Free Electricity: ರಾಜ್ಯ ಕಾಂಗ್ರೆಸ್ (Congress) ಈ ಬಾರಿ 5 ಗ್ಯಾರಂಟಿಗಳ (5 guarantees) ಭರವಸೆ ನೀಡಿ, ಇದೀಗ ನುಡಿದಂತೆ ನಡೆದುಕೊಂಡಿದೆ. ಹಾಗೆಯೇ 200 ಯುನಿಟ್ ಉಚಿತ ವಿದ್ಯುತ್ (200 units of free electricity) ನೀಡುವ ಯೋಜನೆ ಬಗ್ಗೆ ಅಧಿಕೃತ ಘೋಷಣೆ ಕೂಡ ಆಗಿದೆ. ಸದ್ಯ ಎಲ್ಲರ ಬಾಯಲ್ಲೂ, ಮನಸ್ಸಲ್ಲೂ ವಿದ್ಯುತ್ ಫ್ರೀ ಎಂಬ ಖುಷಿ ದಟ್ಟವಾಗಿದೆ. ಆದರೆ ಯಾರಿಗೆಲ್ಲಾ 200 ಯುನಿಟ್ ಉಚಿತ ವಿದ್ಯುತ್ ಸಿಗುತ್ತೆ ಅನ್ನೋ ಗೊಂದಲ ಕೂಡ ಒಂದು ಕಡೆಯಲ್ಲಿ ಇದೆ.
ಮುಖ್ಯವಾಗಿ ರಾಜ್ಯ ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ ಕೂಡ ಒಂದಾಗಿದೆ. ಇದರ ಅನ್ವಯ ಪ್ರತಿ ಕುಟುಂಬಕ್ಕೆ 200 ಯುನಿಟ್‌ವರೆಗೆ ವಿದ್ಯುತ್ ಅನ್ನು ಉಚಿತವಾಗಿ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ.
ಸರ್ಕಾರ ನೀಡಿರುವ ಮಾಹಿತಿಯಂತೆ ಇದೇ ಜುಲೈ 1, ಶನಿವಾರದಿಂದ ಈ ಯೋಜನೆ ರಾಜ್ಯಾದ್ಯಂತ ಜಾರಿಗೆ ಬರಲಿದೆ. ರಾಜ್ಯದ ಪ್ರತಿ ಕುಟುಂಬಕ್ಕೆ ಅಂದರೆ ಎಪಿಎಲ್ ಹಾಗೂ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಎಲ್ಲಾ ಕುಟುಂಬಕ್ಕೂ ಉಚಿತವಾಗಿ 200 ಯುನಿಟ್ ವಿದ್ಯುತ್ ನೀಡಲಾಗುತ್ತದೆ. ಆದರೆ ಅದಕ್ಕಿಂತ ಹೆಚ್ಚು ವಿದ್ಯುತ್ ಬಳಸಿದರೆ ಅದಕ್ಕೆ ಬಿಲ್ ಪಾವತಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಮುಖ್ಯವಾಗಿ ಉಚಿತ ವಿದ್ಯುತ್ ಯೋಜನೆ ಜಾರಿಯಾಗುವುದು ಜುಲೈ 1ರಿಂದ. ಹೀಗಾಗಿ ನೀವು ಜೂನ್ ತಿಂಗಳ ವಿದ್ಯುತ್ ಬಿಲ್ ಅನ್ನು ಜುಲೈ ತಿಂಗಳಲ್ಲಿ ಕಟ್ಟಲೇ ಬೇಕು. ಆದರೆ ಅದರ ಬಳಿಕ ಜುಲೈ ತಿಂಗಳ ಬಿಲ್ ಅನ್ನು ಆಗಷ್ಟ್‌ನಲ್ಲಿ ಪಾವತಿಸಬೇಕಿಲ್ಲ.
ನೆನಪಿರಲಿ, ಜುಲೈ 1ರವರೆಗೆ ಬಳಕೆ ಮಾಡಿರುವ ವಿದ್ಯುತ್‌ನ ಯಾವುದೇ ಶುಲ್ಕ ಪಾವತಿ ಬಾಕಿ ಇಟ್ಟುಕೊಳ್ಳುವಂತಿಲ್ಲ. ಈ ಬಾಕಿ ಪಾವತಿಗೆ 3 ತಿಂಗಳ ಗಡುವು ವಿಧಿಸಿ ಪೂರ್ಣ ಪ್ರಮಾಣದ ಶುಲ್ಕ ವಸೂಲಿ ಮಾಡಲಾಗುತ್ತದೆ.
ಆದರೆ, ಸರ್ಕಾರ ಗರಿಷ್ಠ 200 ಯುನಿಟ್ ವಿದ್ಯುತ್ ಉಚಿತ ಎಂದು ಘೋಷಿಸಿದ್ದರೂ ಫಲಾನುಭವಿಗಳು ಎಲ್ಲವನ್ನೂ ಪಡೆಯುವುದಿಲ್ಲ. ಅಂದರೆ
ವಿದ್ಯುತ್ ಬಳಕೆಯ ಹಿಂದಿನ 12 ತಿಂಗಳ ಸರಾಸರಿಯನ್ನು ಲೆಕ್ಕಹಾಕಲಾಗುತ್ತದೆ.
ಅದಕ್ಕೆ ಶೇಕಡಾ 10ರಷ್ಟು ಹೆಚ್ಚುವರಿ ಯುನಿಟ್‌ಗಳನ್ನು ಕೂಡಿಸಲಾಗುತ್ತದೆ.
