Home » Kalladka Prabhakar Bhat: ಮುಸ್ಲಿಂ ಹೆಣ್ಮಕ್ಕಳಿಗೆ ಪರ್ಮನೆಂಟ್‌ ಗಂಡ ದೊರಕಿರುವುದು ಮೋದಿಯಿಂದಾಗಿ- ಕಲ್ಲಡ್ಕ ಪ್ರಭಾಕರ್‌ ಭಟ್‌

Kalladka Prabhakar Bhat: ಮುಸ್ಲಿಂ ಹೆಣ್ಮಕ್ಕಳಿಗೆ ಪರ್ಮನೆಂಟ್‌ ಗಂಡ ದೊರಕಿರುವುದು ಮೋದಿಯಿಂದಾಗಿ- ಕಲ್ಲಡ್ಕ ಪ್ರಭಾಕರ್‌ ಭಟ್‌

1 comment

Kalladka Prabhakar Bhat: ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ “ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಸರಕಾರದಿಂದ ತ್ರಿವಳಿ ತಲಾಕ್‌(triple Talaq) ರದ್ದಾಗಿದೆ. ಹಾಗಾಗಿ ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್‌ ಗಂಡ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ ಸರಕಾರ ಎಂದು ಹಿಂದು ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ (Kalladka Prabhakar Bhat) ಹೇಳಿದ್ದಾರೆ. ಮುಸಲ್ಮಾನ ಹುಡುಗರು ಮಾತ್ರವಲ್ಲ ಮಹಿಳೆಯರೂ ಮತಾಂತರ ಮಾಡುತ್ತಿದ್ದಾರೆ. ಹಿಂದೂ ಹುಡುಗಿಯರನ್ನು ಯಾಕೆ ಟಾರ್ಗೆಟ್‌ ಮಾಡ್ತೀರಾ? ನಿಮ್ಮ ತ್ರಿವಳಿ ತಲಾಖೆ ತೆಗೆದು ಹಾಕಿದ್ದು ನರೇಂದ್ರ ಮೋದಿ ಅಲ್ಲವೇ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಶಾಲೆಗಳಲ್ಲಿ ಸಮವಸ್ತ್ರವನ್ನು ಕಡ್ಡಾಯ ಮಾಡಲಾಗಿದೆ. ಸಮವಸ್ತ್ರ ಜಾರಿ ಮಾಡಿದ್ದು ಏಕರೂಪತೆ ತರುವ ಉದ್ದೇಶದಿಂದ. ಮಕ್ಕಳಲ್ಲಿ ಯಾಕೆ ತಾರತಮ್ಯ ಹುಟ್ಟು ಹಾಕುವಿರಿ ಸಿದ್ದರಾಮಯ್ಯನವೇ? ಅಲ್ಪಸಂಖ್ಯಾತರಿಗೆ 10000 ಕೋಟಿ ರೂ. ಕೊಡುವುದಾಗಿ ಹೇಳಿದ್ದೀರಿ. ಯಾರಪ್ಪನ ಮನೆಯ ದುಡ್ಡು ಕೊಡುತ್ತೀರಿ? ತೆರಿಗೆ ಕಟ್ಟುವುದು ಹಿಂದೂಗಳು, ನಮ್ಮ ಹಣ ಅಲ್ಪಸಂಖ್ಯಾತರಿಗೆ ಕೊಡುತ್ತೀರಾ ಎಂದು ಗುಡುಗಿದ್ದಾರೆ.

You may also like

Leave a Comment