Shakti Guarantee : ನಮ್ಮರಾಜ್ಯದ ‘ ಶಕ್ತಿ ‘ವಂತ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ( Travel in Free Bus) ಕಾಯುತ್ತಿದ್ದಾರೆ. ಪ್ರಯಾಣಕ್ಕೆ ಹಲವು ಕಾರಣ ಇಟ್ಟುಕೊಂಡು ಈಗ ಬ್ಯಾಗ್ ಮತ್ತು ಲಗ್ಗೇಜ್ ಸರಿ ಪಡಿಸುತ್ತಿದ್ದಾರೆ. ಸದ್ಯಕ್ಕೆ ಪ್ರಯಾಣಕ್ಕೆ ಆಧಾರ್ ಇತ್ಯಾದಿ ದಾಖಲೆ ಸಾಕಾದ್ರೂ, ಮುಂದಕ್ಕೆ ಸರ್ಕಾರದಿಂದ ಉಚಿತವಾಗಿ ಸ್ಮಾರ್ಟ್ ಕಾರ್ಡ್ ( Smart Card ) ಪಡೆಯುವುದು ಅವಶ್ಯಕವಾಗಿದೆ.
ಆದರೆ. ಮಹಿಳೆಯರಿಗೆ ನೀಡುವ ಈ ಸ್ಮಾರ್ಟ್ ಕಾರ್ಡ್ ಮಹಿಳೆಯರ (Woman) ಗೌಪ್ಯತೆಗೆ ಸಮಸ್ಯೆ ಆಗುತ್ತದೆ ಎಂದು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಹೇಳಿದೆ. “ಮಹಿಳೆಯರಿಗೆ ವಿಶೇಷ ಬಣ್ಣದ ಟಿಕೆಟ್ (Pink Ticket) ನೀಡಲಿ, ಆದ್ರೆ ಸ್ಮಾರ್ಟ್ ಕಾರ್ಡ್ ಅವಶ್ಯಕತೆ ಇಲ್ಲ. ಸ್ಮಾರ್ಟ್ ಕಾರ್ಡ್ನಿಂದ ಮಹಿಳೆಯರಿಗೆ ಗೌಪ್ಯತೆಯ ಸಮಸ್ಯೆ ಆಗುತ್ತದೆ. ಮಹಿಳೆಯರು ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುತ್ತಾರೆ ಅನ್ನೋ ಫುಲ್ ಡಿಟೇಲ್ಸ್. ಸ್ಮಾರ್ಟ್ ಕಾರ್ಡ್ ನಿಂದ ಸಿಗುತ್ತದೆ. ಹಾಗಾಗಿ ಇದನ್ನು ಕೈ ಬಿಟ್ಟು, ಬೇರೆ ರಾಜ್ಯದ ಮಹಿಳೆಯರಿಗೂ ಉಚಿತ ಪ್ರಯಾಣಕ್ಕೆ (Shakti Guarantee) ಅವಕಾಶ ಕೊಡಬೇಕು ” ಎಂದು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಹೇಳಿದೆ.
ಈ ಸಂಬಂಧ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯು ನಿನ್ನೆ (ಜೂನ್ 07) ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರನ್ನು ಭೇಟಿ ಮಾಡಿತ್ತು. ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುತ್ತಿರುವುದು ತುಂಬಾ ಒಳ್ಳೆಯ ವಿಚಾರ. ಇದರಿಂದ ರಾಜ್ಯದ ಎಲ್ಲಾ, ಮುಖ್ಯವಾಗಿ ಬಡ ಮಹಿಳೆಯರಿಗೆ ಒಳ್ಳೆಯದಾಗುತ್ತದೆ. ಆದರೆ ಸ್ಮಾರ್ಟ್ ಕಾರ್ಡ್ ತೆಗೆದುಕೊಳ್ಳಬೇಕು ಮತ್ತು ಕರ್ನಾಟಕ ಮಹಿಳೆಯರಿಗೆ ಮಾತ್ರ ಅವಕಾಶ ಅನ್ನಿತ್ತಿದ್ದೀರಿ, ಇದು ಸರಿಯಲ್ಲ. ಇದರಿಂದ ಮಹಿಳೆಯರ ಖಾಸಗಿ ಜೀವನಕ್ಕೆ ತುಂಬಾ ತೊಂದರೆ ಆಗುತ್ತದೆ’ ಎಂದು ಅದು ಹೇಳಿದೆ.
ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಸರ್ಕಾರದ ಮುಂದಿಟ್ಟ ಆಗ್ರಹಗಳು ಯಾವುವು?
1. ಸ್ಮಾರ್ಟ್ಕಾರ್ಡ್ಗಾಗಿ ಸೇವಾಸಿಂಧುನಲ್ಲಿ ಅಪ್ಲಿಕೇಶನ್ ಹಾಕಬೇಕು ಅಂತ ಮಾರ್ಗಸೂಚಿ ಬಂದಿದೆ. ಎಷ್ಟು ಮಹಿಳೆಯರಿಗೆ ಆನ್ಲೈನ್ ಮೂಲಕ ಅಪ್ಲಿಕೇಶನ್ ಹಾಕಲು ಬರುತ್ತದೆ ? ಬೆಂಗಳೂರು ಓನ್ ಮೂಲಕ ಎಷ್ಟು ಜನರಿಗೆ ಕಾರ್ಡ್ ಅರ್ಜಿ ಹಾಕಲು ಸಾಧ್ಯ ಆಗುತ್ತದೆ. ಮಹಿಳೆಯರು ಅಷ್ಟರಮಟ್ಟಿಗೆ ಪರಿಣಿತರಾ ?
2. ಒಂದೂವರೆ ಕೋಟಿ ಸ್ಮಾರ್ಟ್ ಕಾರ್ಡ್ ಅನ್ನು ಮೂರು ತಿಂಗಳಿನಲ್ಲಿ ಬಟವಾಡೆ ಮಾಡಲು ಆಗುತ್ತಾ ?
3. ಕೂಲಿ ಕೆಲಸ ಮಾಡುವ ಮಹಿಳೆಯರು, ಮನೆ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಇದು ಸಾಧ್ಯವಾ? ಎಂದು ವೇದಿಕೆ ಪ್ರಶ್ನಿಸಿದೆ.
4.ರಾಜ್ಯದಲ್ಲಿ ಸಾಕಷ್ಟು ವಲಸೆ ಕಾರ್ಮಿಕರು ಹೊರ ರಾಜ್ಯಗಳಿಂದ ಹೊಂದಿದ್ದಾರೆ ಅವರು ಬೆಂಗಳೂರು ನಗರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. ಅವರೆಲ್ಲ ದಿನನಿತ್ಯ ದುಡಿದು ತಿನ್ನುತ್ತಿರುವ ವರ್ಗ. ಅವರು ಯಾಕೆ ಈ ಯೋಜನೆಯಿಂದ ವಂಚಿತರಾಗಬೇಕು? ಹೀಗೆ ನಾಲ್ಕು ಪ್ರಮುಖ ಪ್ರಶ್ನೆಗಳನ್ನು ಸರ್ಕಾರದ ಮುಂದೆ ಇಟ್ಟಿದೆ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ.
ಈ ರೂಲ್ಸ್ ಕೈಬಿಡಬೇಕೆಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಎದುರು ವಿವರಿಸಿ ಮನವಿ ಮಾಡಲಾಗಿದ್ದು. ಸಚಿವರು ಕೂಡಾ ಪೂರಕವಾಗಿ ಸ್ಪಂದಿಸಿ ಈ ಬಗ್ಗೆ ಚರ್ಚೆ ಮಾಡೋಣ ಎಂದಿದ್ದಾರೆ ಎನ್ನಲಾಗಿದೆ. ಸ್ಮಾರ್ಟ್ ಕಾರ್ಡ್ ನೀಡಿಕೆ ಮತ್ತು ಇತರ ರಾಜ್ಯದ ಬೆಂಗಳೂರು ವಾಸಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಇರುವ ಇತರ ಅನಗತ್ಯ ರೂಲ್ಸ್ ಕೈ ಬಿಡುತ್ತಾ ಈ ಸರ್ಕಾರ ಎನ್ನೊದನ್ನು ನಾವು ಕಾದು ನೋಡಬೇಕಿದೆ.
ಇದನ್ನೂ ಓದಿ: ಕರ್ನಾಟಕದ ಜನತೆಗೆ ತಟ್ಟಲಿದ್ಯಾ ಬೆಲೆ ಏರಿಕೆ ಬಿಸಿ..! ರಾಜ್ಯದಲ್ಲಿ ಹಾಲಿನ ಬೆಲೆ 5 ರೂ. ಹೆಚ್ಚಳ..!
