Gruha Jyoti: ಈಗಾಗಲೇ ಕಾಂಗ್ರೆಸ್ ಸರ್ಕಾರದ ಗೃಹ ಜ್ಯೋತಿ ಉಚಿತ ವಿದ್ಯುತ್ ಯೋಜನೆಯ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜೂನ್ 21ರಂದು ಸಂಜೆ 7 ಗಂಟೆಯ ವೇಳೆಗೆ 12.51 ಲಕ್ಷ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ.
ಆರಂಭದಲ್ಲಿ ಗ್ರಾಹಕರು ಗೃಹ ಜ್ಯೋತಿ ಉಚಿತ ವಿದ್ಯುತ್ ಯೋಜನೆಯ ನೋಂದಣಿ ಮಾಡಿಕೊಳ್ಳಲು ಸರ್ವರ್ ಡೌನ್ ಸಮಸ್ಯೆ ಉಂಟಾಗಿತ್ತು. ನಂತರ ಸರ್ವರ್ ಸಮಸ್ಯೆಯನ್ನು ಸರಿ ಮಾಡಲು ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಸದ್ಯ ಗೃಹ ಜ್ಯೋತಿಗೆ (Gruha Jyoti) ನೋಂದಣಿ ಮಾಡಿಕೊಳ್ಳಲು ಹೊಸ ಲಿಂಕ್ ಬಿಡುಗಡೆ ಮಾಡಿದ್ದು, ನೋಂದಣಿ ಮಾಡುವ ವಿಧಾನ ಮೊದಲಿಗಿಂತ ತುಂಬಾ ಸರಳವಾಗಿದೆ.
ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಸುಲಭ ವಿಧಾನ ಇಲ್ಲಿದೆ :
https://sevasindhugs.karnataka.gov.in/ ಈ ವೆಬ್‌ಸೈಟ್‌ಗೆ ಮೊದಲು ಭೇಟಿ ನೀಡಿ ಅಲ್ಲಿ ಕಾಣಿಸುವ ಗೃಹಜ್ಯೋತಿ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ಹೊಸ ವಿಂಡೋ ತೆರೆಯಲಿದೆ.
ಹೊಸ ವಿಂಡೋದಲ್ಲಿ ಕ್ಯಾಪ್ಚಾ ವನ್ನು ನಮೂದಿಸಿ, ಒಪ್ಪಿಗೆ (Agree) ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ, ಹೊಸ ವಿಂಡೋ ತೆರೆಯುತ್ತದೆ. ಹೊಸ ವಿಂಡೋದಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಟೈಪ್ ಮಾಡಿ ನಂತರ Get Details ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ನಂತರ ಆಧಾರ್ ಮಾಹಿತಿ ಒಳಗೊಂಡ ವಿಂಡೋ ತೆರೆಯುತ್ತದೆ. ಅಲ್ಲಿ ನಿಮ್ಮ ವಿದ್ಯುತ್ ಬಿಲ್‌ನಲ್ಲಿರುವ ಗ್ರಾಹಕರ ಐಡಿಯನ್ನು ನಮೂದಿಸಿ, ನಂತರ ಬಾಡಿಗೆಯವರ, ಮಾಲೀಕರ ಎನ್ನುವುದನ್ನು ಆಯ್ಕೆ ಮಾಡಿ, ನಂತ್ರ ಸಂಪರ್ಕ ಸಂಖ್ಯೆಯನ್ನು ನಮೂದಿಸಿದರೆ, ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ, ಅದನ್ನು ನಮೂದಿಸಿ, ಕೆಳಗಡೆ ನೀಡಿರುವ ‘ಕ್ಯಾಪ್ಚಾ’ವನ್ನು ನಮೂದಿಸಿ Submitt ಬಟನ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಅರ್ಜಿ ಸ್ವೀಕರಿಸುವ ಮಾಹಿತಿ ಬರುತ್ತದೆ. ನಂತರ ಅರ್ಜಿಯನ್ನು ಡೌನ್ ಲೋಡ್ ಅಥವಾ ಪ್ರಿಂಟ್‌ಔಟ್ ತೆಗೆದು ಇರಿಸಿಕೊಳ್ಳಿ.
