Home » Murudeshwara Beach: ಮುರ್ಡೇಶ್ವರಗೆ ಭೇಟಿ ನೀಡಲಿದ್ದೀರಾ? ಹಾಗಾದರೆ ಬೀಚ್ ಗೆ ನೋ ಎಂಟ್ರಿ!

Murudeshwara Beach: ಮುರ್ಡೇಶ್ವರಗೆ ಭೇಟಿ ನೀಡಲಿದ್ದೀರಾ? ಹಾಗಾದರೆ ಬೀಚ್ ಗೆ ನೋ ಎಂಟ್ರಿ!

0 comments
Murudeshwar beach

Murudeshwar Beach: ಉತ್ತರ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಮುರ್ಡೇಶ್ವರಕ್ಕೆ (Murudeshwar Beach) ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಮುರ್ಡೇಶ್ವರದಲ್ಲಿ ಸುಂದರವಾದ ದೇಗುಲ, ವೈಭವೋಪೇತ ಶಿವನ ಮೂರ್ತಿ ಕೇಂದ್ರ ಬಿಂದುವಾಗಿದ್ದು, ಜನರು ಮುರುಡೇಶ್ವರ ಭೇಟಿಗೆ ಸದಾ ಉತ್ಸುಕರಾಗಿರುತ್ತಾರೆ.

ಆದರೆ, ಕಳೆದ ಮೂರು ದಿನಗಳಿಂದ ಇಲ್ಲಿ ಎರಡು ಸಾವುಗಳು ಸಂಭವಿಸಿದ ಹಿನ್ನೆಲೆ, ಈಗ ಕಡಲ ತೀರಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆದ್ದರಿಂದ ಪ್ರವಾಸಕ್ಕೆ ಹೋಗುವವರು ಇದನ್ನು ಗಮನಿಸಿದರೆ ಉತ್ತಮ.

ಹೌದು, ಕಳೆದ ಮೂರು ದಿನಗಳಲ್ಲಿ ಇಬ್ಬರು ಇಲ್ಲಿ ನೀರುಪಾಲಾಗಿದ್ದಾರೆ. ಕಲಘಟಗಿ ಮೂಲದ ಸಂತೋಷ ಹುಲಿಗೊಂಡ ಮತ್ತು ಬೆಂಗಳೂರಿನ ಪವನ ನಾಯ್ಕ ಮೃತರಾಗಿದ್ದಾರೆ.

ಮೂರು ದಿನದಲ್ಲಿ ಎರಡು ಸಾವುಗಳು ಸಂಭವಿಸಿದ ತಕ್ಷಣ ಅಲರ್ಟ್ ಆಗಿರುವ ಉತ್ತರ ಕನ್ನಡ ವಿದ್ಯುತ್ ನಿಯಂತ್ರಣಕ್ಕಾಗಿ ಬೀಚ್ ಪ್ರವೇಶವನ್ನು
ನಿರ್ಬಂಧಿಸಲಾಗಿದೆ.

ಅಲೆಗಳ ಅಬ್ಬರ ಜೋರಾಗಿರುವ ಕಾರಣ, ಕಡಲತೀರಕ್ಕೆ ಬ್ಯಾರಿಕೇಡ್ ಅಳವಡಿಕೆ ಮಾಡಲ್ಪಟ್ಟಿದೆ, ಬೀಚ್ ಪ್ರವೇಶಿಸುವ ಎರಡು ಪ್ರವೇಶದ್ವಾರಗಳನ್ನು ಬಂದ್ ಮಾಡಲಾಗಿದ್ದು, ನಿರ್ಬಂಧ ನಿರ್ಲಕ್ಷಿಸಿ ನೀರನ್ನು ನೀರಿಗಿಳಿಯುವವರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ: ಮೆಸ್ಕಾಂ ಕಚೇರಿಗೆ ಕಲ್ಲು ತೂರಾಟ ಮಾಡಿದ ಬಿಜೆಪಿ ಕಾರ್ಯಕರ್ತರು! ಪೊಲೀಸರಿಂದ ಕಾರ್ಯಕರ್ತರಿಗೆ ಲಾಠಿ ರುಚಿ!

You may also like

Leave a Comment