Home » ಕಡಬ: ಹೂವು ತರಲೆಂದು ಪೇಟೆಗೆ ಬಂದು ಹಿಂದಿರುಗುತ್ತಿದ್ದಾಗ ಕಳಾರ ಸಮೀಪ ಬೈಕ್ ಸ್ಕಿಡ್-ನವ ದಂಪತಿಗಳು ಗಂಭೀರ!! ಗಾಯಳುಗಳನ್ನು ಆಸ್ಪತೆಗೆ ಸಾಗಿಸಲು ಸ್ಥಳೀಯರ ನೆರವು-ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ

ಕಡಬ: ಹೂವು ತರಲೆಂದು ಪೇಟೆಗೆ ಬಂದು ಹಿಂದಿರುಗುತ್ತಿದ್ದಾಗ ಕಳಾರ ಸಮೀಪ ಬೈಕ್ ಸ್ಕಿಡ್-ನವ ದಂಪತಿಗಳು ಗಂಭೀರ!! ಗಾಯಳುಗಳನ್ನು ಆಸ್ಪತೆಗೆ ಸಾಗಿಸಲು ಸ್ಥಳೀಯರ ನೆರವು-ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ

0 comments

ಕಡಬ: ನವ ದಂಪತಿಗಳು ಸಂಚರಿಸುತ್ತಿದ್ದ ಬೈಕ್ ಗೆ ನಾಯಿಯೊಂದು ಅಡ್ಡ ಬಂದ ಪರಿಣಾಮ ಬೈಕ್ ಸ್ಕಿಡ್ ಆಗಿ ನವ ದಂಪತಿಗಳು ಗಂಭೀರ ಗಾಯಗೊಂಡ ಘಟನೆ ಕಡಬ ಸಮೀಪದ ಕಳಾರ ಎಂಬಲ್ಲಿ ಇಂದು ಮುಂಜಾನೆ ನಡೆದಿದೆ. ಗಂಭೀರ ಗಾಯಗೊಂಡವರನ್ನು ಹೊಸಮಠ ಕತ್ತರಿಗುಡ್ಡೆ ನಿವಾಸಿಗಳಾದ ಪ್ರಸಾದ್ ಹಾಗೂ ಜ್ಯೋತಿ ಎಂದು ಗುರುತಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ: ಮನೆಯ ಸಮೀಪ ನಡೆಯುತ್ತಿರುವ ನೇಮೋತ್ಸವದ ಹಿನ್ನೆಲೆಯಲ್ಲಿ ಹೂವು ತರಲೆಂದು ದಂಪತಿಗಳು ಬೈಕಿನಲ್ಲಿ ಕಡಬಕ್ಕೆ ಆಗಮಿಸಿ ಹಿಂದಿರುಗುತ್ತಿದ್ದ ವೇಳೆ ಕಳಾರ ಎಂಬಲ್ಲಿ ದಂಪತಿ ಚಲಿಸುತ್ತಿದ್ದ ಬೈಕ್ ಗೆ ನಾಯಿಯೊಂದು ಅಡ್ಡ ಬಂದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿದೆ.

ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ಹೊಸಮಠದ ಆಟೋ ಚಾಲಕರೊಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ಕಡಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.

ಸ್ಥಳಕ್ಕೆ ಕಡಬ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಗಾಯಳುಗಳನ್ನು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಸಾಗಿಸಲು ನೇರವಾದ ಸ್ಥಳೀಯರಾದ ರಾಘವ ಕಳಾರ,ಅಶೋಕ್ ರೈ ಹಾಗೂ ಆಟೋ ಚಾಲಕ ರೋಷನ್ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

You may also like

Leave a Comment