Bus Ticket: ಇಂದಿನಿಂದ ಶಕ್ತಿ ಯೋಜನೆಯಡಿ (Shakti Scheme) ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು. ಸಿಎಂ ಸಿದ್ಧರಾಮಯ್ಯ ಅವರು ಇಂದು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ1 ರ ನಂತರ ರಾಜ್ಯದ ಉದ್ದಗಲಕ್ಕೆ ಕರ್ನಾಟಕ ಸಾರಿಗೆಯ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಉಚಿತ ಪ್ರಯಾಣದ ಉತ್ಸಾಹದಲ್ಲಿರುವ ಮಹಿಳೆಯರೇ ನಿಮ್ಮ ಉಚಿತ ಬಸ್ ಟಿಕೆಟ್(Bus ticket) ಹೇಗಿರುತ್ತೆ ಗೊತ್ತಾ?
ಕೆಎಸ್‌ಆರ್‌ಟಿಸಿ (KSRTC) ಫ್ರೀ ಬಸ್ ಪ್ರಯಾಣದ ಟಿಕೆಟ್ ಬಿಡುಗಡೆ ಮಾಡಿದೆ. ಎಲ್ಲರಿಗೂ ಗೊತ್ತಿರುವ ಹಾಗೆ ಸರ್ಕಾರಿ ಬಸ್ ಟಿಕೆಟ್ ಬಿಳಿ ಬಣ್ಣದಲ್ಲಿರುತ್ತದೆ. ಎಲ್ಲಿಂದ- ಎಲ್ಲಿಗೆ ಹೋಗಬೇಕು, ಶುಲ್ಕ ಇತ್ಯಾದಿ ಮಾಹಿತಿ ಇದರಲ್ಲಿ ಪ್ರಿಂಟ್ ಆಗಿರುತ್ತದೆ. ಆದರೆ, ಉಚಿತ ಬಸ್ ಪ್ರಯಾಣದ ಟಿಕೆಟ್ ವಿಭಿನ್ನವಾಗಿದೆ.
ಹೌದು, ಇದು ಬಳಿ ಬಣ್ಣದಲ್ಲಿಲ್ಲ. ಬದಲಾಗಿ ಟಿಕೆಟ್ ಪಿಂಕ್ ಬಣ್ಣದಿಂದ ಕೂಡಿದೆ. ಮಹಿಳೆಯರ ಪ್ರಯಾಣದ ವೇಳೆ ನಿರ್ವಾಹಕರು ಪಿಂಕ್ ಬಣ್ಣದ ಟಿಕೆಟ್ ನೀಡುತ್ತಾರೆ. ಟಿಕೆಟ್ ನಲ್ಲಿ ಶಕ್ತಿ ಯೋಜನೆಯಡಿ ಮಹಿಳಾ ಉಚಿತ ಟಿಕೆಟ್ ಎಂದು ನಮೂದಿಸಲಾಗಿದೆ. ಎಲ್ಲಿಂದ- ಎಲ್ಲಿಗೆ? ಮೊತ್ತ: 0 ರೂ. ಎಂದು ಟಿಕೆಟ್ ನಲ್ಲಿ ಮುದ್ರಿಸಲಾಗಿರುತ್ತದೆ.

ಸದ್ಯ ಹಲವು ಚರ್ಚೆಗಳ ಬಳಿಕ ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಟಿಕೆಟ್ ಜಾರಿಯಾಗಿದೆ. ಇಂದಿನಿಂದ ಆರಂಭವೂ ಆಗಲಿದೆ. ಆದರೆ, ಕೇವಲ ಸರ್ಕಾರಿ ಬಸ್ ಗಳಲ್ಲಿ ಮಾತ್ರ ಉಚಿತ ಟಿಕೆಟ್, ಖಾಸಗಿ ಬಸ್‍ಗಳಿಗೆ ಉಚಿತ ಪ್ರಯಾಣ ಸೇವೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದ್ದಾರೆ.
