Home » Karnataka Government: ಸರಕಾರಿ ನೌಕರರೇ ಬಂದಿದೆ ಹೊಸದೊಂದು ಸುತ್ತೋಲೆ; ಗಂಟೆಗಟ್ಟಲೆ, ಕಾಫಿ, ಟೀಗೆಂದು ಹೋಗ್ತೀರಾ? ಕಠಿಣ ಕ್ರಮ ಜಾರಿ!!!

Karnataka Government: ಸರಕಾರಿ ನೌಕರರೇ ಬಂದಿದೆ ಹೊಸದೊಂದು ಸುತ್ತೋಲೆ; ಗಂಟೆಗಟ್ಟಲೆ, ಕಾಫಿ, ಟೀಗೆಂದು ಹೋಗ್ತೀರಾ? ಕಠಿಣ ಕ್ರಮ ಜಾರಿ!!!

by Mallika
0 comments

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ ಅವರು ಕಂದಾಯ ಇಲಾಖೆಯ ಎಲ್ಲಾ ನೌಕರರಿಗೆ ಕಚೇರಿ ಸಮಯದಲ್ಲಿ ಗಂಟೆಗಟ್ಟಲೆ ಕಾಫಿ, ಟೀ, ಉಪಹಾರಕ್ಕೆಂದು ತೆರಳುವುದು, ಸಂತೆ ಬೀದಿಯಲ್ಲಿ ಓಡಾಡುತ್ತಿರುವುದಕ್ಕೆ ಎಚ್ಚರಿಕೆ ನೀಡಿದ್ದಾರೆ.

ನೌಕರರು ಪ್ರತಿದಿನ ಬೆಳಗ್ಗೆ 10.30 ರೊಳಗಾಗಿ ಕಡ್ಡಾಯವಾಗಿ ಕಚೇರಿಯಲ್ಲಿ ಹಾಜರಿರಬೇಕು. ಸಂಜೆ ಕಚೇರಿಯಿಂದ ತೆರಳುವ ಸಮಯದಲ್ಲಿ ಸಂಬಂಧಪಟ್ಟ ಶಾಖೆಯ ಜಂಟಿ/ಉಪಕಾರ್ಯದರ್ಶಿ ಅನುಮತಿ ಪಡೆದು ತೆರಳಬೇಕೆಂದು ಕಂದಾಯ ಇಲಾಖೆಯ ಎಲ್ಲಾ ನೌಕರರಿಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ ಸೂಚನೆ ನೀಡಿದ್ದಾರೆ.

ಕಚೇರಿ ಸಮಯದಲ್ಲಿ ಸಿಬ್ಬಂದಿ ಶಾಖೆಯಲ್ಲಿ ಹಾಜರಿಲ್ಲದೆ ಗಂಟೆಗಟ್ಟಲೆ ಕಾಫಿ, ಟೀ, ಉಪಹಾರಕ್ಕೆಂದು ಹೋಗುವುದು, ಸಂತೆ ಬೀದಿಯಲ್ಲಿ ಓಡಾಡುತ್ತಿರುವುದು ಗಮನಕ್ಕೆ ಬಂದಿರುವುದರಿಂದ ಅಂತಹ ನೌಕರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಕುರಿತು ಶನಿವಾರ ಆದೇಶ ಹೊರಡಿಸಲಾಗಿದೆ.

You may also like

Leave a Comment