Home » Karnataka High Court: ‘ಈ ಟೈಪ್’ ಹೆಂಡತಿಯರು ಗಂಡಂದಿರ ಬಳಿ ಜೀವನಾಂಶ ಕೇಳುವಂತಿಲ್ಲ !! ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್

Karnataka High Court: ‘ಈ ಟೈಪ್’ ಹೆಂಡತಿಯರು ಗಂಡಂದಿರ ಬಳಿ ಜೀವನಾಂಶ ಕೇಳುವಂತಿಲ್ಲ !! ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್

0 comments
Karnataka High Court

Karnataka High Court Order On Divorce :ಕರ್ನಾಟಕ ಹೈಕೋರ್ಟ್‌ ವಿಚ್ಛೇದನದ(Karnataka High Court Order On Divorce) ಬಳಿಕ ಹೆಂಡತಿಗೆ ಅಕ್ರಮ ಸಂಬಂಧ ಹೊಂದಿದ್ದರೆ ಆಗ ಜೀವನಾಂಶ ನೀಡುವ ಕುರಿತು ಮಹತ್ವದ ತೀರ್ಪು ಪ್ರಕಟಿಸಿದೆ.

ಚಿಕ್ಕಮಗಳೂರು ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಕ್ರಿಮಿನಲ್‌ ಪುನರ್‌ ಪರಿಶೀಲನಾ ಅರ್ಜಿ ವಿಚಾರಣೆ ವೇಳೆ ನ್ಯಾ.ರಾಜೇಂದ್ರ ಬಾದಾಮಿಕರ್‌ ಅವರಿದ್ದ ಏಕಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ. ಮದುವೆಯಾಗಿದ್ದರು ಕೂಡ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಅಕ್ರಮ ಸಂಬಂಧವಿಟ್ಟುಕೊಂಡು ಸಹಜೀವನ ನಡೆಸುತ್ತಿರುವ ಮಹಿಳೆ ಪತಿಯಿಂದ ಜೀವನಾಂಶ ನಿರೀಕ್ಷಿಸುವುದು ಸರಿಯಲ್ಲ ಎಂದು ಹೈಕೋರ್ಟ್‌ ಹೇಳಿದೆ.

ಅರ್ಜಿದಾರ ಮಹಿಳೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಓಡಿ ಹೋಗಿರುವ ಸಂಬಂಧ ದೂರು ದಾಖಲಾಗಿದ್ದು, ಈ ಪ್ರಕರಣದ ತನಿಖೆ ವೇಳೆ ಆಕೆ ತನ್ನ ಆಪ್ತನೊಂದಿಗೆ ನೆಲೆಸಲು ಬಯಸಿದ್ದಾರೆ. ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಇದೇ ಆಧಾರದಲ್ಲಿ ವಿಚ್ಛೇದನ ಕೂಡ ಮಂಜೂರಾಗಿದೆ. ಇದಲ್ಲದೆ, ಅರ್ಜಿದಾರರನ್ನು ಪ್ರಶ್ನಿಸಿದಾಗ ಜೀವನ ನಡೆಸಲು ಯಾವುದೇ ಆದಾಯದ ಮೂಲಗಳಿಲ್ಲವೆಂದು ಮಾಹಿತಿ ನೀಡಿದ್ದಾರೆ. ಆದರೆ, ಸಾಕ್ಷ್ಯಾಧಾರ ಗಮನಿಸಿದ ಮಹಿಳೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಆರಾಮದಾಯಕ ಜೀವನ ನಡೆಸುತ್ತಿದ್ದು, ಜೀವನ ನಿರ್ವಹಣೆಗೆ ಯಾವುದೇ ಸಮಸ್ಯೆಯಿಲ್ಲ ಎಂಬ ವಿಚಾರ ಬಯಲಾಗಿದೆ. ಹೀಗಾಗಿ, ಈ ” ಅರ್ಜಿದಾರರಿಗೆ ಪತಿಯ ಕಡೆಯಿಂದ ಯಾವುದೇ ಪರಿಹಾರ ನೀಡಲಾಗದು,” ಎಂದು ಹೇಳಿದೆ. ಇದರ ಜೊತೆಗೆ, ನ್ಯಾಯ ಪೀಠ, ” ಅರ್ಜಿದಾರರು ಅಕ್ರಮ ಸಂಬಂಧ ಹೊಂದಿದ್ದು, ಅವರು ಪತಿಗೆ ಪ್ರಾಮಾಣಿಕರಿಲ್ಲದೆ ಇದ್ದ ಸಂದರ್ಭದಲ್ಲಿ ಪತಿಯಿಂದ ಜೀವನಾಂಶ ನೀಡಬೇಕೆಂಬ ವಾದ ಸರಿಯಲ್ಲ. ಇದರ ಜೊತೆಗೆ ಪತಿ ಕಡೆಯಿಂದ ಯಾವುದೇ ನಿರೀಕ್ಷೆ ಮಾಡಬಾರದು,” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: Free Sewing Machine:ಮಹಿಳೆಯರೇ, ಉಚಿತ ಹೊಲಿಗೆಯಂತ್ರ ಬೇಕೆಂದ್ರೆ ಈ ಕೂಡಲೇ ಅರ್ಜಿ ಸಲ್ಲಿಸಿ ; ಇಲ್ಲಿದೆ ನೋಡಿ ಹೆಚ್ಚಿನ ಡೀಟೇಲ್ಸ್

You may also like

Leave a Comment