Home » ಎರಡರ ಮಗ್ಗಿ ಹೇಳಿಲ್ಲ ಎಂದು ವಿದ್ಯಾರ್ಥಿಗೆ ಈ ರೀತಿಯಾ ಮಾಡೋದಾ ಶಿಕ್ಷಕ| ಈತ ಶಿಕ್ಷಕನಾ ಅಥವಾ ರಾಕ್ಷಸನಾ?

ಎರಡರ ಮಗ್ಗಿ ಹೇಳಿಲ್ಲ ಎಂದು ವಿದ್ಯಾರ್ಥಿಗೆ ಈ ರೀತಿಯಾ ಮಾಡೋದಾ ಶಿಕ್ಷಕ| ಈತ ಶಿಕ್ಷಕನಾ ಅಥವಾ ರಾಕ್ಷಸನಾ?

0 comments

ಇತ್ತೀಚೆಗೆ ಶಾಲೆಯಲ್ಲಿ ಮಕ್ಕಳಿಗೆ ಸಣ್ಣ ಪುಟ್ಟ ವಿಷಯಕ್ಕೆಲ್ಲ ಮಾರಣಾಂತಿಕವಾಗಿ ಹಲ್ಲೆ ಆಗುವ ವರದಿಯನ್ನು ಕೇಳಿರಬಹುದು. ಈಗ ಅಂತಹುದೇ ಒಂದು ಮಾರಣಾಂತಿಕ ಘಟನೆಯೊಂದು ನಡೆದಿದೆ ಶಾಲೆಯೊಂದರಲ್ಲಿ.

ವಿದ್ಯಾರ್ಥಿಯೋರ್ವ ಎರಡರ ಮಗ್ಗಿಯನ್ನು ತಪ್ಪಾಗಿ ಹೇಳಿದಕ್ಕೆ ಆತನ ಕೈಯನ್ನು ಡ್ರಿಲ್ ಮಷಿನ್ ಮೂಲಕ ಶಿಕ್ಷಕ ಗಾಯಗೊಳಸಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ.

ಈ ಘಟನೆ ಕಾನ್ಪುರದ ಅಪ್ಪರ್ ಪ್ರೈಮರಿ ಸ್ಕೂಲ್ ಮಾಡೆಲ್ ಪ್ರೇಮ್ ನಗರದಲ್ಲಿ ನಡೆದಿದೆ. ಕೌಶಲ್ಯ ತರಬೇತಿ ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಶಾಲೆಗಳಲ್ಲಿ ತರಬೇತಿ ಪಾಠಗಳನ್ನು ನೀಡುವ ಐಬಿಟಿ ಸಂಸ್ಥೆಗೆ ಸಂಯೋಜಿತವಾಗಿರುವ ಬೋಧಕರೊಬ್ಬರು 5ನೇ ತರಗತಿಯ ವಿದ್ಯಾರ್ಥಿ ಎರಡರ ಮಗ್ಗಿಯನ್ನು ಹೇಳಲಿಲ್ಲ ಎಂಬ ಕಾರಣಕ್ಕೆ ಡ್ರಿಲ್ ಮಷಿನ್ ಮೂಲಕ ಆತನ ಕೈಯನ್ನು ಗಾಯಗೊಳಿಸಿದ್ದಾರೆ.

5 ನೇ ತರಗತಿಯ ವಿದ್ಯಾರ್ಥಿ ವಿವಾನ್ ಗಾಯಗೊಂಡ ವಿದ್ಯಾರ್ಥಿ. ಅನಂತರ ಈತ ನಡೆದ ಘಟನೆಯನ್ನು ತನ್ನ ಪೋಷಕರಲ್ಲಿ ಹೇಳಿದ್ದಾನೆ. ಗಾಬರಿಗೊಂಡ ಪೋಷಕರು ಶಾಲೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆರೋಪಿ ಶಿಕ್ಷಕನನ್ನು ಅನುಜ್ ಎಂದು ಗುರುತಿಸಲಾಗಿದ್ದು, ತರಗತಿಗೆ ಡ್ರಿಲ್ ಮಷಿನ್ ತೆಗೆದುಕೊಂಡು ಬಂದಿದ್ದನು. ನಂತರ ಎರಡರ ಮಗ್ಗಿಯನ್ನು ಹೇಳಲಿಲ್ಲ ಎಂದು ಡ್ರಿಲ್ ಮಷಿನ್ ಆನ್ ಮಾಡಿ ವಿದ್ಯಾರ್ಥಿಯ ಕೈಗೆ ಸ್ಪರ್ಶಿಸಿದ್ದಾನೆ. ಇದೇ ವೇಳೆ ಪಕ್ಕದಲ್ಲಿಯೇ ನಿಂತಿದ್ದ ಕೃಷ್ಣ ಎಂಬ ವಿದ್ಯಾರ್ಥಿ ಡ್ರಿಲ್ ಮಷಿನ್‍ನ ಪ್ಲಗ್ ತೆಗೆದಿದ್ದಾನೆ. ಆದರೂ ವಿವಾನ್ ಎಡಗೈಗೆ ಗಾಯವಾಗಿದ್ದು, ರಕ್ತಸ್ರಾವವಾಗಿದೆ.

ತಕ್ಷಣವೇ ಬಾಲಕನಿಗೆ ಸಣ್ಣಪುಟ್ಟ ಚಿಕಿತ್ಸೆ ನೀಡಿ ಶಾಲೆಯಿಂದ ಕಳುಹಿಸಲಾಗಿದೆ. ಅಲ್ಲದೇ ಶಿಕ್ಷಕಿ ಅಲ್ಕಾ ತ್ರಿಪಾಠಿ ಈ ವಿಚಾರವನ್ನು ಯಾವುದೇ ಉನ್ನತ ಅಧಿಕಾರಿಗಳಿಗೆ ತಿಳಿಸದೇ ಸುಮ್ಮನಿದ್ದುದ್ದು ಹಲವು ಅನುಮಾನಗಳಿಗೆ ಅನುವು ಮಾಡಿಕೊಟ್ಟಿದೆ. ಆದರೆ ಶುಕ್ರವಾರ ಈ ಘಟನೆ ಬಗ್ಗೆ ಪೋಷಕರು ಗಲಾಟೆ ಶುರು ಮಾಡಿದ ಬಳಿಕ ಮೇಲಾಧಿಕಾರಿಗಳಿಗೆ ವಿಚಾರ ಮುಟ್ಟಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಬಿಎಸ್‍ಎ ಸುರ್ಜಿತ್ ಕುಮಾರ್ ಸಿಂಗ್ ಸ್ಥಳಕ್ಕೆ ಆಗಮಿಸಿ, ವಿಚಾರಣೆ ನಡೆಸಿ ಶಿಕ್ಷಕನನ್ನು ಶಾಲೆಯಿಂದ ತೆಗೆದುಹಾಕಲಾಗುತ್ತಿದೆ. ಜೊತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

You may also like

Leave a Comment