Home » School Teacher Kidanap: ಬೆಳ್ಳಂಬೆಳಗ್ಗೆಯೇ ಹಾಸನದಲ್ಲಿ ಶಾಲಾ ಶಿಕ್ಷಕಿಯ ಕಿಡ್ನಾಪ್ !!

School Teacher Kidanap: ಬೆಳ್ಳಂಬೆಳಗ್ಗೆಯೇ ಹಾಸನದಲ್ಲಿ ಶಾಲಾ ಶಿಕ್ಷಕಿಯ ಕಿಡ್ನಾಪ್ !!

1 comment
School Teacher Kidanap

School Teacher Kidnap: ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯನ್ನು (Teacher) ದುಷ್ಕರ್ಮಿಗಳು ಬೆಳ್ಳಂಬೆಳಗ್ಗೆ ಸಿನಿಮೀಯ ರೀತಿಯಲ್ಲಿ ಅಪಹರಿಸಿರುವ (Kidnap) ಘಟನೆ ಹಾಸನ (Hassan) ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ನಡೆದಿದೆ ಎನ್ನಲಾಗಿದೆ.

ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕಿಯನ್ನು ಅಪಹರಿಸಿದ(School Teacher Kidanap) ಘಟನೆ ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ವರದಿಯಾಗಿದೆ. ಗುರುವಾರ ಬೆಳಗ್ಗೆ ಶಿಕ್ಷಕಿ ಶಾಲೆಗೆ ಹೋಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ ಎನ್ನಲಾಗಿದೆ. 15 ದಿನಗಳ ಹಿಂದೆ ಶಿಕ್ಷಕಿ ಅರ್ಪಿತಾ ಮನೆಯಲ್ಲಿ ಸಂಬಂಧಿ ರಾಮು ಮತ್ತು ಪೋಷಕರು ಮದುವೆ ಮಾತುಕತೆಗೆ ಬಂದಿದ್ದಾರೆ. ಈ ಮದುವೆ ಪ್ರಸ್ತಾಪಕ್ಕೆ ಶಿಕ್ಷಕಿ ಅರ್ಪಿತಾ ಮತ್ತು ಪೋಷಕರು ಒಪ್ಪದ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಅರ್ಪಿತಾ ಅವರನ್ನು ರಾಮು ಅಪಹರಿಸಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Physical Abuse: ಒಂಟಿಯಾಗಿ ಓಡಾಡುವ ಮಹಿಳೆಯರಿಗೆ ಕಾಮುಕನ ಕಾಟ- ನಂತರ ಏನಾಯ್ತು?!

You may also like

Leave a Comment