Home » KSRTC: ಉಚಿತ ಬಸ್ ಬುಕ್ ಮಾಡಲು ಮಹಿಳೆಯರ ನೂಕುನುಗ್ಗಲು, KSRTC ಸರ್ವರ್ ಔಟ್ !

KSRTC: ಉಚಿತ ಬಸ್ ಬುಕ್ ಮಾಡಲು ಮಹಿಳೆಯರ ನೂಕುನುಗ್ಗಲು, KSRTC ಸರ್ವರ್ ಔಟ್ !

by ಹೊಸಕನ್ನಡ
0 comments

KSRTC BUS Booking : ರಾಜ್ಯಾದ್ಯಂತ ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರ ಸಡಗರಕ್ಕೆ ಕಾರಣವಾದ ಉಚಿತ ಬಸ್ ಯೋಜನೆ ಜೂನ್ 11ರ ಮಧ್ಯಾಹ್ನ 1 ಗಂಟೆಯಿಂದ ಮಹಿಳೆಯರಿಗೆ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಸಿಕ್ಕಿತ್ತು. ಮಹಿಳೆಯರು ಕೂಡಾ ಹಲವು ಸಂಭ್ರಮ ಮತ್ತು ಕನಸು ಹೇರಿಕೊಂಡು ಪ್ರಯಾಣಕ್ಕೆ ಹೊರಟಿದ್ದರು. ಈ ಬೆನ್ನಲ್ಲೇ ಮಹಿಳಾಮಣಿಗಳಿಗೆ ಮುಂಗಡವಾಗಿ ಸಾರಿಗೆ ಬಸ್ಸುಗಳಲ್ಲಿ ಟಿಕೆಟ್ ಬುಕ್ (KSRTC BUS Booking ) ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಈ ಸೌಲಭ್ಯವನ್ನು ಸಮಗ್ರವಾಗಿ ಬಳಕೆ ಮಾಡಲು ಹೊರಟಿರುವ ಮಹಿಳೆಯರು ಬಸ್ ಟಿಕೆಟ್ ಬುಕಿಂಗ್ ಗಾಗಿ ಮುಗಿಬಿದ್ದಿದ್ದಾರೆ. ಮಹಿಳೆಯರ ನೂಕುನುಗ್ಗಲು ಕೆಎಸ್ಆರ್ಟಿಸಿ ಸರ್ವರ್ ಡೌನ್ ಆಗಿರುವುದಾಗಿ ಹೇಳಲಾಗುತ್ತಿದೆ. ಈಗ ಸರ್ವರ್, ‘ ಒಂದು ನಿಮಿಷದ ನಂತರ ಸಂಪರ್ಕಿಸಲು ಪ್ರಯತ್ನಿಸಿ’ ಅನ್ನುತ್ತಿದೆ. ಆದರೆ ಗಂಟೆಗಳವರೆಗೆ ಓಪನ್ ಆಗುತ್ತಿಲ್ಲ.

ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ಮಾಡಿ ಟಿಕೆಟ್ ಕಾದಿರಿಸಲು ಕೆಎಸ್ಆರ್ಟಿಸಿ ವೆಬ್ ಸೈಟ್ ಗೆ ತೆರಳಿ ಜನರು ಟಿಕೆಟ್ ಬುಕ್ಕಿಂಗ್ ಮಾಡಲು ಮುಗಿಬಿದ್ದಿದ್ದಾರೆ. ಏಕಾಏಕಿ ಮುಂಗಡ ಟಿಕೆಟ್ ಬುಕ್ಕಿಂಗ್ ಹೆಚ್ಚಾದ ಕಾರಣ, ಸರ್ವರ್ ಮೇಲೆ ಲೋಡ್ ಬಿದ್ದು, ತಾಂತ್ರಿಕ ಸಮಸ್ಯೆ ಉಂಟಾಗಿದೆಯಂತೆ. ಕೆಲವರ ಟಿಕೆಟ್ ಬುಕ್ ಆಗದೇ ಪರದಾಡುವಂತೆ ಆಗಿದೆ. ಕೆ ಎಸ್ ಆರ್ ಟಿ ಸಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೂ ಯಾವುದೇ ರೆಸ್ಪಾನ್ಸ್ ಇಲ್ಲ ಎಂಬುದಾಗಿ ಆಕ್ರೋಶವನ್ನು ಹೊರ ಹಾಕಿದ್ದಾರೆ. ಟೆಕ್ನಿಕಲ್ ಸಮಸ್ಯೆಯಿಂದ ಹೀಗೆ ಆಗಿದ್ದು, ಶೀಘ್ರ ಸಮಸ್ಯೆ ಸರಿಪಡಿಸಲಾಗುತ್ತದೆ. ಹಣ ಕಡಿತ ಆಟೋಮೇಟೆಡ್ ಆಗಿ ವಾಪಸ್ ಆಗಲಿದೆ ಎಂದಿದೆ KSRTC. ಅಂದ ಹಾಗೆ ಈ ಯೋಜನೆಯ ಅಡಿಯಲ್ಲಿ ಪ್ರಯಾಣ ಉಚಿತ ಆಗಿದ್ದರೂ, ಇದಕ್ಕಾಗಿ 20 ರೂ ಸೇವಾ ಶುಲ್ಕವನ್ನು ವಿಧಿಸಿದೆ ಸರ್ಕಾರ.

ಇದನ್ನೂ ಓದಿ: Nalin Kumar kateel: ನಳೀನ್ ಕುಮಾರ್ ಕಟೀಲರ ಸವಣೂರು ಮನೆಯಲ್ಲಿ 9 ದಿನ ಗೌಪ್ಯ ಹೋಮ!! ಮನೆ, ಜಮೀನಿನ ದ್ವಾರಗಳು ಬಂದ್ !! ಕುತೂಹಲ ಸೃಷ್ಟಿಸಿದ ರಾಜ್ಯಾಧ್ಯಕ್ಷರ ರಹಸ್ಯ ನಡೆ!!

You may also like

Leave a Comment