದ ಬಳಿಕ ಮುಂದಿನ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.

You may also like

Leave a Comment