ಆ ಪ್ರಮಾಣ ಎಷ್ಟಿರುತ್ತದೆಯೋ ಅಷ್ಟು ಬಳಕೆಯವರೆಗೆ ಮಾತ್ರ ಉಚಿತ ವಿದ್ಯುತ್ ನೀಡಲಾಗುತ್ತದೆ.
ಕಳೆದ 1 ವರ್ಷದಲ್ಲಿ ಪ್ರತಿ ತಿಂಗಳು ನೀವು ಈ ರೀತಿ ಯುನಿಟ್ ವಿದ್ಯುತ್ ಬಳಸಿದ್ದೀರಿ ಎಂದುಕೊಳ್ಳೋಣ. ಜನವರಿ 80 ಯುನಿಟ್, ಫೆಬ್ರವರಿ 79 ಯುನಿಟ್, ಮಾರ್ಚ್ 100 ಯುನಿಟ್, ಏಪ್ರಿಲ್ 60 ಯುನಿಟ್, ಮೇ 160 ಯುನಿಟ್, ಜೂನ್ 100 ಯುನಿಟ್, ಜುಲೈ 99 ಯುನಿಟ್, ಅಗಸ್ಟ್ 180 ಯುನಿಟ್, ಸಪ್ಟೆಂಬರ್ 125 ಯುನಿಟ್, ಅಕ್ಟೋಬರ್ 90 ಯುನಿಟ್, ನವೆಂಬರ್ 180 ಯುನಿಟ್, ಡಿಸೆಂಬರ್ 75 ಯುನಿಟ್ ಬಳಸಿದ್ದೀರಿ ಅಂದುಕೊಳ್ಳಿ. ಅಂದರೆ ನೀವು ಒಂದು ವರ್ಷದಲ್ಲಿ ಒಟ್ಟು 1328 ಯುನಿಟ್ ವಿದ್ಯುತ್ ಬಳಸಿದ್ದೀರಿ. ಅಂದರೆ ಸರಾಸರಿ 102.15 ಯುನಿಟ್ ವಿದ್ಯುತ್ ಬಳಸಿದ್ದೀರಿ. ಇದರ ಮೇಲೆ ಶೇಕಡಾ 10ರಷ್ಟು ಸೇರಿಸಿ ಸುಮಾರು 113ರಷ್ಟು ಉಚಿತ ವಿದ್ಯುತ್ ಅನ್ನು ಪ್ರತಿ ತಿಂಗಳು ನೀಡಲಾಗುತ್ತದೆ.
ಈ ಯೋಜನೆಗೆ ಯಾರೆಲ್ಲ ಅರ್ಹರಾಗುತ್ತಾರೆ:
ಪ್ರತಿ ತಿಂಗಳು 200 ಯುನಿಟ್‌ವರೆಗೆ ವಿದ್ಯುತ್ ಬಳಕೆ ಮಾಡುವ ಬಳಕೆದಾರರು ಈ ಯೋಜನೆಯ ಫಲಾನುಭವಿಗಳಾಗುತ್ತಾರೆ. ಎಪಿಎಲ್, ಬಿಪಿಎಲ್ ಪಡಿತರ ಚೀಟಿದಾರರು, ಆದಾಯ ತೆರಿಗೆ ಪಾವತಿ ಮಾಡುತ್ತಿರುವ ಕುಟುಂಬದವರೂ ಸಹ ಈ ಯೋಜನೆಯ ಉಪಯೋಗ ಪಡೆಯಬಹುದು.
ಇನ್ನು ಬಾಡಿಗೆ ಮನೆಯಲ್ಲಿರುವವರು ಉಚಿತ ವಿದ್ಯುತ್ ಪಡೆಯಬಹುದು, ಅಂದರೆ
ಬಾಡಿಗೆದಾರರು ಬಿಲ್ ಕಟ್ಟುತ್ತಿದ್ದರೆ ಉಚಿತ ವಿದ್ಯುತ್ ನೀಡಲಾಗುತ್ತದೆ.
ಆದರೆ ಒಂದು ಕಟ್ಟಡದಲ್ಲಿ ಒಂದಕ್ಕಿಂತ ಹೆಚ್ಚು ಆರ್ಆರ್ ನಂಬರ್ ಇದ್ದರೆ ಹೊಂದಿದ್ದರೆ ಅದನ್ನು ಕಮರ್ಷಿಯಲ್ ಎಂದು ಪರಿಗಣಿಸಲಾಗುವುದು. ಕಮರ್ಷಿಯಲ್ ಕಸ್ಟಮರ್ ಅಥವಾ ವಾಣಿಜ್ಯ ಬಳಕೆದಾರರಿಗೆ ‘ಗೃಹಜ್ಯೋತಿ’ ಯೋಜನೆ ಅನ್ವಯಿಸುವುದಿಲ್ಲ.
ಇದನ್ನೂ ಓದಿ: ಯುವನಿಧಿ ನಿರುದ್ಯೋಗ ಭತ್ಯೆ ಮತ್ತು ಅನ್ನಭಾಗ್ಯ ಯೋಜನೆಯಮಾರ್ಗಸೂಚಿ ಪ್ರಕಟ: ಯಾರಿಗೆ ಸಿಗತ್ತೆ, ಯಾರಿಗೆ ಸಿಗಲ್ಲ ?!
