2
ಕಡಬ: ಮನೆಯಿಂದ ಹೊರ ಹೋದ ಯುವತಿಯೋರ್ವಳು ಮನೆಗೆ ಬಾರದೆ ನಾಪತ್ತೆಯಾದ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರು, ಯುವತಿ ತನ್ನ ಪ್ರಿಯಕರನೊಂದಿಗೆ ವಿವಾಹವಾಗಿ ಪತ್ತೆಯಾಗುವ ಮೂಲಕ ಸುಖಾಂತ್ಯಗೊಂಡಿದೆ.
ಕಡಬ ತಾಲೂಕಿನ ಕೋಡಿಂಬಾಳ ಗಾಣದಗುಂಡಿ ನಿವಾಸಿ ರಮೇಶ್ ಎಂಬವರ ಪುತ್ರಿ ದಿವ್ಯ(22) ಬುಧವಾರದಂದು ಮನೆಯಿಂದ ತೆರಳಿ, ಬಳಿಕ ರಾತ್ರಿಯಾದರು ಮನೆಗೆ ಬಂದಿಲ್ಲವೆಂದು ಯುವತಿಯ ತಂದೆ ನೀಡಿದ ದೂರಿಂನಂತೆ ಕಡಬ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬೆನ್ನಟ್ಟಿದ ಪೊಲೀಸರು ಯುವತಿ ಹಾಗೂ ಆಕೆಯ ಪ್ರಿಯಕರ ರುಕ್ಮಯ್ಯ ಮುಗೇರರನ್ನು ಧರ್ಮಸ್ಥಳ ದಲ್ಲಿ ಪತ್ತೆಹಚ್ಚಿ ಠಾಣೆಗೆ ಕರೆತಂದರು.ಯುವತಿ ಆಕೆಯ ಪ್ರಿಯಕರನೊಂದಿಗೆ ವಿವಾಹವಾಗಿದ್ದು,ನಾಪತ್ತೆ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಠಾಣಾ ಎಸ್ಐ ರುಕ್ಮ ನಾಯ್ಕ್ ನಿರ್ದೇಶನದಂತೆ ಸಿಬ್ಬಂದಿಗಳಾದ ಶಿವಪ್ರಸಾದ್, ಹಾಗೂ ಶ್ರೀ ಶೈಲ ಪಾಲ್ಗೊಂಡಿದ್ದರು.
